Chitta Rain 2024 Weather Forecast : ಚಿತ್ತ ಮಳೆ ಭೋರ್ಗತಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಕಳೆದ ಅಕ್ಟೋಬರ್ 10ನೇ ತಾರೀಖಿನಿಂದ ಆರಂಭವಾಗಿರುವ ಚಿತ್ತ ಮಳೆ (Chitta Rain 2024) ನಕ್ಷತ್ರ ಅಕ್ಟೋಬರ್ 23ರ ವರೆಗೂ ಇರಲಿದ್ದು; ಗುಡುಗು-ಸಿಡಿಲಿನಬ್ಬರದ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಕಳೆದ ಎರಡ್ಮೂರು ದಿನಗಳಿಂದ ರಾಜ್ಯಾದ್ಯಂತ ಸಂಜೆ ಮತ್ತು ರಾತ್ರಿ ವೇಳೆಗೆ ಜೋರು ಮಳೆಯಾಗುತ್ತಿದ್ದು; ಮುಂದಿನ ಅಕ್ಟೋಬರ್ 16ರ ವರೆಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೆಚ್ಚಿನ ಮಳೆಯಾಗುವ ಸಾಧ್ಯತೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದು ಭಾರೀ ಮಳೆಗೆ ಕಾರಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ?
ನಿನ್ನೆ ಅಕ್ಟೋಬರ್ 12ರಿಂದ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅಕ್ಟೋಬರ್ 16ರ ವರೆಗೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಇದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಲಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಅಕ್ಟೋಬರ್ 15 ಮತ್ತು 16ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಭರ್ಜರಿ ಮಳೆಯಾಲಿದೆ. ಅದರಲ್ಲೂ ಈ ಕೆಳಕಂಡ ಜಿಲ್ಲೆಗಳಿಗೆ ವ್ಯಾಪಕ ಮಳೆಯಾಗಲಿದ್ದು; ಆ ಎರಡು ದಿನ ಯೆಲ್ಲೊ ಅಲರ್ಟ್ ಘೋಷಿಸಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
- ತುಮಕೂರು
- ಚಿಕ್ಕಬಳ್ಳಾಪುರ
- ಕೋಲಾರ
- ಬೆಂಗಳೂರು ನಗರ
- ರಾಮನಗರ
- ಮಂಡ್ಯ
- ಮೈಸೂರು
- ಚಾಮರಾಜನಗರ
ಚಿತ್ತ ನಂತರ ಸ್ವಾತಿ ಮಳೆ ಹೇಗಿರಲಿದೆ?
ಅಕ್ಟೋಬರ್ 10ರಿಂದ ಆರಂಭವಾಗಿರುವ ಚಿತ್ತ ಮಳೆ ಉತ್ತಮ ಮಳೆಯಾಗಲಿದ್ದು; ಅಕ್ಟೋಬರ್ 23ಕ್ಕೆ ಮುಕ್ತಾಯವಾಗಿ ಅದೇ ದಿನ ಸ್ವಾತಿ ಮಳೆ ಆರಂಭವಾಗುತ್ತದೆ. ಆನಂತರ ಅಕ್ಟೋಬರ್ 06ಕ್ಕೆ ಈ ವರ್ಷದ ಕೊನೆಯ ಮಳೆ ವಿಶಾಖ ಮಳೆ ಆರಂಭವಾಗಲಿದೆ. ಈ ಎರಡೂ ಮಳೆಗಳು ಸಾಮಾನ್ಯ ಮಳೆಯಾಗಲಿವೆ ಎಂದು ಪಂಚಾಂಗದಲ್ಲಿ ದಾಖಲಿಸಲಾಗಿದೆ.