News

ಚಂಡಮಾರುತ ಎಫೆಕ್ಟ್ | ಕರ್ನಾಟಕದ ಈ ಜಿಲ್ಲೆಗಳಲ್ಲಿ ಮತ್ತೆ ಮೂರು ದಿನ ಭಾರೀ ಮಳೆ ಆರ್ಭಟ Cyclone Effect Heavy Rain in Karnataka

WhatsApp Group Join Now
Telegram Group Join Now

Cyclone Effect Heavy Rain in Karnataka : ರಾಜಧಾನಿ ಬೆಂಗಳೂರು (Bangalore Rain) ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು, ಹಲವು ಕಡೆಗಳಲ್ಲಿ ಭಾರಿ ಅನಾಹುತ ಸೃಷ್ಟಿಸಿದೆ. ಮಳೆಯ ಆರ್ಭಟಕ್ಕೆ ಕಟಾವು ಹಂತದಲ್ಲಿದ್ದ ಸಾವಿರಾರು ಎಕರೆ ಬೆಳೆ ನಾಶವಾಗಿದ್ದು (Crop destruction), ರೈತರು ಕಂಗಾಲಾಗಿದ್ದಾರೆ. ಶಾಲೆ, ಮನೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ.

ಚಂಡಮಾರುತ (Storm) ಮತ್ತು ವಾಯುಭಾರ ಕುಸಿತದ (Air pressure drop) ಪರಿಣಾಮವಾಗಿ ಸಾಮಾನ್ಯ ಮಳೆಯಾಗಬೇಕಿದ್ದ ‘ಚಿತ್ತ ಮಳೆ’ (Chitta Rain) ಈ ವರ್ಷ ಭಯಂಕರ ಮಳೆಯಾಗಿ ರೂಪಗೊಂಡಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು 141.5 ಮಿಲಿ ಮೀಟರ್ ಮಳೆಯಾಗಿದೆ. ಉಡುಪಿಯಲ್ಲಿ 137, ರಾಮನಗರ, ಶಿವಮೊಗ್ಗದಲ್ಲಿ 112 ಮಿಲಿ ಮೀಟರ್ ಮಳೆಯಾಗಿದೆ.

Cyclone Effect Heavy Rain in Karnataka

ಇನ್ನೂ ಮೂರು ದಿನ ಮಳೆ

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನಾಲ್ಕು ದಿನ, ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿಯ ಮೂರೂ ಜಿಲ್ಲೆಗಳು, ಉತ್ತರ ಒಳನಾಡಿನ ನಾಲ್ಕು ಜಿಲ್ಲೆಗಳು ಹಾಗೂ ಬೆಂಗಳೂರು ಸೇರಿ ಒಟ್ಟು 17 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಗೆ ಅಕ್ಟೋಬರ್ 22 ಮತ್ತು 23ಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ದಾನಾ ಚಂಡಮಾರುತ

ಈ ನಡುವೆ ನಿನ್ನೆ ಅಕ್ಟೋಬರ್ 20ರ ಭಾನುವಾರ ಮಧ್ಯಾಹ್ನ ಹೊರಬಿದ್ದ ಮುನ್ಸೂಚನೆಯಂತೆ ಮಧ್ಯ ಅಂಡಮಾನ್ ಸಮುದ್ರದಲ್ಲಿ ದಾನಾ ಹೆಸರಿನ ಚಂಡಮಾರುತ ರೂಪುಗೊಳ್ಳುತ್ತಿದ್ದು, ಬುಧವಾರದ ಹೊತ್ತಿಗೆ ಇದು ವೇಗ ಪಡೆದುಕೊಂಡು ಬಂಗಾಳ ಕೊಲ್ಲಿಯನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸೋಮವಾರ ಮತ್ತು ಮಂಗಳವಾರ ಮಾರುತವು ಗಂಟೆಗೆ 35 ಕಿಲೋ ಮೀಟರ್‌ನಿಂದ 55 ಕಿಲೋ ಮೀಟರ್‌ಗೆ ಏರಲಿದೆ. ಬುಧವಾರದ ಹೊತ್ತಿಗೆ 80-85 ಕಿ.ಮೀ ಯಿಂದ 110 ಕಿ.ಮೀ ವೇಗವನ್ನು ತಲುಪಬಹುದು. ಚಂಡಮಾರುತದಿಂದ ಹೆಚ್ಚಿನ ಹಾನಿಯಾಗದಿದ್ದರೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now

Related Posts