Gold Price Jump : ಚಿನ್ನದ ಬೆಲೆ ಜಿಗಿತ ಮುಂದುವರೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ (Global market) ಭಾರೀ ಒತ್ತಡದ ನಡುವೆ ಈ ಹಳದಿ ಲೋಹ ದಿನೇ ದಿನೆ ಹೊಳಪು ಪಡೆಯುತ್ತಿದೆ. ಡಾಲರ್ (Dollar) ಎದುರು ರೂಪಾಯಿ ದುರ್ಬಲಗೊಳ್ಳುತ್ತಿರುವುದು, ಅಮೆರಿಕಾದ ಚುನಾವಣೆ (American election) ಸಮೀಪಿಸುತ್ತಿರುವುದು, ಇಸ್ರೇಲ್ ಇರಾನ್ ಯುದ್ಧ ವಾತಾವರಣದ ಪರಿಣಾಮ ಚಿನ್ನದ ರೇಟು ಹಂತ ಹಂತವಾಗಿ ಏರುತ್ತಲೇ ಇದೆ.
32 ರೂ. ದಿಂದ ಲಕ್ಷದ ಗಡಿಯತ್ತ
ದೇಶದಲ್ಲಿ ಕಾಲಮಾನಕ್ಕೆ ತಕ್ಕಂತೆ ಇತರ ವಸ್ತುಗಳ ಬೆಲೆಯಂತೆ ಚಿನ್ನದ ಬೆಲೆ ಕೂಡ ಗಣನೀಯ ಏರಿಕೆ ಕಾಣುತ್ತ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ 1947ರಲ್ಲಿ 24 ಕ್ಯಾರೆಟ್ನ 10 ಗ್ರಾಂ ಶುದ್ಧ ಚಿನ್ನದ ಬೆಲೆ ಬರೀ 32 ರೂ. ಇತ್ತು. ಅಲ್ಲಿಂದ ಏರುಗತಿಯಲ್ಲಿ ಬಂದ ಬಂಗಾರದ ಧಾರಣೆ 1984ರಲ್ಲಿ 1,970 ರೂಪಾಯಿಗೆ ಬಂದು ತಲುಪಿತ್ತು.
ಈಚೆಗೆ 90ರ ದಶಕದ ನಂತರ ಬಂಗಾರದ ಬೆಲೆ ಏರಿಕೆ ಶರವೇಗ ಪಡೆದಿದ್ದು; 1990ರಲ್ಲಿ 10 ಗ್ರಾಂ ಚಿನ್ನದ ಬೆಲೆ ಅನಾಮತ್ತು 42,97.63 ರೂ. ಗೆ ಏರಿತ್ತು. ಬಳಿಕ 2005ರಲ್ಲಿ ಈ ಬೆಲೆ 69,000.56 ರೂ. ಜಿಗಿಯಿತು. 2024ರ ಅಕ್ಟೋಬರ್’ನಲ್ಲಿ ಬರೋಬ್ಬರಿ 79,350 ರೂ.ಗೆ ತಲುಪಿ ಇದೀಗ ಒಂದು ಲಕ್ಷ ರೂಪಾಯಿ ಗಡಿ ದಾಟಲು ಹವಣಿಸುತ್ತಿದೆ.
ಹೊಸ ವರ್ಷಕ್ಕೆ ಗರಿಷ್ಟ ಏರಿಕೆ
2025ರ ಹೊಸ ವರ್ಷದ ಆರಂಭಕ್ಕೆ ಚಿನ್ನದ ಧಾರಣೆ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಈಚೆಗೆ ಗ್ರಾಮೀಣ ಭಾಗದ ಜನರ ಆದಾಯ ಮತ್ತು ವೆಚ್ಚದಲ್ಲಿ ಏರಿಕೆಯಾಗಿರುವುದರಿಂದ ಹೆಚ್ಚಿನ ಚಿನ್ನ ಖರೀದಿಗೆ ಮುಂದಾಗಿದ್ದಾರೆ. ಇತ್ತ ಮೇಲ್ಮಧ್ಯಮ ವರ್ಗದವರು ‘ಸುರಕ್ಷಿತ ಹೂಡಿಕೆ’ (Safe Investment Gold) ಎಂದು ಚಿನ್ನದ ಕಡೆ ಮುಖ ಮಾಡಿರುವುದು ಬಂಗಾರದ ಬೆಲೆಯನ್ನು ನಿರಂತರ ಏರುಮುಖಿಯನ್ನಾಗಿಸಿದೆ.
ರಷ್ಯಾ-ಯೂಕ್ರೇನ್ ಯುದ್ಧದ ನಂತರ ಜಗತ್ತಿನ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳು ಚಿನ್ನದ ಖರೀದಿಯನ್ನು ತೀವ್ರಗೊಳಿಸಿದ್ದು; ಈ ವಹಿವಾಟು ಈಗಲೂ ಮುಂದುವರಿದೆ. ಜೊತೆಗೆ ಅಮೆರಿಕದ ಫೆಡರಲ್ ರಿಸರ್ವ್ನ (US Federal Reserve) ಬಡ್ಡಿದರ ಕಡಿತವಾಗಿರುವ ಕಾರಣ ಚಿಲ್ಲರೆ ಹೂಡಿಕೆದಾರರು ಮತ್ತು ಸಾಂಸ್ಥಿಕ ಹೂಡಿಕೆದಾರರು ಚಿನ್ನ ಖರೀದಿಗೆ ಗಮನ ಹರಿಸಿದ್ದಾರೆ. ವಾಣಿಜ್ಯ ಸಮರ, ಜಾಗತಿಕ ಬಿಕ್ಕಟ್ಟುಗಳು ಕೂಡ ಚಿನ್ನದ ದರ ಏರಿಕೆ ಮೇಲೆ ಬೀರಿವೆ.
ಎಲ್ಲೆಲ್ಲಿ ಎಷ್ಟೆಷ್ಟು ಧಾರಣೆ?
ನಿನ್ನೆ ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 80,290 ರೂಪಾಯಿ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಚಿನ್ನದ ಬೆಲೆ 80,290 ರೂಪಾಯಿನಷ್ಟಿದೆ. ಉಳಿದಂತೆ ಭಾರತದ ಇತರ ಪ್ರಮುಖ ಮಹಾನಗರಗಳಲ್ಲ್ಲಿ 24 ಕ್ಯಾರೆಟ್ 10 ಗ್ರಾಂ ಶುದ್ಧ ಚಿನ್ನದ ಬೆಲೆ ಈ ಕೆಳಗಿನಂತಿದೆ:
- ನಾಗ್ಪುರ : 80,290 ರೂ.
- ಮುಂಬೈ : 80,290 ರೂ.
- ಚೆನ್ನೈ : 80,290 ರೂ.
- ಕೋಲ್ಕತ್ತಾ : 80,290 ರೂ.
- ಪಾಟ್ನಾ : 80,340 ರೂ.
- ಸೂರತ್ : 80,340 ರೂ.
- ಚಂಡೀಗಢ : 80,440 ರೂ.
- ಲಕ್ನೋ : 80,440 ರೂ.