ಮೊಬೈಲ್’ನಲ್ಲಿ ಹಣ ಕಳಿಸುವಾಗ ಮರೆಯದೇ ಈ ಎಚ್ಚರಿಕೆ ಪಾಲಿಸಿ | ಗೂಗಲ್‌ಪೇ ನೀಡಿದ ಎಚ್ಚರಿಕೆ ಸಂದೇಶಗಳು Google Pay scam alert

WhatsApp
Telegram
Facebook
Twitter
LinkedIn

Google Pay scam alert : ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳಿಂದ ಸುರಕ್ಷಿತವಾಗಿರಲು ಮೊಬೈಲ್’ನಲ್ಲಿ ಹಣ ಕಳಿಸುವಾಗ ಪಾಲಿಸಬೇಕಾದ ಎಚ್ಚರಿಕೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ. ದೇಶದಲ್ಲಿ ಉಂಟಾದ ಯುಪಿಐ ಕ್ರಾಂತಿಯ ಬಳಿಕ ಗೂಗಲ್ ಪೇ (Google pay), ಫೋನ್ ಪೇ (PhonPe) ಮತ್ತು ಪೇಟಿಎಂ (paytm) ನಂತಹ ಆನ್‌ಲೈನ್ ಹಣ ವರ್ಗಾವಣೆ ಮಾಡುವ ಅಪ್ಲಿಕೇಶನ್’ಗಳ ಬಳಕೆ ಹೆಚ್ಚಾಗುತ್ತಲೇ ಇದೆ.

ಗೂಗಲ್ ಪೇ ಮತ್ತು ಫೋನ್ ಪೇ ಯುಪಿಐ ಆ್ಯಪ್’ಗಳು ಹೆಚ್ಚು ಬಳಕೆಯಾಗುತ್ತಿದೆ. ಇವುಗಳ ಬಳಕೆ ಹೆಚ್ಚಾದಂತೆ ಹಣ ದೋಚುವ ವಂಚನೆಗಾರ ಹಾವಳಿಯೂ ಹೆಚ್ಚಾಗುತ್ತಿದೆ. ಯುಪಿಐ ಅಪ್ಲಿಕೇಶನ್‌ಗಳ ಸಂಸ್ಥೆಗಳು ಎಷ್ಟೇ ಭದ್ರತೆ ಒದಗಿಸಿದರು ಕೂಡ ಬಳಕೆದಾರರು ಸಣ್ಣ ಸಣ್ಣ ತಪ್ಪುಗಳಿಂದ ಹಣ ಕಳೆದುಕೊಳ್ಳುತ್ತಿದ್ದಾರೆ.

ಯುಪಿಐ ಟಾಪ್ 5 ಕಂಪನಿಗಳಲ್ಲಿ ಒಂದಾದ ಗೂಗಲ್ ಪೇ ಕಂಪನಿಯು ಹೆಚ್ಚುತ್ತಿರುವ ಆನ್‌ಲೈನ್ ಹಣ ವಂಚನೆ ಕುರಿತು ತನ್ನ ಬಳಕೆದಾರರಿಗೆ ಇಂತಹ ವಂಚನೆಗಳಿಂದ ಸುರಕ್ಷಿತವಾಗಿರಲು (Safety) ಮತ್ತು ಗೂಗಲ್ ಪೇ ಆ್ಯಪ್ ಅನ್ನು ಬಳಸುವಾಗ ಏನೆಲ್ಲಾ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು (Guidance) ನೀಡಿದೆ.

ಎಚ್ಚರಿಕೆ 1 : ಗೂಗಲ್ ಪೇ ಆ್ಯಪ್ (Google pay) ಬಳಸುವಾಗ ಯಾವುದೇ ಕಾರಣಕ್ಕೂ ಸ್ಕ್ರೀನ್ ಷೇರಿಂಗ್ ಆ್ಯಪ್’ಗಳನ್ನು ಬಳಸಬೇಡಿ. ಸ್ಕ್ರೀನ್ ಶೇರಿಂಗ್ ಆ್ಯಪ್’ಗಳಾದ Any desk app, Team viewer app, Screen recorder App ಮುಂತಾದ ಆ್ಯಪ್’ಗಳನ್ನು ಗೂಗಲ್ ಪೇ ಇಂದ ಹಣ ವರ್ಗಾವಣೆ ಮಾಡುವ ಸಮಯದಲ್ಲಿ ಬಳಸಬೇಡಿ.

ಎಚ್ಚರಿಕೆ 2 : ಅನಾಮಿಕ ವ್ಯಕ್ತಿಯೊಂದಿಗೆ, ದೂರದ ಸ್ನೇಹಿತರೊಂದಿಗೆ ಅಥವಾ ಇತರೆ ಅಪರಿಚಿತರೊಂದಿಗೆ ವಾಟ್ಸಾಪ್ ವಿಡಿಯೋ ಕಾಲಿಂಗ್ ಮಾಡುವಾಗ ಇತ್ತೀಚಿಗೆ ಬಿಡುಗಡೆಯಾದ ಹೊಸ ಫ್ಯೂಚರ್ ವಾಟ್ಸಾಪ್ ಸ್ಕ್ರೀನ್ ಶೇರಿಂಗ್ ಆಯ್ಕೆಯನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಏಕೆಂದರೆ ವಂಚಕರು ನೀವು ಸ್ಕ್ರೀನ್ ಶೇರ್ ಮಾಡಿದಾಗ ನಿಮ್ಮ ನಂಬರ್’ಗೆ ಬರುವ ಓಟಿಪಿ ಅಥವಾ ಇತರೆ ನಿಮ್ಮ ಪಾಸ್’ವರ್ಡ್’ಗಳನ್ನು ಕದ್ದು ಸುಲಭವಾಗಿ ನಿಮಗೆ ಮೋಸ ಮಾಡಬಹುದಾಗಿದೆ.

Google Pay scam alert

ಎಚ್ಚರಿಕೆ 3 : ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೂ ಕೂಡಾ ಗೂಗಲ್ ಪೇ ಸಂಸ್ಥೆಯು ಕೆಲವು ಎಚ್ಚರಿಕೆ ಸಂದೇಶಗಳನ್ನು ನೀಡಿದೆ. ಆಫೀಸ್ ಸಮಯದಲ್ಲಿ ಏನಾದರು ತೊಂದರೆಯಾದಾಗ ಕಂಪನಿಯು ರಿಮೋಟ್ ಕಂಟ್ರೋಲ್ ತೆಗೆದುಕೊಳ್ಳಲು ಸ್ಕ್ರೀನ್ ಹಂಚಿಕೆಯ ಅಪ್ಲಿಕೇಶನ್’ಗಳನ್ನು ಬಳಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಗೂಗಲ್ ಪೇ ಅಥವಾ ಇತರೆ ಯುಪಿಐ ಆ್ಯಪ್’ಗಳನ್ನು ಬಳಸಬಾರದು. ಏಕೆಂದರೆ ಹಲವು ಕಂಪನಿಗಳು ಲಾಭವನ್ನು ಪಡೆದುಕೊಂಡು ಮೋಸ ಮಾಡುವ ಸಾಧ್ಯತೆ ಹೆಚ್ಚಿವೆ.

ಎಚ್ಚರಿಕೆ 4 : ಆನ್‌ಲೈನ್ ಮೂಲಕ ಹಣ ವರ್ಗಾವಣೆ (Online money transaction) ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಇತರೆ ಥರ್ಡ್ ಪಾರ್ಟಿ ಆ್ಯಪ್’ಗಳನ್ನು ಡೌನ್ಲೋಡ್ ಮಾಡಿಕೊಳಬೇಡಿ. ಈಗಾಗಲೇ ಇಂತಹ ಆ್ಯಪ್’ಗಳನ್ನು ಡೌನ್ಲೋಡ್ ಅಥವಾ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ, ಗೂಗಲ್ ಪೇ ಆ್ಯಪ್ ಅಥವಾ ಇತರೆ ಯುಪಿಐ ಆ್ಯಪ್’ಗಳನ್ನು ಬಳಸುವಾಗ ಸ್ಕ್ರೀನ್ ಶೇರಿಂಗ್ ಕ್ಲೋಸ್ (Close screen sharing) ಆಗಿದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಂಡು ನಂತರ ಹಣ ವರ್ಗಾವಣೆ ಮಾಡಿ. ನಿಮಗೆ ಸ್ಕ್ರೀನ್ ಶೇರಿಂಗ್ ಆ್ಯಪ್’ಗಳು ಉಪಯೋಗವಿಲ್ಲದಿದ್ದರೆ ತಡ ಮಾಡದೆ ಅವುಗಳನ್ನು ನಿಮ್ಮ ಮೊಬೈಲ್’ನಿಂದ ಡಿಲೀಟ್ ಮಾಡಲು ಗೂಗಲ್ ಪೇ ಸೂಚಿಸಿದೆ.

ಎಚ್ಚರಿಕೆ 5 : ಇವುಗಳನ್ನು ಹೊರತುಪಡಿಸಿ ನಿಮ್ಮ ವಾಟ್ಸಪ್ ನಂಬರ್’ಗೆ ಯಾರಾದರೂ ಆಫರ್, ಸ್ಕ್ರಾಚ್ ಕಾರ್ಡ್ ಅಥವಾ ಇತರೆ ಉಡುಗೊರೆಗಳಿಗಾಗಿ ಲಿಂಕ್ ಕಳಿಸಿದರೆ ಯಾವುದೇ ಕಾರಣಕ್ಕೂ ಅಂತಹ ಲಿಂಕ್’ಗಳ ಮೇಲೆ ಕ್ಲಿಕ್ ಮಾಡಬೇಡಿ. ತಕ್ಷಣವೇ ಅಂತಹ ನಂಬರ್’ಗಳನ್ನು ಬ್ಲಾಕ್ ಮಾಡಿ. ಏಕೆಂದರೆ ಇವುಗಳು ಸ್ಕ್ಯಾಮರ್ಸ್’ಗಳ (Scammers / Hackers / Frauds) ಹಣ ದೋಚುವ ಮಾರ್ಗಗಳಾಗಿರುತ್ತವೆ.

ಗೂಗಲ್ ಪೇ ಆ್ಯಪ್ AI (Artificial intelligence) ಉಪಯೋಗಿಸಿ ಗೂಗಲ್ ಪೇ ಬಳಕೆದಾರರಿಗೆ ಹಲವಾರು ಭದ್ರತೆಗಳನ್ನು ಒದಿಸುತ್ತಿದೆ. ಆದರೆ ಬಳಕೆದಾರರು ಸಣ್ಣ ಸಣ್ಣ ತಪ್ಪುಗಳಿಂದ ಅಥವಾ ಅಲಕ್ಷ್ಯದಿಂದ ಮೋಸ ಹೋಗುತ್ತಿದ್ದಾರೆ. ಹೀಗಾಗಿ ಈ ಮೇಲಿನ ಸಲಹೆಗಳನ್ನು ತಿಳಿದುಕೊಂಡು ಗೂಗಲ್ ಪೇ ಅಪ್ಲಿಕೇಶನ್ ಬಳಸುವಾಗ ಎಚ್ಚರದಿಂದ ಇದ್ದರೆ ಮೋಸಗಾರರಿಂದ ಅಥವಾ ವಂಚನೆಯಿಂದ ತಪ್ಪಿಸಿಕೊಳ್ಳಬಹುದು ಮತ್ತು ಸುರಕ್ಷಿತವಾಗಿರಬಹುದು.

Samagra Krushi   About Us
Samagra Krushi samagrakrushi.com - Comprehensive Kannada website for govt scheme, education, jobs information Read More
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon