ಬ್ಯಾಂಕುಗಳಲ್ಲಿ ಸಾಲ ಪಡೆದ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್ | ಈ ಪಟ್ಟಿಯಲ್ಲಿ ನೀವೂ ಇದ್ದೀರಾ ಚೆಕ್ ಮಾಡಿ… Gruha Lakshmi Money freeze for GST payers

Spread the love

Gruha Lakshmi Money freeze for GST payers : ಗೃಹಲಕ್ಷ್ಮಿ ಯೋಜನೆಯಡಿ ಈ ತನಕ ಮಾಸಿಕ 2,000 ರೂಪಾಯಿ ಪ್ರೋತ್ಸಾಹಧನ ಪಡೆಯುತ್ತಿದ್ದ ಸಾವಿರಾರು ಮಹಿಳೆಯರಿಗೆ ಏಕಾಏಕಿ ಹಣ ಬಂದ್ ಆಗಿದೆ. ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಎರಡು ತಿಂಗಳ ಹಣವನ್ನು ಸರ್ಕಾರ ಈಚೆಗೆ ಫಲಾನುಭವಿ ಮಹಿಳೆಯರ (Beneficiary womens) ಖಾತೆಗೆ ಜಮಾ ಮಾಡಿದೆ. ಆದರೆ ಅನೇಕ ಮಹಿಳೆಯರ ಖಾತೆಗೆ ಹಣ ಬಂದಿಲ್ಲ.

WhatsApp Group Join Now
Telegram Group Join Now

ಇಷ್ಟು ದಿನ ಬರುತ್ತಿದ್ದ ಹಣ ಇದ್ದಕ್ಕಿದ್ದಂತೆ ನಿಂತಿದ್ದೇಕೆ? ಎಂದು ತಡಕಾಡಿದ ಮಹಿಳೆಯರಿಗೆ ಇದೀಗ ಅಸಲಿ ಕಾರಣ ಗೊತ್ತಾಗಿದೆ. ಕುಟುಂಬದಲ್ಲಿ ಮಗ ಅಥವಾ ಪತಿ ಹಣಕಾಸು ಸಂಸ್ಥೆಗಳು ಅಥವಾ ಬ್ಯಾಂಕುಗಳಿ೦ದ ಸಾಲ (Loans from banks) ಪಡೆದಿದ್ದೇ ಈ ಮಹಿಳೆಯರಿಗೆ ಹಣ ಬಂದ್ ಆಗಲಿ ಕಾರಣವಾಗಿದೆ.

ಇದನ್ನೂ ಓದಿ: ಪರ್ಸನಲ್ ಲೋನ್ ಪಡೆಯುವ ಮುನ್ನ ಈ ಮಹತ್ವದ ಮಾಹಿತಿ ತಿಳಿದಿರಿ… Personal Loan Important Information

ಏನಿದು ‘ಸಾಲ’ದ ಋಣಭಾರ?

ಇಂದು ಬಹುತೇಕರಿಗೆ ಸಾಲ ಮಾಡದೇ ಬದುಕುವುದು ದುಸ್ತರವಾಗಿದೆ. ಹಳ್ಳಿಗಳಿಂದ ಹಿಡಿದು ನಗರ-ಪಟ್ಟಣಗಳ ತನಕ ಸಾಲಶೂಲದ ಇರಿತಕ್ಕೆ ಒಳಗಾಗಿರುತ್ತಾರೆ. ಅದೇ ರೀತಿ ಪಡಿತರ ಚೀಟಿ ಅರ್ಹತೆ ಮೇಲೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯುತ್ತಿರುವ ಮಹಿಳೆಯರ ಕುಟುಂಬಗಳಲ್ಲೂ ಇಂತಹ ಸಾಲದ ಸುಳಿಗೆ ಸಿಲುಕಿದ್ದು; ಅವರನ್ನು ತೆರಿಗೆದಾರರ ಪಟ್ಟಿ ಸೇರಿಸಲಾಗಿದೆ.

ಅಂದರೆ ತೆರಿಗೆ ಪಾವತಿಸುವವರು ಉಳ್ಳವರಾಗಿದ್ದು; ಸಾಲ ಪಡೆದ ಬಿಪಿಎಲ್ ಕಾರ್ಡುದಾರ ಮಹಿಳೆಯರೂ ಕೂಡ ಆ ಪಟ್ಟಿಗೆ ಒಳಪಟ್ಟಿದ್ದಾರೆ. ಕೃಷಿ ಸಾಲ ಒಂದನ್ನು ಬಿಟ್ಟು ರಾಷ್ಟ್ರೀಕೃತ ಬ್ಯಾಂಕ್, ನೋಂದಾಯಿತ ಫೈನಾನ್ಸ್ ಅಥವಾ ಸ್ಥಳೀಯ ಬ್ಯಾಂಕ್‌ಗಳಲ್ಲಿ ವಿವಿಧ ರೀತಿಯ ಸಾಲವನ್ನು ಪಡೆದಿದ್ದರೆ ಅಂಥವರಿಗೆ ಗೃಹಲಕ್ಷ್ಮಿ ಹಣ ಬಂದ್ ಆಗಿದೆ. ಸುಮಾರು 16,000ಕ್ಕೂ ಹೆಚ್ಚು ಮಹಿಳೆಯರು ಈ ಪಟ್ಟಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮಹಿಳೆಯರಿಗೆ ₹3 ಲಕ್ಷ ಬಡ್ಡಿ ಇಲ್ಲದ ಸಾಲಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ kswdc karnataka Schemes 2024

Gruha Lakshmi Money freeze for GST payers
ರೇಷನ್ ಕಾರ್ಡ್ ಕೆವೈಸಿಯಿಂದ ಪತ್ತೆ

ಯಾವುದೇ ಬ್ಯಾಂಕು ಅಥವಾ ನೋಂದಾಯಿತ ಹಣಕಾಸು ಸಂಸ್ಥೆಯ ಮೂಲಕ ಸಾಲ ಪಡೆದರೆ ಆ ಸಾಲಕ್ಕೆ ಸಾಲ ಪಡೆದ ವ್ಯಕ್ತಿಯ ಪ್ಯಾನ್ ಕಾರ್ಡ್ (PAN Card) ಜೋಡಣೆಯಾಗಿರುತ್ತದೆ. ಇದರಿಂದ ಸಹಜವಾಗಿಯೇ ಅವರು GST ಪಾವತಿದಾರರಾಗುತ್ತಾರೆ. ಸಾಲ ಪಡೆದ ವ್ಯಕ್ತಿ ಮಾತ್ರವಲ್ಲ ಸಾಲಕ್ಕೆ ಜಾಮೀನು ನೀಡಿದ ವ್ಯಕ್ತಿಗೂ ಕೂಡ ಈ ಜಿಎಸ್‌ಟಿ ತಾಪ ತಟ್ಟಿದೆ.

ಇದರಿಂದಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಮಾಡಿಸಿದಾಗ GST ಪಾವತಿದಾರರು ಪತ್ತೆಯಾಗುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೇರ ನಗದು ವರ್ಗಾವಣೆ ತಂತ್ರಾ೦ಶಯ ಇಂತಹ ಕುಟುಂಬದ ಯಜಮಾನಿಯರ ಮಾಹಿತಿಯನ್ನು ಪರಿಗಣಿಸುತ್ತಿಲ್ಲ. ಹೀಗಾಗಿ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತಿಲ್ಲ.

ಇದನ್ನೂ ಓದಿ: ಆಯುಷ್ಮಾನ್ ಯೋಜನೆ | ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ರಕ್ಷೆ Ayushman Card Free Health Insurance

ಇವರಿಗೆ ಹಣ ಬರುವುದೇ ಇಲ್ಲವೇ?

ವಿವಿಧ ತುರ್ತು ಕಾರಣಕ್ಕೆ ಸಾಲ ಪಡೆದಿರುವ ಇವರೆಲ್ಲ ಮೂಲತಃ ಸ್ಥಿತಿವಂತರಲ್ಲ. ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವ ಈ ಫಲಾನುಭವಿಗಳಿಗೆ ಅವರ ಮಕ್ಕಳು, ಪತಿ ಸಾಲ ಪಡೆದು ಜಿಎಸ್‌ಟಿ ಪಾವತಿಸಿದ್ದರಿಂದ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಪಾವತಿ ಆಗುತ್ತಿಲ್ಲ. ಯೋಜನೆಯ ಹಣ ಪಡೆಯಲು ಅರ್ಹರಿದ್ದರೂ ಸಾಲದ ಕಾರಣಕ್ಕೆ ಹಣ ತಲುಪುತ್ತಿಲ್ಲ.

ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಿಂದ ಮಾಹಿತಿ ನೀಡುವಂತೆ ಆದೇಶಿಸಿದೆ. ಸಾಲದ ಕಾರಣಕ್ಕೆ ಜಿಎಸ್‌ಟಿ ಪಾವತಿದಾರರಾಗಿರುವ ಈ ಫಲಾನುಭವಿಗಳ ದತ್ತಾಂಶವನ್ನು ಆದಾಯ ತೆರಿಗೆ ಹಾಗೂ ವಾಣಿಜ್ಯ ಇಲಾಖೆಗೆ ನೀಡುವ ಮೂಲಕ ಎಂದಿನ೦ತೆ ಹಣ ಪಾವತಿ ಮಾಡುವಂತೆ ತಿಳಿಸಲಾಗಿದೆ. ಈ ಸಮಸ್ಯೆ ಬಗೆಹರಿದ ಬಳಿಕ ಈ ಮಹಿಳೆಯರ ಖಾತೆಗೆ ಎಂದಿನ೦ತೆ ಹಣ ಜಮಾ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ ₹57,000 ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ… Cow and Buffalo shed Mgnrega subsidy


Spread the love
WhatsApp Group Join Now
Telegram Group Join Now

Leave a Comment

error: Content is protected !!