HDFC Bank Agriculture and Animal Husbandry Loan : ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ಹೆಸರುವಾಸಿಯಾದ ಊಆಈಅ ಬ್ಯಾಂಕ್ ರೈತರ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು 10 ಲಕ್ಷದ ವರೆಗೂ ಮೇಲಾದಾರ ಮುಕ್ತ ಸಾಲ ಸೌಲಭ್ಯವನ್ನು ನೀಡಲು ಅರ್ಜಿ ಆಹ್ವಾನಿಸಿದೆ. ಈ ಲೋನ್ ಪಡೆಯಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ…
ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ HDFC ಬ್ಯಾಂಕ್ ಲಿಮಿಟೆಡ್ ಭಾರತೀಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಬೃಹತ್ ಕಂಪನಿಗಳಲ್ಲಿ ಒಂದಾಗಿದೆ. ರೈತರಿಗೆ ಹೈನುಗಾರಿಕೆ ಸೇರಿದಂತೆ ವಿವಿಧ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳನ್ನು ಉತ್ತೇಜಿಸಲು ಸಾಲದ ಸೌಲಭ್ಯವನ್ನು ನೀಡುತ್ತಿದೆ. ಗ್ರಾಮೀಣ ಜನತೆ ಹಸು ಸಾಕಾಣಿಕೆ ಸೇರಿದಂತೆ ಹಲವಾರು ಕೃಷಿ ಚಟುವಟಿಕೆಗಳಲ್ಲಿ ಪರಿಣಿತಿ ಹೊಂದಿರುತ್ತಾರೆ. ಆದರೆ ಆರ್ಥಿಕ ಸಮಸ್ಯೆಯಿಂದ ತಮ್ಮ ಚಟುವಟಿಕೆಗಳನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ.
ಕೃಷಿ, ಪಶುಪಾಲನೆಯಲ್ಲಿ ಹೊಸದನ್ನು ಮಾಡುವ ಆಸಕ್ತಿ ಇದ್ದರೂ ಕೂಡ ಬಂಡವಾಳದ ಕಾರಣಕ್ಕೆ ಪರಿತಪಿಸುವವರಿಗೆ ಸರಕಾರ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ವಿವಿಧ ಸಾಲ ಸೌಲಭ್ಯಗಳನ್ನು ಕಲ್ಪಿಸಿವೆ. ಈ ನಿಟ್ಟಿನಲ್ಲಿ HDFC ಬ್ಯಾಂಕ್‌ನ (HDFC Bank loan for agri activities) ಈ ಸೌಲಭ್ಯ ಸಹಕಾರಿಯಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು. ಈ ಸಾಲವನ್ನು ಪಡೆಯಲು ಅರ್ಹತೆ, ಬೇಕಾಗುವ ದಾಖಲಾತಿಗಳು, ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಇತರೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ…
ಲೋನ್ ವಿವರ ಮತ್ತು ಅರ್ಹತೆ (Loan details and eligibility)
HDFC ಬ್ಯಾಂಕ್ ನಿಮ್ಮ ಅರ್ಹತೆಗೆ ಅನುಗುಣವಾಗಿ 10 ಲಕ್ಷದ ವರೆಗೆ ಲೋನ್ ಸೌಲಭ್ಯ ನೀಡುತ್ತದೆ. ಈ ಲೋನ್ ಪಡೆಯಲು ಯಾವುದೇ ಮೇಲಾಧಾರದ (Surity) ಅವಶ್ಯಕತೆ ಇರುವುದಿಲ್ಲ ಎನ್ನುತ್ತದೆ ಬ್ಯಾಂಕ್ ಮೂಲ. ಸಂಬಂಧಪಟ್ಟ ಕೃಷಿ, ಪಶುಪಾಲನೆ ಚಟುವಟಿಕೆಗಳಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರುವ, ಕನಿಷ್ಠ 18 ಮತ್ತು ಗರಿಷ್ಟ 60 ವರ್ಷದ ವಯೋಮಿತಿಯವರು ಈ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ರದ್ದಾದ ರೇಷನ್ ಕಾರ್ಡುಗಳು ವಾಪಾಸ್ | ವಾರದೊಳಗೆ ಸಿಗಲಿದೆ ಹೊಸ ಕಾರ್ಡ್ Canceled BPL Ration Card Return
ಯಾವ್ಯಾವ ಚಟುವಟಿಕೆಗಳಿಗೆ ಲೋನ್ ಸೌಲಭ್ಯವಿದೆ?
- ಹೈನುಗಾರಿಕೆ (Dairy farming)
- ಹಂದಿ ಸಾಕಾಣಿಕೆ (Pig farming)
- ಶ್ರೇಣಿಕರಣ ಹಾಗೂ ವಿಂಗಡೀಕರಣ ಘಟಕಗಳು
- ಕೋಳಿ ಸಾಕಾಣಿಕೆ (Poultry farming)
- ಜೇನು ಕೃಷಿ (Honey Bee farming)
- ಸಣ್ಣ ಆಹಾರ ಸಂಸ್ಕರಣ ಘಟಕಗಳು
- ಮೀನು ಸಾಕಾಣಿಕೆ (Fish farming)
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
- ಆಧಾರ್ ಕಾರ್ಡ
- ಪಾನ್ ಕಾರ್ಡ್
- ಪಾಸ್ ಪೋರ್ಟ್ ಸೈಜ್ ಫೋಟೋ
- ಒಂದು ವರ್ಷದ ಬ್ಯಾಂಕ್ ಸ್ಟೇಟ್‌ಮೆಂಟ್
ಅರ್ಜಿ ಸಲ್ಲಿಸುವುದು ಹೇಗೆ?
HDFC ಲೋನ್ ಸೌಲಭ್ಯ ಪಡೆಯಲು ನಿಮ್ಮ ಹತ್ತಿರವಿರುವ HDFC ಬ್ಯಾಂಕ್‌ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಇದಕ್ಕೆ ಸಂಬಂಧಿಸಿದ ಯಾವುದೇ ಸಹಾಯಕ್ಕಾಗಿ ಕೆಳಗೆ ನೀಡಿರುವ ಸಹಾಯವಾಣಿ ಸಂಖ್ಯೆಗೆ ಕರೆ ಅರ್ಜಿ ಸಲ್ಲಿಕೆಯ ಮತ್ತಷ್ಟು ವಿವರ, ಬಡ್ಡಿ ಮತ್ತು ಸಾಲ ಮರುಪಾವತಿ ಸಂಬAಧಿತ ವಿವರಗಳ ಬಗ್ಗೆ ವಿಚಾರಿಸಬಹುದು. ಈ ಲೋನ್ ಸಂಬಂಧಿತ ಯಾವುದೇ ಸಲಹೆ ಮತ್ತು ಸಹಾಯ ಬೇಕಿದ್ದರೆ ಈ ಕೆಳಗಿನ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಿ : 8310840750