How to block PhonePe Google Pay when mobile is lost? : ಇಂದು ಡಿಜಿಟಲ್ ಹಣ ವರ್ಗಾವಣೆ (Digital money transfer) ಸಾಮಾನ್ಯವಾಗಿದ್ದು ಫೋನ್ ಪೇ, ಗೂಗಲ್ ಪೇ, ಪೇಟಿಎಂ ನಂತಹ ಯುಪಿಐ ಅಪ್ಲಿಕೇಶನ್’ಗಳನ್ನು (UPI Applications) ಮೊಬೈಲ್ವುಳ್ಳ ಬಹುತೇಕರು ಬಳಸುತ್ತಾರೆ. ಆದರೆ ಕೆಲವೊಮ್ಮೆ ಮೊಬೈಲ್ ಕಳೆದು ಹೋದಾಗ ಮೊಬೈಲ್’ನಲ್ಲಿರುವ ‘ಹಣಕಾಸು ಮಾಹಿತಿ’ (Financial information) ಅನ್ಯರಿಗೆ ಗೊತ್ತಾಗುವ ಮೊದಲೇ ಅದನ್ನು ನಿರ್ಬಂಧಿಸದಿದ್ದರೆ ಆಗುವ ಅನಾಹುತ ಅಷ್ಟಿಷ್ಟಲ್ಲ.
ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದು ಹೋದರೆ ಅಪರಿಚಿತ ವ್ಯಕ್ತಿಯು ಮೊಬೈಲ್’ನಲ್ಲಿರೋ ನಮ್ಮ SIM Card ಬಳಸಿ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ದೋಚುವುದು ಬಹಳ ಸುಲಭದ ಕೆಲಸವಾಗಿದೆ. ಇಂತಹ ಸಮಯದಲ್ಲಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ, ಅಪಾಯಗಳಿಂದ ಪಾರಾಗಬಹುದು.
Google Pay ಐಡಿ ಬ್ಲಾಕ್ ಮಾಡುವುದು ಹೇಗೆ?
ಮೊಬೈಲ್ ಕಳೆದು ಹೋದಾಗ ನಿಮ್ಮ ಗೂಗಲ್ ಪೇ ಯುಪಿಐ ಐಡಿ (UPI ID) ಬ್ಲಾಕ್ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ. ಗೂಗಲ್ ಪೇ ಸಂಸ್ಥೆಯ ಗ್ರಾಹಕರ ಸಹಾಯವಾಣಿ ಸಂಖ್ಯೆಯಾದ 18004190157 ಸಂಖ್ಯೆಗೆ ಕರೆ ಮಾಡಿ. ನಂತರ ಗ್ರಾಹಕ ಆರೈಕೆಗೆ ನಿಮ್ಮ ಗೂಗಲ್ ಪೇ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಬಗ್ಗೆ ಮಾಹಿತಿ ತಿಳಿಸಿ.
ಇದರ ಹೊರತಾಗಿ ಮೊಬೈಲ್ ಅಥವಾ ಕಂಪ್ಯೂಟರ್’ನಲ್ಲಿ ಗೂಗಲ್ ಕ್ರೋಮ್’ಗೆ ಭೇಟಿ ನೀಡಿ Google find my phone ಜಾಲತಾಣಕ್ಕೆ ಭೇಟಿ ನೀಡಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ಈ ಒಂದು ಜಾಲತಾಣದ ಮುಖಾಂತರ ನಿಮ್ಮ ಮೊಬೈಲ್’ನಲ್ಲಿರುವ ಎಲ್ಲಾ ಮುಖ್ಯ ಡೇಟಾವನ್ನು ದೂರದಿಂದಲೇ ಅಳಿಸಿ ಗೂಗಲ್ ಪೇ ಖಾತೆಯನ್ನು ನಿರ್ಬಂಧಿಸಬಹುದಾಗಿದೆ.
Google find my phone ಜಾಲತಾಣ ಲಿಂಕ್ : ಇಲ್ಲಿ ಒತ್ತಿ
PhonePe ಐಡಿ ಬ್ಲಾಕ್ ಮಾಡುವುದು ಹೇಗೆ?
ನಿಮ್ಮ ಫೋನ್ ಅಥವಾ SIM ಕಾರ್ಡ್ ಕಳೆದುಕೊಂಡಾಗ PhonePe ಸಂಸ್ಥೆಯ ಗ್ರಾಹಕ ಬೆಂಬಲಕ್ಕೆ ಅಥವಾ ಸಹಾಯವಾಣಿ ಸಂಖ್ಯೆಗಳಾದ 080-68727374 / 022-68727374 ಸಂಖ್ಯೆಗೆ ಕರೆ ಮಾಡುವ ಮೂಲಕ ವರದಿ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು. ನಿಮ್ಮ ಸಮಸ್ಯೆಯ ವರದಿ ಸಲ್ಲಿಸುವಾಗ ಬೆಂಬಲ ಅಧಿಕಾರಿಗೆ ಪರಿಶೀಲನಾ ಉದ್ದೇಶಗಳಿಗಾಗಿ ನೀವು ಈ ಕೆಳಗೆ ತಿಳಿಸಿದ ವಿವರಗಳನ್ನು ನೀಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು.
- ನಿಮ್ಮ ಫೋನ್ ಪೇ ಖಾತೆಗೆ ನೋಂದಾಯಿಸಿದ ಮೊಬೈಲ್ ನಂಬರ್
- ನಿಮ್ಮ ಫೋನ್ ಪೇ ಖಾತೆಗೆ ನೋಂದಾಯಿಸಲಾದ ಇಮೇಲ್ ಐಡಿ
- ನೀವು ನಿಮ್ಮ ಫೋನ್ ಪೇಯಲ್ಲಿ ಮಾಡಿದ ಕೊನೆಯ ಹಣ ವಹಿವಾಟಿನ ಸಂಖ್ಯೆ ಅಥವಾ ಪ್ರಕಾರ ಮತ್ತು ಮೊತ್ತ
- ನಿಮ್ಮ ಫೋನ್ ಪೇ ಖಾತೆಯೊಂದಿಗೆ ನೊಂದಾಯಿಸಲಾದ ಬ್ಯಾಂಕುಗಳ ಹೆಸರುಗಳು
ನೀವು ಬೆಂಬಲ ಅಧಿಕಾರಿಗೆ ಇಷ್ಟೆಲ್ಲ ಮಾಹಿತಿ ನೀಡಿದ ಮೇಲೆ ಅನಿಕಾ ತಂಡ ಪರಿಶೀಲನೆ ಆರಂಭಿಸುತ್ತದೆ. ನೀವು ನೀಡಿರುವ ಎಲ್ಲ ಮಾಹಿತಿ ಸರಿಯಾಗಿದ್ದರೆ ನಿಮ್ಮ ಫೋನ್ ಖಾತೆಯನ್ನು ನಿಮ್ಮ ಭದ್ರತೆಗಾಗಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.
Paytm ಐಡಿ ಬ್ಲಾಕ್ ಮಾಡುವುದು ಹೇಗೆ?
ನಿಮ್ಮ ಮೊಬೈಲ್ ಕಳೆದು ಹೋದಾಗ ನಿಮ್ಮ ಆಪ್ತರ ಅಥವಾ ಆತ್ಮೀಯರ ಮೊಬೈಲ್ ನಂಬರ್’ನಿAದ ಪೇಟಿಎಂ ಗ್ರಾಹಕರ ಸಹಾಯವಾಣಿ ಸಂಖ್ಯೆಯಾದ 01204456456 ಸಂಖ್ಯೆಗೆ ಕರೆ ಮಾಡಿ. ಕರೆ ಮಾಡಿದ ನಂತರ ಅಲ್ಲಿ ಹೇಳಲಾಗುವ ಎಲ್ಲಾ ಮಾಹಿತಿಯನ್ನು ಗಮನವಿಟ್ಟು ಕೇಳಿ ಮತ್ತು lost phone (ಕಳೆದು ಹೋದ ಫೋನ್) ಎಂಬ ಆಪ್ಷನ್ ಆಯ್ಕೆ ಮಾಡಿ.
ನಂತರ ನಿಮ್ಮ ಹೊಸ ನಂಬರ್ ಅನ್ನು ಎಂಟರ್ ಮಾಡಿ ನೀವು ಕಳೆದುಕೊಂಡ ಮೊಬೈಲ್’ನ ಪೇಟಿಎಂ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಮುಂದೆ ಎಲ್ಲಾ ಸಾಧನೆಗಳಿಂದ ಲಾಗೌಟ್ (Logout) ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.
ನಂತರದಲ್ಲಿ Paytmನ ಜಾಲತಾಣಕ್ಕೆ ಭೇಟಿ ನೀಡಿ 24×7 ಸಹಾಯವಾಣಿ ಆಯ್ಕೆಯನ್ನು ಆರಿಸಿಕೊಂಡು ವಂಚನೆಯನ್ನು ವರದಿ ಮಾಡಬಹುದಾಗಿದೆ. ವರದಿ ಮಾಡುವ ಸಮಯದಲ್ಲಿ ಅಲ್ಲಿ ಕೇಳಲಾಗುವ ಪೊಲೀಸ್ ವರದಿ ಸೇರಿದಂತೆ ಹೆಚ್ಚಿನ ಮಾಹಿತಿಗಳನ್ನು ಸಲ್ಲಿಸಿ ನಿಮ್ಮ ಪೇಟಿಎಂ ಅಕೌಂಟ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬಹುದಾಗಿದೆ.
ಮೊಬೈಲ್’ನಲ್ಲಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ ನಂತಹ ಯುಪಿಐ ಅಪ್ಲಿಕೇಶನ್ ಬಳಸುವ ಪ್ರತಿಯೊಬ್ಬರು ಈ ಮಾಹಿತಿ ತಿಳಿದರೆ, ಮೊಬೈಲ್ ಕಳೆದು ಹೋದಾಗ ಈ ಮೇಲಿನ ಕ್ರಮಗಳನ್ನು ತಕ್ಷಣ ಅನುಸರಿಸುವುದರಿಂದ ಆಗುವ ಬಾರಿ ನಷ್ಟದಿಂದ ಸುಲಭದಲ್ಲಿ ಪಾರಾಗಬಹುದು.