JobsNews

ಐಡಿಬಿಐ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಉದ್ಯೋಗಾವಕಾಶ IDBI Bank Recruitment 2024

WhatsApp Group Join Now
Telegram Group Join Now

IDBI Bank Recruitment 2024 : ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಆಗಿರುವ ಪ್ರತಿಷ್ಠಿತ ಐಡಿಬಿಐ ಬ್ಯಾಂಕ್ (Industrial Development Bank of India – IDBI) ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (Junior Assistant Manager – JAM) ಹಾಗೂ ಅಗ್ರಿಕಲ್ಚರ್ ಅಸಿಸ್ಟೆಂಟ್ ಮ್ಯಾನೇಜರ್ (Agriculture Assistant Manager – AAO) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಯಾವುದೇ ವಿಷಯದಲ್ಲಿ ಪದವಿ ಪಡೆದಿದ್ದರೂ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಹುದ್ದೆ ಪಡೆಯುವ ಅವಕಾಶ ಇಲ್ಲಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಕರ್ನಾಟಕ ಬ್ಯಾಂಕ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಅವಕಾಶ Karnataka Bank Customer Service Associate Clerk Recruitment 2024

ಹುದ್ದೆಗಳ ವಿವರ

  • ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಜೆಎಎಂ) : 500
  • ಅಗ್ರಿಕಲ್ಚರ್ ಅಸಿಸ್ಟೆಂಟ್ ಮ್ಯಾನೇಜರ್ (ಎಎಒ) : 100
  • ಒಟ್ಟು ಹುದ್ದೆಗಳು : 600
  • ಕರ್ನಾಟಕಕ್ಕೆ ಮೀಸಲಾದ ಹುದ್ದೆಗಳು : 65

ವಿದ್ಯಾರ್ಹತೆ, ವೇತನ ವಿವರ

ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಜೆಎಎಂ) ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಯಿ೦ದ ಪದವಿ ಪಡೆದಿರಬೇಕು. ಇನ್ನು ಆಗ್ರಿಕಲ್ಚರ್ ಅಸಿಸ್ಟೆಂಟ್ ಮ್ಯಾನೇಜರ್ (ಎಎಒ) ಹುದ್ದೆಗಳಿಗೆ ಬಿಎಸ್ಸಿ/ಬಿಇ ಅಥವಾ ಬಿ.ಟೆಕ್ ಪದವಿಯನ್ನು ಕನಿಷ್ಠ 60 ಶೇಕಡಾ ಅಂಕದೊ೦ದಿಗೆ ಪೂರ್ಣಗೊಳಿಸಿರಬೇಕು.

ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಈ ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ವಾರ್ಷಿಕವಾಗಿ 6.14 ಲಕ್ಷ ರೂ.ಗಳಿಂದ 6.50 ಲಕ್ಷ ರೂ.ವರೆಗೆ ವೇತನ ನಿಗದಿಪಡಿಸಲಾಗಿದೆ. ಜೊತೆಗೆ ಇತರ ಭತ್ಯೆ, ಸವಲತ್ತುಗಳು ಅನ್ವಯವಾಗಲಿವೆ.

ಇದನ್ನೂ ಓದಿ: ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ Kisan Vikas Patra-KVP

ವಯೋಮಿತಿ ವಿವರ

ಅಭ್ಯರ್ಥಿಗಳಿಗೆ 2024 ಅಕ್ಟೋಬರ್ 1ಕ್ಕೆ ಅನ್ವಯಿಸುವಂತೆ ಕನಿಷ್ಠ ವಯಸ್ಸು 20 ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕದ ವಿವರ

ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಲು ಅವಕಾಶ ನೀಡಲಾಗಿದ್ದು; ವರ್ಗವಾರು ಶುಲ್ಕದ ವಿವರ ಈ ಕೆಳಗಿನಂತಿದೆ:

  • ಎಸ್‌ಸಿ, ಎಸ್‌ಟಿ, ಅಂಗವಿಕಲ ಅಭ್ಯರ್ಥಿಗಳಿಗೆ : 250 ರೂ.
  • ಇತರ ಎಲ್ಲ ವರ್ಗದ ಅಭ್ಯರ್ಥಿಗಳಿಗೆ : 1,050 ರೂ.
IDBI Bank Recruitment 2024

ಪರೀಕ್ಷಾ ಕೇಂದ್ರಗಳು

ಬ್ಯಾ೦ಕ್ ಮೂಲಕ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಆಯೋಜಿಸಲಾಗುತ್ತದೆ. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ನಡೆಸಲಾಗುವ ತರಬೇತಿಗೆ ಹಾಜರಾಗಲು ಇಚ್ಛೆ ವ್ಯಕ್ತಪಡಿಸಿದವರನ್ನು ಮಾತ್ರ ಆಹ್ವಾನಿಸಲಾಗುತ್ತದೆ.

ತರಬೇತಿ ಅವಧಿ ಹಾಗೂ ಇತರ ವಿವರಗಳನ್ನು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು ಈ ಕೆಳಗಿನಂತಿವೆ:

  • ಬೆ೦ಗಳೂರು
  • ಬೆಳಗಾವಿ
  • ಧಾರವಾಡ/ಹುಬ್ಬಳ್ಳಿ
  • ಕಲಬುರಗಿ
  • ಮಂಗಳೂರು
  • ಮೈಸೂರು
  • ಶಿವಮೊಗ್ಗ
  • ಉಡುಪಿ

ಇದನ್ನೂ ಓದಿ: ಹೈನುಗಾರಿಕೆಗೆ ₹10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ HDFC Bank Agriculture and Animal Husbandry Loan

ಅರ್ಜಿ ಸಲ್ಲಿಕೆ ಹೇಗೆ?

ಐಡಿಬಿಐ ಬ್ಯಾಂಕಿನ ವೆಬ್‌ಸೈಟ್ idbibank.inನಲ್ಲಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ನಂತರ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಬೇಕು. ವಯಸ್ಸು, ಶೈಕ್ಷಣಿಕ ಅರ್ಹತೆ ಸೇರಿ ಅಗತ್ಯ ದಾಖಲೆಗಳ ಜತೆಗೆ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಅಪಲೋಡ್ ಮಾಡಬೇಕು. ಸಂವಹನ ಉದ್ದೇಶಕ್ಕಾಗಿ ಸರಿಯಾದ ಇ-ಮೇಲ್ ಐಡಿ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು.

  • ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 30-11-2024
  • ಆನ್‌ಲೈನ್ ಪರೀಕ್ಷೆಯ ಸಂಭಾವ್ಯ ದಿನ: ಡಿಸೆಂಬರ್ 2024 ಅಥವಾ ಜನವರಿ 2025

ಸಂಪೂರ್ಣ ವಿವರವುಳ್ಳ ಅಧಿಸೂಚನೆ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: ಸೆಂಟ್ರಲ್ ಬ್ಯಾಂಕ್ 253 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ Central Bank of India Recruitment 2024

WhatsApp Group Join Now
Telegram Group Join Now

Related Posts