JobsNews

ಹಿರಿಯರ ನಾಗರಿಕರಿಗೆ ಶೀಘ್ರದಲ್ಲಿಯೇ ವೃದ್ಧಾಪ್ಯವೇತನ ಹೆಚ್ಚಳ | ಸಿಎಂ ಭರವಸೆ Increase in Karnataka Senior Citizens Pension

WhatsApp Group Join Now
Telegram Group Join Now

Increase in Karnataka Senior Citizens Pension : ದಿನೇ ದಿನೆ ಹಿರಿಯ ನಾಗರಿಕರ ಜೀವನ ನಿರ್ವಹಣಾ ವೆಚ್ಚ ಹೆಚ್ಚಳವಾಗುತ್ತಿದೆ. ಆದರೆ, ಅವರಿಗೆ ಸರ್ಕಾರದಿಂದ ಸಿಗುತ್ತಿರುವ ವೃದ್ಧಾಪ್ಯ ವೇತನ (Old Age Pension) ಮಾತ್ರ ಹಿರಿಯರ ಜೀವನ ನಿರ್ವಹಣಾ ವೆಚ್ಚಕ್ಕೆ ಅನುಗುಣವಾಗಿ ಹೆಚ್ಚಳವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ವೃದ್ಧಾಪ್ಯ ವೇತನ ಹೆಚ್ಚಳದ ಬಗ್ಗೆ ಹಲವು ಆಗ್ರಹಗಳು ಕೇಳಿ ಬರುತ್ತಿವೆ.

ಇದೀಗ ಮುಖ್ಯಮಂತ್ರಿ ಸಿದ್ದರಮಯ್ಯ ಅವರು ರಾಜ್ಯದಲ್ಲಿರುವ ಸುಮಾರು 37 ಲಕ್ಷ ಹಿರಿಯ ನಾಗರಿಕರಿಗೆ ಇಂದಿರಾಗಾAಧಿ ರಾಷ್ಟ್ರೀಯ ವೃದ್ಯಾಪ್ಯ ವೇತನ ಯೋಜನೆ (Indira Adhi National Old Age Pension Scheme), ಸಂಧ್ಯಾ ಸುರಕ್ಷಾ ಯೋಜನೆಯಡಿ (Sandhya Suraksha Yojana) ನೀಡುತ್ತಿರುವ ಮಾಸಿಕ ವೇತನ ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

ಶೀಘ್ರವೇ ಹಿರಿಯರ ಮಾಶಾಸನ ಹೆಚ್ಚಳ

ಹಿರಿಯ ನಾಗರಿಕರಿಗೆ ಜೀವನ ನಿರ್ವಹಣೆಗೆ ಸರ್ಕಾರ ಪ್ರತಿ ತಿಂಗಳು ನೀಡುವ ಹಣವನ್ನು (ಮಾಸಾಶನ) ಹೆಚ್ಚಳ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು; ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಅಕ್ಟೋಬರ್ 1ರಂದು ಬೆಂಗಳೂರಿನಲ್ಲಿ ನಡೆದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಭರವಸೆ ನೀಡಿದ್ದು; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂಡ ವೇದಿಕೆಯಲ್ಲಿಯೇ ಮಾಶಾಸನ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ.

ಯಾರಿಗೆ ಎಷ್ಟೆಷ್ಟು ವೃದ್ಧಾಪ್ಯ ವೇತನ ಸಿಗುತ್ತಿದೆ?

ರಾಜ್ಯದಲ್ಲಿ 2011ರ ಜನಗಣತಿಯಂತೆ 37.91 ಲಕ್ಷ ಹಿರಿಯ ನಾಗರಿಕರಿದ್ದಾರೆ. ಅಂದರೆ, ರಾಜ್ಯದಲ್ಲಿ 50,68,823 ಫಲಾನುಭವಿಗಳು ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ. ವಯೋಮಾನಕ್ಕೆ ಅನುಗುಣವಾಗಿ ಸದ್ಯಕ್ಕೆ ವಿತರಣೆ ಆಗುತ್ತಿರುವ ವೃದ್ಧಾಪ್ಯವೇತನದ ವಿವರ ಈ ಕೆಳಗಿನಂತಿದೆ:

  • ಇಂದಿರಾಗಾ೦ಧಿ ರಾಷ್ಟ್ರೀಯ ವೃದ್ಯಾಪ್ಯ ವೇತನ ಯೋಜನೆಯಡಿ 60 ರಿಂದ 64 ವರ್ಷ ವಯೋಮಾನದ ಹಿರಿಯ ನಾಗರಿಕÀರಿಗೆ ಮಾಸಿಕ 500 ರೂಪಾಯಿ ವೃದ್ಧಾಪ್ಯವೇತನ ನೀಡಲಾಗುತ್ತಿದೆ.
  • ಇನ್ನು 65 ವರ್ಷ ಮತ್ತು ಮೇಲ್ಪಟ್ಟ ವಯೋಮಾನದವರಿಗೆ ಮಾಸಿಕ 1,200 ರೂಪಾಯಿ ವೃದ್ಧಾಪ್ಯವೇತನ ನೀಡಲಾಗುತ್ತಿದೆ.
  • ಅದೇ ರೀತಿ ಸಂಧ್ಯಾ ಸುರಕ್ಷಾ ಯೋಜನೆಯಡಿ 65 ವರ್ಷ ಮತ್ತು ಮೇಲ್ಪಟ್ಟ ವಯೋಮಾನದವರಿಗೆ ಮಾಸಿಕ 1,200 ರೂಪಾಯಿ ವೃದ್ಧಾಪ್ಯವೇತನ ನೀಡಲಾಗುತ್ತಿದೆ.

ಇದೀಗ ಸರ್ಕಾರದ ಮಟ್ಟದಲ್ಲಿ ಈಗಿರುವ ವೃದ್ಧಾಪ್ಯವೇತನವನ್ನು ಹೆಚ್ಚಿಸುವ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇಷ್ಟರಲ್ಲೇ ಯಾರಿಗೆ ಎಷ್ಟೆಷ್ಟು ಮಾಶಾಸನ ಹೆಚ್ಚಳವಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

ಹಿರಿಯರಿಗೆ ಇಲಾಖೆಯ ಇತರ ಸೌಲಭ್ಯಗಳೇನು?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ರಾಜ್ಯದ ಹಿರಿಯ ನಾಗರಿಕರಿಗೆ ವೃದ್ಧಾಪ್ಯವೇತನದ ಜೊತೆಗೆ ಹಲವು ಸೇವೆಗಳನ್ನು ಕೂಡ ಒದಗಿಸುತ್ತಿದೆ.

ಸೇವಾ ಸಿಂಧು ಪೋರ್ಟಲ್ ಮುಖಾಂತರ ಸಕಾಲ ಸೇವೆಗೆ ಒಳಪಟ್ಟು ಆನ್‌ಲೈನ್ ಮೂಲಕ ಎಲ್ಲಾ ಹಿರಿಯ ನಾಗರಿಕರಿಗೂ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ನಿರ್ಗತಿಕ, ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗಾಗಿ 105 ವೃದ್ಧಾಶ್ರಮಗಳನ್ನು ನಡೆಸಲಾಗುತ್ತಿದೆ.

ರಾಜ್ಯದ ಅನುದಾನದಡಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ರಾಜ್ಯದ ಆಯ್ದ 26 ಜಿಲ್ಲೆಗಳಲ್ಲಿ 27 ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರಗಳು ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಪಾಲಕರ ಹಾಗೂ ಹಿರಿಯ ನಾಗರಿಕರ ಪಾಲನೆ ಪೋಷಣೆ ಮತ್ತು ಕಲ್ಯಾಣ ಅಧಿನಿಯಮ-2007ರಡಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ವಹಣಾ ನ್ಯಾಯಮಂಡಳಿ ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೇಲ್ಮನವಿ ನಿರ್ವಹಣಾ ನ್ಯಾಯಮಂಡಳಿ ಕಾರ್ಯ ನಿರ್ವಹಣೆಯಾಗುತ್ತಿದೆ.

ಅದೇ ರೀತಿ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರ ಚಿಕಿತ್ಸೆಗಾಗಿ 10 ಹಾಸಿಗೆಗಳು ಮೀಸಲಿರಿಸಿರುವ ಜೀರಿಯಾಟ್ರಿಕ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ.

  • ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ 14567 ಉಚಿತವಾಗಿ ಕರೆ ಮಾಡಿ
  • ಹಿರಿಯ ನಾಗರಿಕರ ತುರ್ತು ಸಮಸ್ಯೆಗಳ ಸ್ಪಂದನೆಗಾಗಿ ರಾಜ್ಯ ಹಿರಿಯ ನಾಗರಿಕರು ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 1090
WhatsApp Group Join Now
Telegram Group Join Now

Related Posts