Indian Railways Technician Recruitment 2024 : ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ಆರಂಭವಾಗಿದೆ. ಆರ್‌ಆರ್‌ಬಿ (Railway Recruitment Board) ಈಗಾಗಲೇ ಒಟ್ಟಾರೆ ನಾಲ್ಕು ನೇಮಕಾತಿ ಅಧಿಸೂಚನೆಗಳನ್ನು (Centralised Employment Notice-CEN) ಹೊರಡಿಸಲಾಗಿದ್ದು, 46,000ಕ್ಕೂ ಅಧಿಕ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಈ ಯಾದಿಯಲ್ಲಿ ಕಳೆದ ಮಾರ್ಚ್ 9ರಂದು ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಏಪ್ರಿಲ್ 9ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಆಗ 9,144ರಷ್ಟಿದ್ದ ಹುದ್ದೆಗಳ ಸಂಖ್ಯೆ ಇದೀಗ 14,298ಕ್ಕೆ ಏರಿಕೆಯಾಗಿದ್ದು; ಆರ್‌ಆರ್‌ಬಿ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ.
ತಿದ್ದುಪಡಿ ಅಧಿಸೂಚನೆ ಪ್ರಕಟ
ಈ ಮೊದಲು ಓಪನ್ ಲೈನ್ (18 ವಿಭಾಗಗಳು) ಹುದ್ದೆಗಳ ಜತೆಗೆ ವರ್ಕ್ ಶಾಪ್ ಹಾಗೂ ಇತರ 22 ವಿಭಾಗಗಳ ತಂತ್ರಜ್ಞರ ಹುದ್ದೆಗಳು ಸೇರಿ ಹೆಚ್ಚುವರಿ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು ವಲಯದಲ್ಲಿ 337 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾಗಿದ್ದು, ಐಟಿಐ ಮೂಲಕ ಅಗತ್ಯ ಟ್ರೇಡ್‌ನಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚುವರಿ ಹುದ್ದೆಗಳಿಗೆ ಅಗತ್ಯವಾದ ವಿದ್ಯಾರ್ಹತೆ ಹಾಗೂ ಜನ್ಮ ದಿನಾಂಕ ಮತ್ತಿತರ ಅಗತ್ಯ ಮಾಹಿತಿಯನ್ನು ತಿದ್ದುಪಡಿ ಅಧಿಸೂಚನೆಯಲ್ಲಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಅರ್ಹತೆ ಪಡೆಯುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅನುವಾಗುವಂತೆ ಅನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಶೀಘ್ರವೇ ಸಕ್ರಿಯಗೊಳಿಸಲಾಗುತ್ತದೆ ಎಂದು ಆರ್‌ಆರ್‌ಬಿ ಮಾಹಿತಿ ನೀಡಿದೆ.
ಬೆಂಗಳೂರು ವಲಯದ ಹುದ್ದೆಗಳು
ಈ ಹುದ್ದೆಗಳನ್ನು ಟೆಕ್ನಿಷಿಯನ್ ಗ್ರೇಡ್-1 ಹಾಗೂ ಗ್ರೇಡ್-3 ಹುದ್ದೆಗಳೆಂದು ವಿಂಗಡಿಸಲಾಗಿದ್ದು ಬೆಂಗಳೂರು ವಲಯದ 337 ಹುದ್ದೆಗಳ ವಿವರ ಹಾಗೂ ಸಂಖ್ಯೆ ಈ ಕೆಳಗಿನಂತಿದೆ:
ಟೆಕ್ನಿಷಿಯನ್ ಗ್ರೇಡ್ -1
ಸಿಗ್ನಲ್ : 44
ಟೆಕ್ನಿಷಿಯನ್ ಗ್ರೇಡ್-3
- ಟೆಕ್ನಿಷಿಯನ್ ಗ್ರೇಡ್ ಬ್ಲ್ಯಾಕ್‌ಸ್ಮಿತ್ : 14
- ಕ್ಯಾರಿಯೇಜ್ ಅಂಡ್ ವ್ಯಾಗನ್ : 14
- ಡೀಸೆಲ್ (ಮೆಕಾನಿಕಲ್) : 05
- ಎಲೆಕ್ಟ್ರಿಕಲ್ : 23
- ರೆಫ್ರಿಜರೇಷನ್ : 08
- ಎಸ್‌ಅಂಡ್‌ಟಿ : 26
- ಟ್ರ‍್ಯಾಕ್ ಮಷಿನ್ : 08
- ಕಾರ್ಪೆಂಟರ್ : 22
- ಎಲೆಕ್ಟ್ರಿಕಲ್ : 03
- ಟರ್ನರ್ (ವರ್ಕ್’ಶಾಪ್) : 15
- ಫಿಟ್ಟರ್ (ಮೆಕಾನಿಕಲ್) : 117
- ಮಷಿನಿಸ್ಟ್ (ಮೆಕಾನಿಕಲ್) : 11
- ರೆಫ್ರಿಜರೇಷನ್ : 03
- ಟ್ರಿಮ್ಮರ್ (ವರ್ಕ್’ಶಾಪ್) : 03
- ವೆಲ್ಡರ್ (ಮೆಕಾನಿಕಲ್) : 21
- ಒಟ್ಟು ಹುದ್ದೆಗಳು : 337
ವಿದ್ಯಾರ್ಹತೆ ಏನಿರಬೇಕು?
ಟೆಕ್ನಿಷಿಯನ್ ಗ್ರೇಡ್-1 ಹುದ್ದೆಗಳಾದ ‘ಸಿಗ್ನಲ್’ ಹುದ್ದೆಗಳಿಗೆ ಬಿಎಸ್‌ಸಿ, ಡಿಪ್ಲೊಮಾ ಇಂಜಿನಿಯರಿAಗ್ ಅಥವಾ ಇಂಜಿನಿಯರಿ೦ಗ್ ಪದವಿ ಮುಗಿಸಿರಬೇಕು.
ಟೆಕ್ನಿಷಿಯನ್ ಗ್ರೇಡ್-3ರ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರಬೇಕು. ಆಯಾ ಟ್ರೇಡ್‌ಗಳಲ್ಲಿ ಐಟಿಐ ಅಥವಾ ಪ್ರಮಾಣಪತ್ರದ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಐಟಿಐ ಅಥವಾ ಆಯಾ ಟ್ರೇಡ್‌ಗಳಲ್ಲಿ ವ್ಯಾಸಂಗ ಮಾಡದೆ, ಇಂಜಿನಿಯರಿAಗ್ ಅಥವಾ ಪದವಿ ಪೂರೈಸಿದ್ದಲ್ಲಿ ಹುದ್ದೆಗೆ ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ವಯೋಮಿತಿ, ವೇತನ ಮತ್ತು ಶುಲ್ಕದ ವಿವರ
ಟೆಕ್ನಿಷಿಯನ್ ಗ್ರೇಡ್-1 ಹುದ್ದೆUಳು 7ನೇ ವೇತನ ಆಯೋಗದ 5ನೇ ಹಂತದ ಹುದ್ದೆಗಳಾಗಿದ್ದು, 29,200 ರೂ. ಆರಂಭಿಕ ವೇತನ ಹೊಂದಿವೆ. 18-36 ವಯೋಮಿತಿಯ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲೊಸಬಹುದು.
ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳು 7ನೇ ವೇತನ ಆಯೋಗದ 2ನೇ ಹಂತದ ಹುದ್ದೆಗಳಾಗಿದ್ದು, ಇವುಗಳಿಗೆ 19,900 ರೂಪಾಯಿ ವೇತನವಿರಲಿದೆ. ಆಯಾ ವಿಭಾಗದ ಮೀಸಲಾತಿಗೆ ಅನುಸಾರ ವಯೋಮಿತಿ ಸಡಿಲಿಕೆ ಇರಲಿದೆ. ಈ ಹುದ್ದೆಗಳಿಗೆ 18-33 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಟೆಕ್ನಿಷಿಯನ್ ಗ್ರೇಡ್-1 ಹಾಗೂ ಗ್ರೇಡ್-3 ವರ್ಗದ ಎಲ್ಲಾ ಹುದ್ದೆಗಳಿಗೆ ಸಾಮಾನ್ಯ ವರ್ಗದವರಿಗೆ 500 ರೂಪಾಯಿ ಮತ್ತು ಉಳಿದವರಿಗೆ 250 ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಕೆಳಗೆ ನೀಡಿರುವ ಅಧಿಸೂಚನೆ ಹಾಗೂ ತಿದ್ದುಪಡಿ ಅಧಿಸೂಚನೆ ಎರಡನ್ನೂ ಡೌನ್‌ಲೋಡ್ ಮಾಡಿಕೊಂಡು ಸಂಪೂರ್ಣ ಓದಿಕೊಳ್ಳಿ…