JobsNews

10ನೇ ತರಗತಿ, ಐಟಿಐ, ಪದವೀಧರರಿಗೆ ಇಸ್ರೋದಲ್ಲಿ ಉದ್ಯೋಗವಕಾಶ ISRO HSFC recruitment 2024

WhatsApp Group Join Now
Telegram Group Join Now

ISRO HSFC recruitment 2024 : ಬೆಂಗಳೂರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation – ISRO) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೂಮನ್ ಸ್ಪೇಸ್ ಫೈಟ್ ಸೆಂಟರ್ (Human Space Flight Centre – HSFC) ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಭಾರತೀಯ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮವನ್ನು ಸಂಘಟಿಸುವ ಸಂಸ್ಥೆಯಾಗಿರುವ ಎಚ್‌ಎಸ್‌ಎಫ್‌ಸಿನಲ್ಲಿ ತಂತ್ರಜ್ಞ ಮತ್ತು ವೈದ್ಯಕೀಯ ಅಧಿಕಾರಿ ಹುದ್ದೆಗಳು ಖಾಲಿ ಇದ್ದು; ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 9ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
  • ಮೆಡಿಕಲ್ ಆಫೀಸರ್ : 03
  • ಸೈಂಟಿಸ್ಟ್ ಇಂಜಿನಿಯರ್ : 10
  • ಟೆಕ್ನಿಕಲ್ ಅಸಿಸ್ಟೆಂಟ್ : 28
  • ಸೈಂಟಿಫಿಕ್ ಅಸಿಸ್ಟೆಂಟ್ : 01
  • ಟೆಕ್ನಿಪಿಯನ್-ಬಿ : 43
  • ಡ್ರಾಫ್ಟ್‌ಮ್ಯಾನ್‌-ಬಿ : 13
  • ಅಸಿಸ್ಟೆಂಟ್ (ರಾಜಭಾಷಾ) : 05
  • ಒಟ್ಟು ಹುದ್ದೆಗಳು : 103

ಟೆಕ್ನಿಷಿಯನ್-ಬಿ ಹುದ್ದೆಗಳಿಗೆ 10ನೇ ತರಗತಿ, ಐಟಿಐ ವಿದ್ಯಾರ್ಹತೆ ಹೊಂದಿರಬೇಕು. ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಡಿಪ್ಲೊಮಾ ಮುಗಿಸಿದವರು ಅರ್ಜಿ ಸಲ್ಲಸಬಹುದಾಗಿದೆ.

ಇನ್ನು ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ ಬಿಎಸ್ಸಿ, ಪದವಿ, ಅಸಿಸ್ಟೆಂಟ್ (ರಾಜಭಾಷಾ) ಯಾವುದೇ ಪದವಿ ಮುಗಿಸಿದವರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅದೇ ರೀತಿ ಮೆಡಿಕಲ್ ಆಫೀಸರ್ ಹುದ್ದೆಗೆ ಎಂಬಿಬಿಎಸ್, ಎಂಡಿ ಮತ್ತು ಸೈಂಟಿಸ್ಟ್ ಇಂಜಿನಿಯರ್ ಹುದ್ದೆಗಳಿಗೆ ಬಿಇ ಅಥವಾ ಬಿಟೆಕ್, ಎಂಇ ಅಥವಾ ಎಂಟೆಕ್ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಸಡಿಲಿಕೆ ನೀಡಲಾಗಿದೆ.

ಯಾವ ಹುದ್ದೆಗೆ ಎಷ್ಟು ವೇತನ?
  • ಟೆಕ್ನಿಷಿಯನ್-ಬಿ ಹುದ್ದೆಗಳಿಗೆ : 21,700 – 69,100 ರೂ,.
  • ಟೆಕ್ನಿಕಲ್ ಅಸಿಸ್ಟೆಂಟ್, ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ : 44,900 – 1,42,400 ರೂ.,
  • ಅಸಿಸ್ಟೆಂಟ್ (ರಾಜಭಾಷಾ) ಹುದ್ದೆಗಳಿಗೆ : 25,500 – 81,100 ರೂ.,
  • ಮೆಡಿಕಲ್ ಆಫೀಸರ್ ಹುದ್ದೆಗಳಿಗೆ : 56,100 – 2,08,700 ರೂ.,
  • ಸೈಂಟಿಸ್ಟ್ ಇಂಜಿನಿಯರ್ ಹುದ್ದೆಗಳಿಗೆ : 56,100 – 1,77,500 ರೂ.,
ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸ್ಕ್ರೀನ್ ಟೆಸ್ಟ್, ಲಿಖಿತ ಪರೀಕ್ಷೆ / ಕಂಪ್ಯೂಟರ್ ಆಧಾರಿತ ಪರೀಕ್ಷೆ, ಕೌಶಲ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರವಿರಲಿದೆ.

ಅರ್ಜಿ ಶುಲ್ಕವೆಷ್ಟು?

ಎಲ್ಲ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 750 ರೂಪಾಯಿ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 9ರೊಳಗೆ hsಜಿಛಿ.gov.iಟಿಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:
09-10-2024

  • ಅಧಿಸೂಚನೆ : Download
  • ಹೆಚ್ಚಿನ ಮಾಹಿತಿಗೆ : hsfc.gov.in
WhatsApp Group Join Now
Telegram Group Join Now

Related Posts