JobsNews

ಕರ್ನಾಟಕ ಪೊಲೀಸ್ ನೇಮಕಾತಿ : 4115 ಕಾನ್‌ಸ್ಟೇಬಲ್, ಎಸ್‌ಐ ಹುದ್ದೆಗಳ ಭರ್ತಿಗೆ ಅರ್ಜಿ | ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಪಾಸಾದವರಿಗೆ ಭರ್ಜರಿ ಅವಕಾಶ Karnataka Police Recruitment 2024

WhatsApp Group Join Now
Telegram Group Join Now

Karnataka Police Recruitment 2024 : ಕರ್ನಾಟಕ ಪೊಲೀಸ್ ಇಲಾಖೆಯ (Karnataka Police Department) ಖಾಲಿ ಹುದ್ದೆಗಳ ಭರ್ತಿಗೆ ಕಡೆಗೂ ತಯಾರಿ ನಡೆದಿದ್ದು; ಒಟ್ಟು 4,115 ಹುದ್ದೆಗಳ ನೇಮಕಾತಿಗೆ ರಾಜ್ಯ ಆರ್ಥಿಕ ಇಲಾಖೆ (Department of finance karnataka) ಅನುಮೋದನೆ ನೀಡಿದೆ. ಬಹಳ ದಿನಗಳಿಂದ ಈ ನೇಮಕಾತಿಯನ್ನು ಎದುರು ನೋಡುತ್ತಿದ್ದ ಆಸಕ್ತ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗದ್ದು; ಶೀಘ್ರದಲ್ಲಿಯೇ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ Official notification) ಹೊರಬೀಳಲಿದೆ.

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ (CAR / DAR), ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್‌ (SRPC ) (KSRP), ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಕಾನ್ಸ್‌ಟೇಬಲ್‌ (ಸಿವಿಲ್) ಹುದ್ದೆಗಳ ನೇಮಕಾತಿ ನಡೆಯಲಿದ್ದು; ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ಪಾಸಾವರಿಗೆ ಭರ್ಜರಿ ಅವಕಾಶ ಸಿಗಲಿದೆ.

ಹುದ್ದೆಗಳ ವಿವರ

ಈಗ ನೇಮಕಾತಿ ನಡೆಯಲಿರುವ ಹುದ್ದೆಗಳು 2023-24 ಹಾಗೂ 2022-23ನೇ ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ, ಪ್ರಸ್ತಾವನೆ ಸಲ್ಲಿಸಲಾಗಿರುವ ಹುದ್ದೆಗಳಾಗಿದ್ದು; ಖಾಲಿ ಹುದ್ದೆಗಳ ವಿವರ ಈ ಕೆಳಗಿನಂತಿದೆ:

  • ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆ : 3,500
  • ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳು : 615
  • ಒಟ್ಟು ಹುದ್ದೆಗಳು : 4,115
Karnataka Police Recruitment 2024

ಹುದ್ದೆವಾರು ವಿದ್ಯಾರ್ಹತೆ ವಿವರ

ಸದ್ಯದಲ್ಲೇ ನೇಮಕಾತಿ ನಡೆಯಲಿರುವ ಗೃಹ ಇಲಾಖೆಯ 4,115 ಹುದ್ದೆಗಳಿಗೆ ಎಸ್‌ಎಸ್‌ಎಲ್, ಪಿಯುಸಿ ಹಾಗೂ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದ್ದು; ಹುದ್ದೆವಾರು ಶೈಕ್ಷಣಿಕ ಅರ್ಹತೆ ಈ ಕೆಳಗಿನಂತಿದೆ:

ಸಿಎಆರ್ / ಡಿಎಆರ್ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಮತ್ತು ಎಸ್‌ಆರ್‌ಪಿಸಿ ಮತ್ತು ಕೆಎಸ್‌ಆರ್‌ಪಿ ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಅದೇ ರೀತಿ ಪೊಲೀಸ್ ಕಾನ್ಸ್‌ಟೇಬಲ್‌ (ಸಿವಿಲ್) ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು ಮತ್ತು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಯಾವುದೇ ಪದವಿ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾಡಿe.

ಅಧಿಸೂಚನೆ ಯಾವಾಗ?

ಈ ಮೇಲಿನ ಎಲ್ಲ ಹುದ್ದೆಗಳಿಗೆ ಈಗಷ್ಟೇ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಮುಂದಿನ ಮೂರು ತಿಂಗಳೊಳಗೆ ಅಧಿಸೂಚನೆ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ. ಆದರೆ, ಗೃಹ ಇಲಾಖೆಯಿಂದ ನೇಮಕಾತಿಗೆ ಜರೂರು ಆದೇಶ ಬಂದಲ್ಲಿ 40 ದಿನಗಳೊಳಗೆ ಅಧಿಸೂಚನೆ ಹೊರಡಿಸುವ ಸಂಭವವಿವೆ ಎನ್ನಲಾಗುತ್ತಿದೆ.

ಒಟ್ಟಾರೆ ಪೊಲೀಸ್ ಇಲಾಖೆ ನೇಮಕಾತಿಯ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ವಯೋಮಿತಿ, ಶೈಕ್ಷಣಿಕ ಮತ್ತು ದೈಹಿಕ ಅರ್ಹತೆ, ಪರೀಕ್ಷೆ, ಅರ್ಜಿ ಶುಲ್ಕ, ಆಲ್‌ಲೈನ್ ಅರ್ಜಿ ಲಿಂಕ್ ಸೇರಿದಂತೆ ಸಂಪೂರ್ಣ ಮಾಹಿತಿಯುಳ್ಳ ಅಧಿಸೂಚನೆ ಇಷ್ಟರಲ್ಲೇ ಬಿಡುಗಡೆಯಾಗಲಿದೆ.

WhatsApp Group Join Now
Telegram Group Join Now

Related Posts