JobsNews

SSLC ಪಾಸಾದವರಿಗಾಗಿಯೇ ಇವೆ ರಾಜ್ಯ ಸರ್ಕಾರಿ ಈ ಹುದ್ದೆಗಳು : ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಮಾಹಿತಿ… Karnataka State GOVT Jobs for SSLC Passed

WhatsApp Group Join Now
Telegram Group Join Now

Karnataka State GOVT Jobs for SSLC Passed : ಕೇವಲ 10ನೇ ತರಗತಿ (SSLC) ಪಾಸಾಗಿ, ಮುಂದಿನ ಉನ್ನತ ಹಂತದ ಶಿಕ್ಷಣ ಪಡೆಯಲು ಸಾಧ್ಯವಾಗದೇ ಇರುವವರಿಗೆ ಲಭ್ಯವಿರುವ ಸರ್ಕಾರಿ ಉದ್ಯೋಗಗಳ (Karnataka State GOVT jobs) ಸಮಗ್ರ ಪಟ್ಟಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು, ಕೇವಲ 10ನೇ ತರಗತಿ ಪಾಸಾಗಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರು ಕೆಳಗಿನ ಲೇಖನದಿಂದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ರಾಜ್ಯದಲ್ಲಿ ಹಲವಾರು ವಿದ್ಯಾರ್ಥಿಗಳು 10ನೇ ತರಗತಿ ತನಕ ಏನೋ ಕಷ್ಟಪಟ್ಟು ಶಿಕ್ಷಣವನ್ನು ಮುಗಿಸುತ್ತಾರೆ. ಆದರೆ ಹಲವು ಕಾರಣಗಳಾದ ಬಡತನ, ಕೌಟುಂಬಿಕ ಸಮಸ್ಯೆಗಳು ಹಾಗೂ ಇತರೆ ಹಲವು ಕಾರಣಗಳಿಂದಾಗಿ ಮುಂದಿನ ವಿದ್ಯಾಭ್ಯಾಸ ಮಾಡದೆ ಹಿಂದುಳಿಯುವ ಸನ್ನಿವೇಶಗಳು ಬಹಳಷ್ಟು ಇದೆ. ಹಲವಾರು ವಿದ್ಯಾರ್ಥಿಗಳು 10ನೇ ತರಗತಿ ಮುಗಿದ ನಂತರ ಖಾಸಗಿ ಕಂಪನಿಗಳಲ್ಲಿ, ಫ್ಯಾಕ್ಟರಿಗಳಲ್ಲಿ, ಹಳ್ಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಥವಾ ಕೃಷಿ ಆಯ್ಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಇಂಥವರಿಗೆ ಅಂದರೆ ಕೇವಲ 10ನೇ ತರಗತಿ ಪಾಸಾದವರಿಗೆ ಕೂಡ ರಾಜ್ಯ ಸರ್ಕಾರದ ಹಲವಾರು ಉದ್ಯೋಗಗಳನ್ನು ಪಡೆಯುವ ಅವಕಾಶವಿದ್ದು, ಯಾವ ಯಾವ ಇಲಾಖೆಯ ಯಾವ ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ? ಅರ್ಹತೆಗಳೇನು ಎಂಬ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.

ನ್ಯಾಯಾಲಯಗಳಲ್ಲಿ ಆದೇಶ ಜಾರಿಕಾರರು ಹುದ್ದೆಗಳು

ಇತ್ತೀಚಿಗೆ ಅತಿ ಹೆಚ್ಚು ನೇಮಕ ಮಾಡಿಕೊಳ್ಳುತ್ತಿರುವಂತಹ ಆದೇಶ ಜಾರಿಕಾರರು ಹುದ್ದೆಗಳನ್ನು ಇಂಗ್ಲೀಷಿನಲ್ಲಿ ಈ ಹುದ್ದೆಗಳನ್ನು Process Server ಎಂದು ಕೂಡ ಕರೆಯಲಾಗುತ್ತದೆ. ಈ ಹುದ್ದೆಗಳ 10ನೇ ತರಗತಿ ಪಾಸಾದವರಿಗಾಗಿ ಇದ್ದು, ಆಯ್ಕೆಯಾದವರಿಗೆ ₹37,900 ರೂಪಾಯಿ ವರಿಗೆ ಮಾಸಿಕ ವೇತನ ಸಿಗಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 18 ರಿಂದ 35 ವರ್ಷದ ವಯೋಮಿತಿಯಲ್ಲಿರುವ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖವಾಗಿ ಅಭ್ಯರ್ಥಿಗಳು ಡ್ರೈವಿಂಗ್ ಲೈಸೆನ್ಸ್ ಅಥವಾ ವಾಹನ ಪರವಾನಗಿಯನ್ನು ಹೊಂದಿರುವುದು ಕಡ್ಡಾಯ.

ಜವಾನ ಅಥವಾ Peon ಹುದ್ದೆಗಳು

ಜವಾನ್ / Peon ಹುದ್ದೆಗಳನ್ನು ಬಹಳಷ್ಟು ಇಲಾಖೆಗಳಲ್ಲಿ ನೇಮಕ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ, ನ್ಯಾಯಾಲಯಗಳಲ್ಲಿ, ಸಹಕಾರಿ ಬ್ಯಾಂಕಿನಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ, ಸರ್ಕಾರಿ ವಸತಿ ನಿಲಯಗಳಲ್ಲಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಈ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಈ ಹುದ್ದೆಗಳು ಕೂಡ ಸರ್ಕಾರಿ ನೌಕರಿ ಹುದ್ದೆಗಳಾಗಿದ್ದು ಕೇವಲ 10ನೇ ತರಗತಿ ಪಾಸಾದವರು ಈ ಉದ್ಯೋಗವನ್ನು ಪಡೆಯಬಹುದು. ಈ ಹುದ್ದೆಗಳಿಗೆ ಕೂಡ ಸಾಮಾನ್ಯವಾಗಿ ಅರ್ಜಿ ಸಲ್ಲಿಸಲು 18 ರಿಂದ 35 ವರ್ಷದ ವಯೋಮಿತಿಯಲ್ಲಿರಬೇಕು.

ಮೀಸಲು ಪೊಲೀಸ್ ಪೇದೆ ಹುದ್ದೆಗಳು KSRP Constable Jobs

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಮೀಸಲು ಪೊಲೀಸ್ ಪಡೆ, ಇಂಗ್ಲಿಷ್’ನಲ್ಲಿ Karnataka state reserved Police ಎಂದು ಕರೆಯಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳು ಗೌರವಾನ್ವಿತ ಹುದ್ದೆಗಳಾಗಿದ್ದು 10ನೇ ತರಗತಿ ಪಾಸಾದವರು ಈ ಉದ್ಯೋಗ ಪಡೆಯಲು ಈಗಿನಂದನೆ ತಯಾರಿ ನಡೆಸಿ.

ಸಾರಿಗೆ ನಿಗಮದಲ್ಲಿ ಚಾಲಕ ಹುದ್ದೆಗಳು KSRTC, BMTC Bus Driver Jobs

ಕರ್ನಾಟಕ ರಾಜ್ಯದ ವಿವಿಧ ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಬಿಎಂಟಿಸಿ, ಎನ್’ಡಬ್ಲ್ಯೂಕೆಆರ್’ಟಿಸಿ ಸಾರಿಗೆ ನಿಗಮಗಳಲ್ಲಿ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ 22,000 ರೂಪಾಯಿಗಿಂತಲೂ ಹೆಚ್ಚಿನ ಸಂಬಳವಿರುತ್ತದೆ. ಆದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರಮುಖವಾಗಿ ವಾಹನ ಪರವಾನಗಿಯನ್ನು ಹೊಂದಿರುವುದು ಕಡ್ಡಾಯ.

ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು Data entry operator Jobs

ಗ್ರಾಮ ಪಂಚಾಯಿತಿಗಳಲ್ಲಿ, ತಾಲೂಕು ಕಚೇರಿಗಳಲ್ಲಿ ಅಥವಾ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಕೂಡ ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ಅರ್ಜಿ ಸಲ್ಲಿಸಲು ಪ್ರಮುಖವಾಗಿ ಅಭ್ಯರ್ಥಿಗಳ ಹತ್ತನೇ ತರಗತಿ ಪಾಸ್ ಆಗಿ ಕಂಪ್ಯೂಟರ್ ತರಬೇತಿಯನ್ನು ಹೊಂದಿರಬೇಕು, ಹಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು. ಆದರೆ ಈ ಹುದ್ದೆಗಳನ್ನು ಹಲವು ಬಾರಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅರಣ್ಯ ವೀಕ್ಷಕರು ಹುದ್ದೆಗಳು Forest Watcher Jobs

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುವ ಈ ಫಾರೆಸ್ಟ್ ವಾಚರ್ ಅಥವಾ ಅರಣ್ಯ ವೀಕ್ಷಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೂಡ ಅಭ್ಯರ್ಥಿಗಳು ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು. ಈ ಹುದ್ದೆಗಳಿಗೆ ಆಯ್ಕೆ ಆದವರಿಗೆ ಮಾಸಿಕ ₹32,600 ರುಪಾಯಿ ಅವರಿಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ 18ರಿಂದ 30 ವರ್ಷದ ವಯೋಮಿತಿಯಲ್ಲಿರಬೇಕು. ಸಾಮಾನ್ಯವಾಗಿ ಮೀಸಲಾತಿ ವರ್ಗಗಳಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ನೀಡಲಾಗುತ್ತದೆ.

ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಗಳನ್ನು ಹೊರತುಪಡಿಸಿ 10ನೇ ತರಗತಿ ಪಾಸಾದವರಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳನ್ನು ಕೂಡ ಪಡೆಯಲು ಅವಕಾಶವಿದ್ದು, ಹತ್ತನೇ ತರಗತಿ ಪಾಸಾದವರಿಗೆ ಇರುವಂತಹ ಕೇಂದ್ರ ಸರ್ಕಾರ ಉದ್ಯೋಗಗಳ ಮಾಹಿತಿಯನ್ನು ಮುಂದಿನ ಲೇಖಟಿದಲ್ಲಿ ತಿಳಿಸಲಾಗುವುದು. ಈ ಉದ್ಯೋಗಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನೇಮಕಾತಿಗೆ ಅಗತ್ಯವಿರುವ ಲಿಖಿತಪರೀಕ್ಷೆಗೆ ತಯಾರಿ ಹಾಗೂ ದೈಹಿಕ ಪರೀಕ್ಷೆಗೆ ತಯಾರಿಯನ್ನು ಈಗಿನಿಂದಲೇ ಆರಂಭಿಸಿ… ಧನ್ಯವಾದಗಳು…

WhatsApp Group Join Now
Telegram Group Join Now

Related Posts