FinancialNewsSchemes

ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ Kisan Vikas Patra-KVP

WhatsApp Group Join Now
Telegram Group Join Now

Kisan Vikas Patra (KVP) Post Office Saving Schemes : ಅಂಚೆ ಇಲಾಖೆಯ (IndiaPost) ಈ ಯೋಜನೆ ಹೂಡಿದ ಹಣವನ್ನು ಡಬಲ್ (Double the money) ಮಾಡುವ ಮೂಲಕ ನಿಶ್ಚಿತ ಆದಾಯ ನೀಡುತ್ತದೆ. ಏನಿದು ದುಡ್ಡು ಡಬಲ್ ಮಾಡುವ ಸ್ಕೀಮು? ಈ ಯೋಜನೆಯ ಲಾಭ ಪಡೆಯುವುದು ಹೇಗೆ? ಇದರಿಂದ ಏನೆಲ್ಲ ಅನುಕೂಲಗಳಿವೆ? ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ…

ಅಂಚೆ ಇಲಾಖೆಯ ಈ ಯೋಜನೆ (IndiaPost saving schemes) ಅತ್ಯಂತ ಸುರಕ್ಷಿತ; ಮಾತ್ರವಲ್ಲ ಲಾಭದಾಯಕ ಕೂಡ ಹೌದು. ಏಕೆಂದರೆ ಇಲ್ಲಿ ಹೂಡಿದ ಹಣ 10 ವರ್ಷಗಳಲ್ಲಿ ಡಬಲ್ ಆಗುತ್ತದೆ. 50,000 ತೊಡಗಿಸಿ ಲಕ್ಷ ರೂಪಾಯಿ ಪಡೆಯಬಹುದು. 5 ಲಕ್ಷ ತೊಡಗಿಸಿ ನಿಶ್ಚಿತವಾಗಿ 10 ಲಕ್ಷ ರೂಪಾಯಿ ಪಡೆಯಬಹುದು. ಹೀಗೆ ಸಾವಿರ ರೂಪಾಯಿಯಿಂದ ಆರಂಭಿಸಿ ಕೋಟಿಗಟ್ಟಲೇ ಹಣ ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಹೈನುಗಾರಿಕೆಗೆ ₹10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ HDFC Bank Agriculture and Animal Husbandry Loan

ಏನಿದು ಕಿಸಾನ್ ವಿಕಾಸ್ ಪತ್ರ ಸ್ಕೀಮು?

ಭಾರತೀಯ ಅಂಚೆ ಇಲಾಖೆಯು ಕೆವಿಪಿ ಅರ್ಥಾತ್ ಕಿಸಾನ್ ವಿಕಾಸ್ ಪತ್ರ (Kisan Vikas Patra-KVP) ಎಂದು ಕರೆಯಲ್ಪಡುವ ಈ ಉಳಿತಾಯ ಯೋಜನೆನ್ನು 1988ರಲ್ಲಿ ಸಣ್ಣ ಉಳಿತಾಯ ಪ್ರಮಾಣಪತ್ರ ಯೋಜನೆಯಾಗಿ ಪರಿಚಯಿಸಿದೆ. ಇದು ಸುರಕ್ಷತೆ ಮತ್ತು ಲಾಭದ ವಿಚಾರದಲ್ಲಿ ಹೆಚ್ಚು ಆಕರ್ಷಕವಾಗಿದೆ. ಇಲ್ಲಿ ವಯಸ್ಕರರು ಮಾತ್ರವಲ್ಲದೇ ಅಪ್ರಾಪ್ತ ವಯಸ್ಕಕರರು ಕೂಡ ತೊಡಗಿಸಬಹುದು.

‘ಕಿಸಾನ್ ವಿಕಾಸ್ ಪತ್ರ’ ಉಳಿತಾಯ ಯೋಜನೆಯಡಿ ಗ್ಯಾರಂಟಿ ಆದಾಯ ಬಯಸುವವರು ನಿಸ್ಸಂದೇಹವಾಗಿ ಹೂಡಿಕೆ ಮಾಡಬಹುದು. ಜನರಲ್ಲಿ ದೀರ್ಘಾವಧಿಯ ಆರ್ಥಿಕ ಶಿಸ್ತನ್ನು ಉತ್ತೇಜಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಇತ್ತೀಚಿನ ಅಪ್‌ಡೇಟ್ ಪ್ರಕಾರ, ಈ ಯೋಜನೆಯಡಿ ಈಗ 09 ವರ್ಷ 05 ತಿಂಗಳಿಗೆ ಹೂಡಿಕೆದಾರರ ಹಣ ದ್ವಿಗುಣವಾಗುತ್ತದೆ. ಅಂದರೆ 115 ತಿಂಗಳಲ್ಲಿ ಹೂಡಿಕೆ ಡಬಲ್ ಆಗುತ್ತದೆ.

ಇದನ್ನೂ ಓದಿ: ಕೃಷಿ ಯಂತ್ರೋಪಕರಣ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ | ಮಿನಿ ಟ್ರ‍್ಯಾಕ್ಟರ್, ಪವರ್ ಟಿಲ್ಲರ್ ಇತ್ಯಾದಿ ಯಂತ್ರಗಳಿಗೆ ಆರ್ಥಿಕ ನೆರವು Farm Mechanization Scheme 2024

ಕನಿಷ್ಠ ಹೂಡಿಕೆ ಎಷ್ಟು?

ಕಿಸಾನ್ ವಿಕಾಸ ಪತ್ರ ಯೋಜನೆಗೆ ಕನಿಷ್ಠ 1,000 ರೂಪಾಯಿ ಹಣ ಹೂಡಿಕೆ ಮಾಡಬೇಕಾಗುತ್ತದೆ. ಹಣ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ. ವಾರ್ಷಿಕ ಶೇ. 7.5 ಬಡ್ಡಿ ಸಿಗುತ್ತದೆ. ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಡಿ ಹಣ ಹೂಡಿಕೆ ಮಾಡಬಹುದು. ಇದರಲ್ಲಿ ಟ್ರಸ್ಟ್’ಗಳು ಕೂಡ ಹಣ ಹೂಡಿಕೆ ಮಾಡಬಹುದು. ಆದರೆ, ಅನಿವಾಸಿ ಭಾರತೀಯರು (NRI) ಇದರಲ್ಲಿ ಹಣ ಹೂಡಿಕೆ ಮಾಡುವಂತಿಲ್ಲ.

ಖಾತೆ ತೆರೆಯಲು ಕನಿಷ್ಠ 18 ವರ್ಷ ಆಗಿರಬೇಕು. ಮೂವರು ವಯಸ್ಕರು ಒಟ್ಟಿಗೆ ಜಂಟಿ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರು ಅಥವಾ ಮಾನಸಿಕ, ದೈಹಿಕ ದುರ್ಬಲರ ಪರವಾಗಿ ಅವರ ಪೋಷಕರು ಖಾತೆಯನ್ನು ತೆರೆಯಲು ಅವಕಾಶವಿದೆ. ಇಂಥವರಿಗಾಗಿ ಸಿಂಗಲ್ ಹೋಲ್ಡರ್, ಜಾಯಿಂಟ್ ಎ ಹಾಗೂ ಜಾಯಿಂಟ್ ಬಿ ಎಂದು ಮೂರು ವಿಧಗಳು ಕಿಸಾನ್ ವಿಕಾಸ ಪತ್ರ ಯೋಜನೆಯಲ್ಲಿವೆ.

Kisan Vikas Patra (KVP) Post Office Saving Schemes

ಖಾತೆ ತೆರೆಯಲು ಬೇಕಾದ ದಾಖಲೆಗಳು

  • ಪಾಸ್ಪೋರ್ಟ್ ಸೈಜ್ ಫೋಟೋಗಳು
  • ಗುರುತಿನ ಚೀಟಿ (ಪಾನ್ ಕಾರ್ಡ್/ ಆಧಾರ್ ಕಾರ್ಡ್/ ಡ್ರೆöÊವಿಂಗ್ ಲೈಸೆನ್ಸ್/ ಪಾಸ್ಪೋರ್ಟ್)
  • ಮನೆಯ ವಿಳಾಸ ಪತ್ರ (ವಿದ್ಯುತ್ ಬಿಲ್, ಬ್ಯಾಂಕ್ ಪಾಸ್ ಬುಕ್, ಟೆಲಿಫೋನ್ ಬಿಲ್ ಇತ್ಯಾದಿ)
  • ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಂಬರ್ (50 ಸಾವಿರಕ್ಕಿಂತ ಹೆಚ್ಚು ಹೂಡಿಕೆ ಮಾಡುವಾಗ)

ಇದನ್ನೂ ಓದಿ: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ₹7 ಲಕ್ಷದ ವರೆಗೂ ಎಸ್‌ಬಿಐ ಆಶಾ ಸ್ಕಾಲರ್‌ಶಿಪ್ ಆರ್ಥಿಕ ನೆರವು | ಅರ್ಜಿ ಆಹ್ವಾನ SBI Asha Scholarship Program 2024

ಇದರಿಂದ ಆಗುವ ಅನುಕೂಲಗಳೇನು?

ಬಹುಮುಖ್ಯವಾಗಿ ಕಿಸಾನ್ ವಿಕಾಸ ಪತ್ರ ಯೋಜನೆಯಲ್ಲಿ ಹೂಡಿದ ಹಣ ಸುರಕ್ಷಿತವಾಗಿರುತ್ತದೆ; ಸುಭದ್ರವಾಗಿರುತ್ತದೆ. ನಿಗದಿತ ಅವಧಿಗೆ ದುಪ್ಪಟ್ಟಾಗುವ ಮೂಲಕ ನಿಶ್ಚಿತ ಆದಾಯ ನೀಡುತ್ತದೆ. ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಕಿಸಾನ್ ವಿಕಾಸ್ ಪತ್ರಗಳನ್ನು ಖರೀದಿಸಬಹುದು. ಈ ಪತ್ರವನ್ನು ಸಂಬ೦ಧಿಸಿದ ಅಂಚೆ ಕಚೇರಿಯಲ್ಲಿ ಸ್ವೀಕೃತಿ ಪತ್ರವಾಗಿ ಪಡೆದು ಭದ್ರತೆಯಾಗಿ ಅಡಮಾನವನ್ನೂ ಇಡಬಹುದು.

ಒಂದು ಅಂಚೆ ಕಚೇರಿಯಿಂದ ಮತ್ತೊಂದು ಕಚೇರಿಗೆ ವರ್ಗಾಯಿಸಬಹುದು. ಹೂಡಿಕೆ ಮಾಡಿದ ಎರಡೂವರೆ ವರ್ಷಗಳ ನಂತರ ವಾಪಾಸು ತೆಗೆದುಕೊಳ್ಳುವ ಅವಕಾಶವೂ ಇದೆ. ಒಂದು ವೇಳೆ ಖಾತೆದಾರರು ಆಕಸ್ಮಿಕವಾಗಿ ಸಾವನ್ನಪ್ಪದರೆ ಅವಧಿಗೆ ಮುನ್ನವೇ ಅವರ ಹೂಡಿಕೆಯನ್ನು ಹಿಂತೆಗೆದುಕೊ೦ಡು ಖಾತೆಯನ್ನು ಸ್ಥಗಿತಗೊಳಿಸಬಹುದು.

ಗಮನಾರ್ಹವೆಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಕಡಿತದ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಹಣವನ್ನು ವಾಪಾಸು ಪಡೆಯುವಾಗ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಅಂದರೆ ಪೂಣಾವಧಿ ನಂತರ ವಾಪಾಸು ಪಡೆಯುವ ಹಣದ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.

ಆಸಕ್ತರು ಕೂಡಲೇ ಹತ್ತಿರದ ಅಂಚೆ ಕಚೇರಿಯಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆ ಕುರಿತು ವಿಚಾರಿಸಬಹುದು. ಹೆಚ್ಚಿನ ಮಾಹಿತಿ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: ಕುರಿ ಮೇಕೆ ಸಾಕಾಣಿಕೆಗೆ ಸರ್ಕಾರದ ಈ ಯೋಜನೆಗಳಲ್ಲಿ ಸಿಗುತ್ತದೆ ಭರ್ಜರಿ ಸಾಲ ಮತ್ತು ಸಬ್ಸಿಡಿ | ₹5ರಿಂದ ₹10 ಲಕ್ಷ ವರೆಗೆ ಕಡಿಮೆ ಬಡ್ಡಿ ಸಾಲ ಸೌಲಭ್ಯ Sheep and Goat Farming Loan Schemes

WhatsApp Group Join Now
Telegram Group Join Now

Related Posts