2024-25ನೇ ಸಾಲಿನ ‘ಕೋಟಕ್ ಕನ್ಯಾ ಸ್ಕಾಲರ್‌ಶಿಪ್’ಗೆ (kotak kanya scholarship 2024) ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಉತ್ತೀರ್ಣರಾಗಿ ಉನ್ನತ ಶಿಕ್ಷಣ ಕಲಿಯಲಿಚ್ಛಿಸುವ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ ಬರೋಬ್ಬರಿ 1.5 ಲಕ್ಷ ರೂಪಾಯಿ ತನಕ ಆರ್ಥಿಕ ನೆರವು ಸಿಗಲಿದ್ದು; ಅರ್ಹತೆಯುಳ್ಳ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಇದು ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳು (Kotak Mahindra Group of Companies) ಮತ್ತು ಕೋಟಕ್ ಎಜುಕೇಶನ್ ಫೌಂಡೇಶನ್‌ನ (Kotak Education Foundation) ಸಹಯೋಗದ ಸ್ಕಾಲರ್‌ಶಿಪ್ ಯೋಜನೆಯಾಗಿದ್ದು; ಈ ಸ್ಕಾಲರ್‌ಶಿಪ್ ಕಡಿಮೆ ಆದಾಯದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ 12ನೇ ತರಗತಿಯ ನಂತರ ವೃತ್ತಿಪರ ಶಿಕ್ಷಣದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಆರ್ಥಿಕ ಸಹಾಯವನ್ನು ನೀಡುವ ಗುರಿ ಹೊಂದಿದೆ.
ಎಷ್ಟು ಸಿಗಲಿದೆ ಆರ್ಥಿಕ ನೆರವು?
ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಅವರ ವೃತ್ತಿಪರ ಪದವಿ ಕೋರ್ಸ್ ಅನ್ನು ಪೂರ್ಣಗೊಳಿಸುವ ವರೆಗೆ ಪ್ರತಿ ವರ್ಷಕ್ಕೆ 1.5 ಲಕ್ಷ ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
ಬೋಧನಾ ಶುಲ್ಕಗಳು, ಹಾಸ್ಟೆಲ್ ಶುಲ್ಕಗಳು, ಇಂಟರ್ನೆಟ್, ಸಾರಿಗೆ, ಲ್ಯಾಪ್‌ಟಾಪ್‌ಗಳು, ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ಒಳಗೊಂಡಂತೆ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಈ ವಿದ್ಯಾರ್ಥಿವೇತನದ ಮೊತ್ತವನ್ನು ಬಳಸಿಕೊಳ್ಳಬೇಕು.
ಅರ್ಹತೆಗಳೇನು?
‘ಕೋಟಕ್ ಕನ್ಯಾ ಸ್ಕಾಲರ್‌ಶಿಪ್’ ಯೋಜನೆಗೆ ಅರ್ಜಿ ಸಲ್ಲಿಸುವವರು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ 75% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯವು 6,00,000ಕ್ಕಿಂತ ಕಡಿಮೆ ಇರಬೇಕು.
ಎಂಜಿನಿಯರಿಂಗ್, ಎಂಬಿಬಿಎಸ್, ಬಿಡಿಎಸ್, ಇಂಟಿಗ್ರೇಟೆಡ್ ಎಲ್‌ಎಲ್‌ಬಿ (5 ವರ್ಷಗಳು) ಮುಂತಾದ ವೃತ್ತಿಪರ ಪದವಿಗಳಿಗೆ ಮಾನ್ಯತೆ ಪಡೆದ ಪ್ರತಿಷ್ಠಿತ ಸಂಸ್ಥೆಗಳಲ್ಲಿ 2024-25ರ ಶೈಕ್ಷಣಿಕ ವರ್ಷದಲ್ಲಿ ಮೊದಲ ವರ್ಷದ ಪದವಿಗೆ ಪ್ರವೇಶ ಪಡೆದಿರಬೇಕು.
ಯಾವೆಲ್ಲ ವೃತ್ತಿಪರ ಕೋರ್ಸ್’ಗೆ ನೆರವು ಸಿಗಲಿದೆ?
ಎಂಜಿನಿಯರಿಂಗ್, ಎಂಬಿಬಿಎಸ್, ಬಿಡಿಎಸ್, ಇಂಟಿಗ್ರೇಟೆಡ್ ಎಲ್‌ಎಲ್‌ಬಿ (5 ವರ್ಷಗಳು), ಬಿ. ಫಾರ್ಮಸಿ, ಬಿಎಸ್‌ಸಿ ಮುಂತಾದ ವೃತ್ತಿಪರ ಪದವಿ ಕೋರ್ಸ್ಗಳನ್ನು ಮುಂದುವರಿಸಲು ಬಯಸುವ ಹುಡುಗಿಯರು ಈ ಸ್ಕಾಲರ್‌ಶಿಪ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
NAAC/NIR ಮಾನ್ಯತೆ ಪಡೆದ ಸಂಸ್ಥೆಗಳಿಂದ ನರ್ಸಿಂಗ್, ಇಂಟಿಗ್ರೇಟೆಡ್ BS-MS/BS ರಿಸರ್ಚ್, ISER, IISC (ಬೆಂಗಳೂರು) ಅಥವಾ ವಿನ್ಯಾಸ, ಆರ್ಕಿಟೆಕ್ಚರ್ ಇತರ ವೃತ್ತಿಪರ ಕೋರ್ಸ್’ಗಳನ್ನು ಕಲಿಯಲು ಈ ಆರ್ಥಿಕ ನೆರವು ಸಿಗಲಿದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
- 12ನೇ ತರಗತಿಯ ಅಂಕಪಟ್ಟಿ
- ಕುಟುAಬ ಆದಾಯ ಪುರಾವೆ
- 2024-25 ಶೈಕ್ಷಣಿಕ ವರ್ಷದ ಶುಲ್ಕ ರಶೀದಿ
- ಕಾಲೇಜು ಪ್ರವೇಶ ಪರೀಕ್ಷೆಯ ಅಂಕಪಟ್ಟಿ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 30-11-2024
ಅರ್ಜಿ ಸಲ್ಲಿಕೆ ಲಿಂಕ್ : Apply Now