KPTCL Junior Powerman Recruitment 2024 : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು (Karnataka Electricity Transmission Corporation Limited – KPTCL) ಬಹಳ ದಿನಗಳ ನಂತರ ಬೃಹತ್ ಪ್ರಮಾಣದಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ವಿದ್ಯುತ್ ನಿಗಮದಲ್ಲಿ ಮಾತ್ರವಲ್ಲದೇ ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಸೆಸ್ಕಾಂ ಗಳಲ್ಲಿಯೂ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಬರೋಬ್ಬರಿ 2,975 ಕಿರಿಯ ಲೈನ್‌ಮನ್ (Junior Powerman) ಹಾಗೂ ಕಿರಿಯ ಸ್ಟೇಷನ್ ಪರಿಚಾರಕ (Junior Station Attendant) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೆ 10ನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
- ಕಿರಿಯ ಲೈನ್‌ಮನ್ (ಪವರ್‌ಮನ್) : 2,542
- ಕಿರಿಯ ಸ್ಟೇಷನ್ ಪರಿಚಾರಕ : 433
- ಒಟ್ಟು ಹುದ್ದೆಗಳು : 2,975
ಯಾವ್ಯಾವ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಎಷ್ಟೆಷ್ಟು ಹುದ್ದೆಗಳು?
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ
ಕಿರಿಯ ಸ್ಟೇಷನ್ ಪರಿಚಾರಕ : 380
ಕಿರಿಯ ಪವರ್ ಮನ್ : 75
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM)
ಕಿರಿಯ ಪವರ್ ಮನ್ : 618
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESCMYSORE)
ಕಿರಿಯ ಪವರ್ ಮನ್ : 270
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (HESCOM)
ಕಿರಿಯ ಪವರ್ ಮನ್ : 500
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM)
ಕಿರಿಯ ಪವರ್ ಮನ್ : 415
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (GESCOM)
ಕಿರಿಯ ಪವರ್ ಮನ್ : 15
ವೇತನ ಶ್ರೇಣಿ ಎಷ್ಟು?
ಕಿರಿಯ ಲೈನ್‌ಮನ್ (ಪವರ್‌ಮನ್) ಹಾಗೂ ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಮೊದಲು 3 ವರ್ಷ ಕ್ರೋಢೀಕೃತ ಸಂಭಾವನೆ ನೀಡಲಾಗುತ್ತಿದ್ದು; 1ನೇ ವರ್ಷ 17,000 ರೂ., 2ನೇ ವರ್ಷ 19,000 ರೂ., 3ನೇ ವರ್ಷ 21,000 ರೂ. ನಿಗದಿಪಡಿಸಲಾಗಿದೆ.
ಮೂರು ವರ್ಷ ತರಬೇತಿ ನಂತರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 28,550 ರೂ. – 63,000 ರೂ. ವೇತನ ಶ್ರೇಣಿ ಇರಲಿದೆ. ಜೊತೆಗೆ ಸರ್ಕಾರ ಎಲ್ಲ ಸವಲತ್ತುಗಳು ಅನ್ವಯವಾಗಲಿವೆ.
ಹುದ್ದೆಗಳ ಮೀಸಲಾತಿ
ಸಾಮಾನ್ಯ, ಗ್ರಾಮೀಣ ಮೀಸಲಾತಿ, ಮಾಜಿ ಸೈನಿಕ, ಕನ್ನಡ ಮಾಧ್ಯಮ ಅಭ್ಯರ್ಥಿ, ಯೋಜನೆ ನಿರಾಶ್ರಿತ ಅಭ್ಯರ್ಥಿ, ಅಂಗವಿಕಲ ಅಭ್ಯರ್ಥಿ (ಶ್ರವಣ ದೋಷ ಮಾತ್ರ), ತೃತೀಯ ಲಿಂಗ ಈ ಮೀಸಲಾತಿಯ ಸಂಖ್ಯೆಯು ಹುದ್ದೆಗಳಿಗೆ ಅನುಗುಣವಾಗಿ ಇರಲಿದೆ.
ಶೈಕ್ಷಣಿಕ ಅರ್ಹತೆ ಏನಿರಬೇಕು?
ಮೊದಲೇ ಹೇಳಿದಂತೆ ಕಿರಿಯ ಲೈನ್‌ಮನ್ (ಪವರ್‌ಮನ್) ಹಾಗೂ ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಪೂರ್ಣಗೊಳಿಸಿರಬೇಕು. ಯಾವುದೇ ತತ್ಸಮಾನ ವಿದ್ಯಾರ್ಹತೆಯನ್ನು ಮತ್ತು ಬಾಹ್ಯ ಅಥವಾ ವಿವಿ ಅಥವಾ ಮುಕ್ತ ಶಾಲೆಯಿಂದ ಪೂರ್ಣಗೊಳಿಸಿದ ವಿದ್ಯಾರ್ಹತೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
ಆಯ್ಕೆ ಪ್ರಕ್ರಿಯೆ ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ವಿದ್ಯುತ್ ಕಂಬ ಏರುವ, ಓಟ, ಸ್ಕಿಪ್ಪಿಂಗ್, ಶಾಟ್‌ಫುಟ್ ನಂತಹ ಸಹನ ಪರೀಕ್ಷೆ ನಡೆಸಲಾಗುತ್ತದೆ. ಸಹನ ಶಕ್ತಿ ಪರೀಕ್ಷೆಯು ಈ ಕೆಳಗಿನಂತಿರುತ್ತದೆ:
- ವಿದ್ಯುತ್ ಕಂಬ ಹತ್ತುವುದು : 8 ಮೀಟರ್ ಎತ್ತರ
- 100 ಮೀಟರ್ ಓಟ : 14 ಸೆಕೆಂಡುಗಳು
- ಸ್ಕಿಪ್ಪಿಂಗ್ : ಒಂದು ನಿಮಿಷಕ್ಕೆ 50 ಬಾರಿ
- ಶಾಟ್‌ಫುಟ್ (12 ಪೌಂಡ್‌ಗಳು) : 8 ಮೀಟರ್ ಎಸೆತ (3 ಅವಕಾಶ)
- 800 ಮೀಟರ್ ಓಟ : 3 ನಿಮಿಷಗಳು
ಸಹನ ಶಕ್ತಿ ಪರೀಕ್ಷೆಯಲ್ಲಿ ಕನಿಷ್ಠ ಮೂರು ಸ್ಪರ್ಧೆಗಳಲ್ಲಿ ಅರ್ಹತೆ ಹೊಂದುವ ಅಭ್ಯರ್ಥಿಗಳನ್ನು 10ನೇ ತರಗತಿಯ ಪರೀಕ್ಷೆಯ ವಿದ್ಯಾರ್ಹತೆಯಲ್ಲಿ ಗಳಿಸಿರುವ ಶೇಕಡಾವಾರು ಅಂಕಗಳ ಜೇಷ್ಠತೆ ಆಧಾರದ ಮೇಲೆ ರಾಜ್ಯ ಸರ್ಕಾರದಲ್ಲಿ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುತ್ತದೆ.
ವಯೋಮಿತಿ ವಿವರ
ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ, ಎಸ್ಸಿ/ಎಸ್ಟಿ, ಓಬಿಸಿ, ಅಂಗವಿಕಲ, ಮಾಜಿ ಸೈನಿಕ, ವಿಧವೆ ಅಭ್ಯರ್ಥಿಗಳ ಗರಿಷ್ಠ ವಯಸ್ಸಿನಲ್ಲಿ ವಯೋಮಿತಿ ಸಡಿಲಿಕೆ ಅನ್ವಯವಾಗಿಲಿದೆ.
ಅರ್ಜಿ ಶುಲ್ಕವೆಷ್ಟು?
ಸಾಮಾನ್ಯ ವರ್ಗ, ಪ್ರವರ್ಗ 1, 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳು 614 ರೂ., ಎಸ್ಸಿ/ಎಸ್ಟಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 354 ರೂ. ಅರ್ಜಿ ಶುಲ್ಕವನ್ನು ಅಂಚೆ ಕಚೇರಿ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಒಂದು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
- https://kptcl.karnataka.gov.in
- https://bescom.karnataka.gov.in
- https://cescmysore.karnataka.gov.in
- https://mescom.karnataka.gov.in
- https://hescom.karnataka.gov.in
- https://gescom.karnataka.gov.in
ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
21-10-2024 - ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
20-11-2024
ಅಧಿಸೂಚನೆ : Download