NewsSchemes

ರೈತರಿಗೆ ಕೃಷಿಭಾಗ್ಯ ಯೋಜನೆ ಸಹಾಯಧನ | ಮಳೆಯಾಶ್ರಿತ ರೈತರಿಗೆ ನೀರಾವರಿ ಸೌಲಭ್ಯ… krushi bhagya scheme 2024

WhatsApp Group Join Now
Telegram Group Join Now

krushi bhagya scheme 2024 :  2023-24ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ‘ಕೃಷಿ ಭಾಗ್ಯ’ ಯೋಜನೆಯನ್ನು (Krushi Bhagya Scheme) ರಾಜ್ಯ ಸರಕಾರ ಅನುಷ್ಠಾನಗೊಳಿಸಿದೆ. ಬದು ನಿರ್ಮಾಣ, ಕೃಷಿ ಹೊಂಡ, ಪಂಪ್ ಸೆಟ್, ಹನಿ/ತುಂತುರು ನೀರಾವರಿ ಸಹಾಯಧನಕ್ಕಾಗಿ ಅರ್ಹ ರೈತರು ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಕೃಷಿ ಭಾಗ್ಯ ಯೋಜನೆಯ ಘಟಕಗಳು

ಕೃಷಿ ಭಾಗ್ಯ ಯೋಜನೆಡಿ 5 ನೀರಾವರಿ ಘಟಕಗಳಿಗೆ ಸಹಾಯಧನವನ್ನು ಒದಗಿಸಲಾಗುತ್ತಿದ್ದು; ರೈತರು ಈ ಕೆಳಗಿನ ಎಲ್ಲಾ ಘಟಕಗಳನ್ನು ಅಳವಡಿಕೆ ಮಾಡಿಕೊಳ್ಳಲು ಮನವರಿಕೆ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದೆ.

ಕ್ಷೇತ್ರ ಬದು ನಿರ್ಮಾಣ : ರೈತರ ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಪೋಲಾಗದಂತೆ ಅದೇ ಕೃಷಿ ಭೂಮಿಯಲ್ಲಿ ಇಂಗಿಸಲು ಹಾಗೂ ಕೃಷಿ ಹೊಂಡದಲ್ಲಿ ಸಂಗ್ರಹಿಸಲು ಕ್ಷೇತ್ರ ಬದು ನಿರ್ಮಾಣಕ್ಕೆ ಸಹಾಯಧನ ಒದಗಿಸಲಾಗುತ್ತದೆ.

ಕೃಷಿ ಹೊಂಡ : ಇದು ಕೃಷಿ ಭಾಗ್ಯ ಯೋಜನೆಯ ಮುಖ್ಯ ಘಟಕವಾಗಿದ್ದು; ನೀರು ಸಂಗ್ರಹಣಾ ರಚನೆ ಅಂದರೆ ಕೃಷಿ ಹೊಂಡ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ. ಎಲ್ಲಾ ರೀತಿಯ ಮಣ್ಣುಗಳಲ್ಲಿ ಮಳೆ ನೀರು ಸಂಗ್ರಹಣೆಗಾಗಿ 10X10X3 ಮೀಟರ್, 12X12X3 ಮೀಟರ್, 15X15X3 ಮೀಟರ್, 18X18X3 ಮೀಟರ್ ಹಾಗೂ 21X21X3 ಮೀಟರ್ ಅಳತೆಯ ಕೃಷಿ ಹೊಂಡಗಳನ್ನು ರೈತರು ತಮ್ಮ ಭೂಮಿಯಲ್ಲಿ ನಿರ್ಮಾಣ ಮಾಡಿಕೊಳ್ಳಬಹುದು.

ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Stone Fencing) : ಈ ಹಿಂದೆ ಕೃಷಿಹೊಂಡದಲ್ಲಿ ಅನೇಕ ಆಕಸ್ಮಿಕ ಸಾವು, ನೋವುಗಳು ಸಂಭವಿಸಿದ ವರದಿಯಾಗಿದ್ದರಿಂದ ಇದನ್ನು ತಡೆಯಲು ಕಡ್ಡಾಯವಾಗಿ ಕೃಷಿಹೊಂಡದ ಸುತ್ತಲೂ ತಂತಿಬೇಲಿ ಅಳವಡಿಸಿಕೊಳ್ಳಲು ಸಹಾಯಧನ ಲಭ್ಯವಿದೆ.

ಹೊಂಡದಿ೦ದ ನೀರು ಎತ್ತಲು ಪಂಪ್‌ಸೆಟ್ : ಇನ್ನು ಕೃಷಿಹೊಂಡದಲ್ಲಿ ಸಂಗ್ರಹಣೆಯಾದ ನೀರನ್ನು ರೈತರು ಬೆಳೆಗಳಿಗೆ ಬಳಸಿಕೊಳ್ಳಲು ಡೀಸೆಲ್/ ಪೆಟ್ರೋಲ್ ಅಥವಾ ಸೋಲಾರ್ ಪಂಪ್‌ಸೆಟ್ ಖರೀದಿಸಲಿ ಅವಕಾಶವಿದೆ.

ನೀರನ್ನು ಹಾಯಿಸಲು ಹನಿ/ ತುಂತುರು ನೀರಾವರಿ : ಅದೇ ರೀತಿ ಕೃಷಿ ಹೊಂಡಗಳಲ್ಲಿ ಸಂಗ್ರಹಣೆಯಾದ ಮಳೆ ನೀರನ್ನು ಅವಶ್ಯಕತೆ ಇದ್ದಾಗ ಬೆಳೆಗಳಿಗೆ ಬಳಸಿಕೊಳ್ಳಲು ಸೂಕ್ಷö್ಮ ನೀರಾವರಿ ಘಟಕಗಳ ಪರಿಕರಗಳನ್ನು ಸಬ್ಸಿಡಿಯಲ್ಲಿ ವಿತರಣೆ ಮಾಡಲಾಗುತ್ತದೆ.

ಯಾವೆಲ್ಲ ಜಿಲ್ಲೆಯ ರೈತರು ಅರ್ಜಿ ಸಲ್ಲಿಸಲು ಅರ್ಹರು?

ಮಳೆಯಾಶ್ರಿತ ಕೃಷಿನೀತಿ 2014ರ ಅನ್ವಯ ರಾಜ್ಯದ 5 ಒಣ ಹವಾಮಾನ ವಲಯಗಳ 24 ಬರಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕುಗಳು ಹಾಗೂ ಗಣಿಗಾರಿಕೆಯಿಂದ ಬಾಧಿತ ಪ್ರದೇಶದ ರೈತರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಈ ಕೆಳಗಿನ 24 ಜಿಲ್ಲೆಗಳಲ್ಲಿ ಕೃಷಿಭಾಗ್ಯ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ದಾವಣಗೆರೆ, ಗದಗ, ಹಾಸನ, ಕಲಬುರಗಿ, ಕೋಲಾರ, ಕೊಪ್ಪಳ ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ವಿಜಯಪುರ, ವಿಜಯನಗರ, ಯಾದಗಿರಿ ಜಿಲ್ಲೆಗಳ 106 ಆಯ್ದ ತಾಲ್ಲೂಕುಗಳ ರೈತರು ಕೃಷಿಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು
  • ಭರ್ತಿ ಮಾಡಿದ ಅರ್ಜಿ ನಮೂನೆ
  • ರೈತರ ಭಾವ ಚಿತ್ರ
  • ಎಫ್‌ಐಡಿ ನಂಬರ್, ಎಫ್‌ಐಡಿ ಇಲ್ಲದಿದ್ದರೆ ಆಧಾರ್ ಪ್ರತಿ
  • ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್‌ಬುಕ್
ಅರ್ಜಿ ಸಲ್ಲಿಕೆ ಹೇಗೆ?

ಆಯಾಯ ಜಿಲ್ಲೆಗಳ ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಸ್ವೀಕೃತವಾದ ಅರ್ಜಿಗಳ ಹಿರಿತನದ ಆಧಾರದ ಮೇಲೆ ಹಾಗೂ ಆಯಾ ಹೋಬಳಿಗೆ ನಿಗದಿಪಡಿಸಿದ ಗುರಿಯ ಆಧಾರದ ಮೇಲೆ ಯೋಗ್ಯ ರೈತರಿಗೆ ಯೋಜನೆಯ ವಿವಿಧ ಘಟಕಗಳಿಗೆ ಸಹಾಯಧ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.

ಕೃಷಿಭಾಗ್ಯ ಯೋಜನೆ ಅನ್ವಯವಾಗುವ 106 ತಾಲ್ಲೂಕುಗಳ ಪಟ್ಟಿಗಾಗಿ ಇಲ್ಲಿ ಒತ್ತಿ…

ಕೃಷಿಭಾಗ್ಯ ಯೋಜನೆ ಕುರಿತ ಸರಕಾದ ನಡಾವಳಿ ಹಾಗೂ ಯೋಜನೆಯ ಸಮಗ್ರ ಮಾರ್ಗಸೂಚಿ ಓದಲು  ಇಲ್ಲಿ ಒತ್ತಿ…

WhatsApp Group Join Now
Telegram Group Join Now

Related Posts