EducationNews

2024-25ನೇ ಸಾಲಿನ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ Labour Card Scholarship 2024 KBOCWWB

WhatsApp Group Join Now
Telegram Group Join Now

Labour Card Scholarship 2024 KBOCWWB : ರಾಜ್ಯ ಸರ್ಕಾರವು 2024-25ನೇ ಸಾಲಿನ ಅರ್ಹ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಶೈಕ್ಷಣಿಕ ಧನಸಹಾಯಕ್ಕಾಗಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿ೦ದ (Building and Other Construction Workers Welfare Board) ಅರ್ಜಿ ಆಹ್ವಾನಿಸಿದೆ.

ಸದರಿ ಲೇಬರ್ ಕಾರ್ಡ್ ವಿದ್ಯಾರ್ಥಿವೇತನವು (Labour Card Scholarship 2024) ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಾಗಿದ್ದು; ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶೇ.50ರಷ್ಟು ಮತ್ತು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಶೇ.45 ಅಂಕ ಪಡೆದ ವಿದ್ಯಾರ್ಥಿಗಳು ಎಸ್‌ಎಸ್‌ಪಿ (state scholarship portal – SSP) ತಂತ್ರಾ೦ಶದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಈಗಾಗಲೆ ಅರ್ಜಿ ಸಲ್ಲಿಸಿದ್ದವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.

ಯಾವ ವಿದ್ಯಾರ್ಥಿಗೆ ಎಷ್ಟು ಧನಸಹಾಯ?
  • ಪ್ರೌಢಶಾಲೆ ವಿದ್ಯಾರ್ಥಿಗಳಿಗೆ : 3,000 ರೂ.
  • ಪಿಯುಸಿ, ಐಟಿಐ, ಡಿಪ್ಲೊಮಾ, ಟಿಸಿಎಚ್ ವಿದ್ಯಾರ್ಥಿಗಳಿಗೆ : 4,000 ರೂ.
  • ಪದವಿ ವಿದ್ಯಾರ್ಥಿಗಳಿಗೆ : 5,000 ರೂ.
  • ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ : 6,000 ರೂ.
  • ಇಂಜಿನಿಯರಿ೦ಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ : 10,000 ರೂ.
ಆಧಾರ್ ಲಿಂಕ್ (ಸೀಡ್) ಕಡ್ಡಾಯ

ಅರ್ಹ ವಿದ್ಯಾರ್ಥಿಗಳು ಸದರಿ ಶೈಕ್ಷಣಿಕ ಧನಸಹಾಯವನ್ನು ಪಡೆಯಲು ಎಸ್‌ಎಸ್‌ಪಿ ತಂತ್ರಾ೦ಶದ ಮೂಲಕ https://kbocwwb.karnataka.gov.in/ ಉಪಯೋಗಿಸಿಕೊಂಡು ಮಂಡಳಿಯ ತಂತ್ರಾ೦ಶದಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಆಧಾರ್ ಲಿಂಕ್ (ಸೀಡ್) ಮಾಡಬೇಕು.

ಎಸ್‌ಎಸ್‌ಪಿ ತಂತ್ರಾ೦ಶದ ಮೂಲಕ ಶೈಕ್ಷಣಿಕ ಧನಸಹಾಯ ಪಡೆಯಲು ಆಧಾರ್ ಲಿಂಕ್ (Aadhaar Link -SEED) ಅಗತ್ಯವಾಗಿರುವುದರಿಂದ ಈಗಾಗಲೇ ಆಧಾರ್ ಸಂಖ್ಯೆಯನ್ನು ಲಿಂಕ್ (ಸೀಡ್) ಮಾಡದೇ ಇರುವ ಎಲ್ಲಾ ಕಾರ್ಮಿಕರು ಕೂಡಲೇ ಬ್ಯಾಂಕ್ ಖಾತೆಯೊಂದಿಗೆ ನೋಂದಣಿ ಮಾಡಿ ಎನ್‌ಪಿಸಿಐ ಮ್ಯಾಪಿಂಗ್ (NPCI Mapping) ಮಾಡಿಸಬೇಕು.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
    30-11-2024
  • ಅರ್ಜಿ ಸಲ್ಲಿಕೆ ಲಿಂಕ್ : Apply ಮಾಡಿ
WhatsApp Group Join Now
Telegram Group Join Now

Related Posts