MGNREGA Scheme Sheep Goat Cow Shed Subsidy : ನರೇಗಾ ಯೋಜನೆಯಡಿ ಕುರಿ-ಮೇಕೆ ಶೆಡ್ (Sheep-Goat Shed), ದನದ ಕೊಟ್ಟಿಗೆ (Cattle Shed), ಕೋಳಿ ಶೆಡ್, ಹಂದಿ ಶೆಡ್ (Pig shed) ನಿರ್ಮಾಣಕ್ಕೆ ಸಹಾಯಧನ (Subsidy) ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ರೈತರು, ಹೈನುಗಾರರು ಹಾಗೂ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯ (Mahatma Gandhi Narega Yojana) ಮೂಲಕ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ನರೇಗಾ ಯೋಜನೆಯಡಿ (mgnrega.karnataka) ಹಳ್ಳಿಗಳಲ್ಲಿ ವಾಸವಿರುವ ಒಂದು ಕುಟುಂಬವು ಬರೋಬ್ಬರಿ 5 ಲಕ್ಷ ರೂಪಾಯಿಗಳ ವರೆಗೂ ವೈಯಕ್ತಿಕ ಕಾಮಗಾರಿ ಪಡೆಯಲು ಅವಕಾಶವಿದೆ.
ಹಸು, ಎಮ್ಮೆ, ಕುರಿ, ಕೋಳಿ, ಹಂದಿ ಸಾಕಾಣಿಕೆ ಮೂಲಕ ಸ್ವಯಂ ಉದ್ಯೋಗ ಮಾಡಲು ಇಚ್ಛಿಸುವವರು ಕೊಟ್ಟಿಗೆ ನಿರ್ಮಾಣದಂತಹ ವೈಯಕ್ತಿಕ ಕಾಮಗಾರಿ ಪಡೆಯಬಹುದು. ಗ್ರಾಮೀಣ ಪ್ರದೇಶದ ಜನರು ತಮಗೆ ಬೇಕಾದ ವೈಯಕ್ತಿಕ ಕಾಮಗಾರಿ ಪಡೆಯಲು ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ವೈಯಕ್ತಿಕ ಕಾಮಗಾರಿಯ ಹೆಸರು ನೋಂದಾಯಿಸಿಕೊಂಡರೆ ಹಲವು ಪ್ರಯೋಜನ ಸಿಗಲಿವೆ.
ಪಶುಪಾಲನೆಗೆ ಭರ್ಜರಿ ಸಹಾಯಧನ
ಇಂದು ಆಡು-ಕುರಿ, ಆಕಳು, ಎಮ್ಮೆ, ಹಂದಿ, ಕೋಳಿ ಸೇರಿದಂತೆ ಒಟ್ಟಾರೆ ಪಶುಪಾಲನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಿವೆ. ಇದಕ್ಕಾಗಿ ಸಾಕಷ್ಟು ಸಾಲ ಮತ್ತು ಸಹಾಯಧನ ಕೂಡ ಸಿಗುತ್ತಿದೆ. ಹೀಗಾಗಿ ಅನೇಕ ವಿದ್ಯಾವಂತ ಯುವಜನ ಪಶು ಸಂಗೋಪನೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಗ್ರಾಮೀಣ ಭಾಗದ ಜನತೆಗೆ ಜಾನುವಾರು ಸಾಕಾಣಿಕೆೆ ಬದುಕಿನ ಭಾಗವೇ ಆಗಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾನುವಾರುಗಳ ಶೆಡ್ ನಿರ್ಮಾಣಕ್ಕೆ ಸಹಾಯಧನ ಪಡೆಯಬಹುದಾಗಿದೆ.
ಪರಿಷ್ಕೃತ ಆದೇಶದನ್ವಯ ಆಡು-ಕುರಿ, ಆಕಳು, ಎಮ್ಮೆ, ಹಂದಿ, ಕೋಳಿ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಸಿಗಲಿರುವ ಸಹಾಯಧನದ ಅಂದಾಜು ಮೊತ್ತ ಈ ಕೆಳಗಿನಂತಿದೆ:
- ಕುರಿ/ಮೇಕೆ ದೊಡ್ಡಿ ₹70,000
- ಹಂದಿ ಶೆಡ್ ₹87,000
- ದನದ ಕೊಟ್ಟಿಗೆ ₹57,000
- ಕೋಳಿ ಶೆಡ್ ₹60,000
ಈ ಸಹಾಯಧನ ಪಡೆಯುವುದು ಹೇಗೆ?
ನರೇಗಾ ಯೋಜನೆಯ ಈ ಎಲ್ಲ ಸಹಾಯಧನ ಪಡೆಯಲು ಮುಖ್ಯವಾಗಿ ಫಲಾನುಭವಿಗಳು ಉದ್ಯೋಗ ಚೀಟಿ ಅಥವಾ ಜಾಬ್ ಕಾರ್ಡ್ ಹೊಂದಿರಬೇಕು. ನಿಮ್ಮ ಕುಟುಂಬದ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ಸದಸ್ಯರ ಭಾವಚಿತ್ರ, ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಜೆರಾಕ್ಸ್ ಪ್ರತಿಯೊಂದಿಗೆ ನಮೂನೆ 1ನ್ನು ಭರ್ತಿ ಮಾಡಿ ನಿಮ್ಮ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸುವ ಮೂಲಕ ಜಾಬ್ಕಾರ್ಡ್ ಪಡೆಯಬಹುದು.
ಉದ್ಯೋಗ ಚೀಟಿ ಹೊಂದಿರುವವರು ವೈಯಕ್ತಿಕ ಕಾಮಗಾರಿಗಾಗಿ ನಮೂನೆ-6ರಲ್ಲಿ ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಬಹುದು. ಅಥವಾ ಮನೆಯಲ್ಲಿಯೇ ಕುಳಿತು ಕಾಯಕ ಮಿತ್ರ ಮೊಬೈಲ್ ಆ್ಯಪ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಬಳಿಕ ಅರ್ಹತೆಗಳಿಗೆ ಅನುಸಾರವಾಗಿ ಸಹಾಯಧನ ಬಿಡುಗಡೆಯಾಗುವುದು.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಅರ್ಹ ಕುಟುಂಬದ ಎಲ್ಲಾ ಮಹಿಳೆ ಮತ್ತು ಪುರುಷರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಷ್ಟೇ ಅಲ್ಲದೇ ವಿಶೇಷ ಚೇತನರು ಹಾಗೂ 65 ವರ್ಷ ಮೇಲ್ಪಟ್ಟ ವಯೋವೃದ್ಧರಿಗೂ ಕೆಲವು ವಿನಾಯಿತಿ ಸಹಿತ ಉದ್ಯೋಗ ಪಡೆಯಬಹುದಾಗಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೂ 100 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತಿದೆ.
ನರೇಗಾ ಯೋಜನೆಯಡಿ ನೋಂದಾಯಿತ ಒಂದು ಅರ್ಹ ಕುಟುಂಬ ತನ್ನ ಜೀವಿತಾವಧಿಯಲ್ಲಿ ಗರಿಷ್ಠ 5 ಲಕ್ಷ ರೂಪಾಯಿ ವರೆಗೆ ನೀಡಲಾಗುವ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಬರ-ನೆರೆಯಿಂದ ಕಂಗೆಟ್ಟಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಈ ನೆರವು ಅತ್ಯಂತ ಸಹಕಾರಿಯಾಗಿದೆ. ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡುವ ಮೂಲಕ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಒತ್ತಿ…