MGNREGA Technical Assistant Recruitment 2024 : ಜಿಲ್ಲಾ ಪಂಚಾಯತಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (Mahatma Gandhi National Rural Employment Guarantee Scheme – MGNREGA) ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ತಾಂತ್ರಿಕ ಸಹಾಯಕರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ನೇಮಕಾತಿ ಸಂಕ್ಷಿಪ್ತ ವಿವರ
- ನೇಮಕಾತಿ ಇಲಾಖೆ : ಗದಗ ಜಿಲ್ಲಾ ಪಂಚಾಯತಿ
- ಉದ್ಯೋಗ ಸಂಸ್ಥೆ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)
- ಹುದ್ದೆಗಳ ಹೆಸರು : ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ತಾಂತ್ರಿಕ ಸಹಾಯಕರು
- ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
- ಒಟ್ಟು ಹುದ್ದೆಗಳು : 06+05+05=16 ಹುದ್ದೆಗಳು
- ಉದ್ಯೋಗ ಸ್ಥಳ : ಗದಗ ಜಿಲ್ಲೆ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (MGNREGA) ಖಾಲಿ ಇರುವ ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ತಾಂತ್ರಿಕ ಸಹಾಯಕರ ಹುದ್ದೆಗಳ ನೇರ ನೇಮಕಾತಿಗೆ ಗದಗ ಜಿಲ್ಲಾ ಪಂಚಾಯತಿ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ, ವಯೋಮಿತಿ, ಮಾಸಿಕ ವೇತನ, ಪ್ರಯಾಣ ಭತ್ಯೆ, ಅರ್ಜಿ ಸಲ್ಲಿಕೆ ವಿಧಾನ ಕುರಿತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು; ಕಂಪ್ಯೂಟರ್ ಜ್ಞಾನ ಹಾಗೂ ಕನ್ನಡ – ಇಂಗ್ಲಿಷ್ ಭಾಷೆ ತಿಳಿದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಹತೆ ಮತ್ತು ಅನುಭವದ ವಿವರ
- ಕೃಷಿ / ತಾಂತ್ರಿಕ ಸಹಾಯಕರು : ಒಟ್ಟು 06 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. B.Sc (Agriculture), M.Sc (Agriculture) ಪದವೀಧರರಿಗೆ ಮೊದಲ ಆದ್ಯತೆ ಇದ್ದು; ಆಯಾ ಕಾರ್ಯಕ್ಷೇತ್ರದಲ್ಲಿ ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅನುಭವ ಹೊಂದಿರಬೇಕು.
- ತೋಟಗಾರಿಕೆ / ತಾಂತ್ರಿಕ ಸಹಾಯಕರು : ಒಟ್ಟು 05 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. B.Sc (Horticulture), M.Sc (Horticulture) ಪದವೀಧರರಿಗೆ ಮೊದಲ ಆದ್ಯತೆ ಇದ್ದು; ಆಯಾ ಕಾರ್ಯಕ್ಷೇತ್ರದಲ್ಲಿ ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅನುಭವ ಹೊಂದಿರಬೇಕು.
- ಅರಣ್ಯ / ತಾಂತ್ರಿಕ ಸಹಾಯಕರು : ಒಟ್ಟು 05 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. B.Sc (Forestry), M.Sc (Forestry) ಪದವೀಧರರಿಗೆ ಮೊದಲ ಆದ್ಯತೆ ಇದ್ದು; ಆಯಾ ಕಾರ್ಯಕ್ಷೇತ್ರದಲ್ಲಿ ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅನುಭವ ಹೊಂದಿರಬೇಕು.
ಮಾಸಿಕ ವೇತನ, ವಯೋಮಿತಿ ವಿವರ
ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ತಾಂತ್ರಿಕ ಸಹಾಯಕರು ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳಿಗೆ ಮಾಸಿಕ 24,000 ರೂಪಾಯಿ ವೇತನ ಹಾಗೂ ಪ್ರತೀ ತಿಂಗಳು ಗರಿಷ್ಠ 2000 ರೂಪಾಯಿ ಪ್ರಯಾಣ ಭತ್ಯೆ ನಿಗದಿಪಡಿಸಲಾಗಿದೆ. ಕನಿಷ್ಠ 21, ಗರಿಷ್ಠ 40 ವಯೋಮತಿಯಲ್ಲಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
20-08-2024 - ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
31-08-2024 - ದಾಖಲಾತಿ ಪರಿಶೀಲನೆ ದಿನಾಂಕ :
05-09-2024 - ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ದಿನಾಂಕ :
13-09-2024
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು https://gadag.nic.in ವೆಬ್‌ಸೈಟ್’ನಲ್ಲಿ ಆನ್‌ಲೈನ್ ಮೂಲಕ ನಿಗದಿತ ಅವಧಿಯೊಳಗೆ ಭರ್ತಿ ಮಾಡಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಒಉಓಖಇಉಂ) ಗದಗ ಜಿಲ್ಲೆಯ ವಿಷಯ ನಿರ್ವಾಹಕ ತೋಟಪ್ಪ ಕುದರಿ (ಮೊ:7619652017) ಅವರನ್ನು ಸಂಪರ್ಕಿಸಬಹುದು.
ಅರ್ಜಿ ಸಲ್ಲಿಕೆ ಲಿಂಕ್ : Apply ಮಾಡಿ