ಪಿಯುಸಿ, ಪದವಿಧರರಿಗೆ ಕೋ-ಅಪರೇಟಿವ್ ಸೊಸೈಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ 42,000 ರೂಪಾಯಿ Multipurpose CoOperative Society Recruitment

Spread the love

Multipurpose CoOperative Society Recruitment : ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಪಿಯುಸಿ, ಪದವಿಧರ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸುವ ಮೂಲಕ ಈ ಸದಾವಕಾಶ ಬಳಸಿಕೊಳ್ಳಬಹುದಾಗಿದೆ.

ನೇಮಕಾತಿ ಸಂಕ್ಷಿಪ್ತ ವಿವರ
  • ನೇಮಕಾತಿ ಸೊಸೈಟಿ : ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ)
  • ಹುದ್ದೆಗಳ ಹೆಸರು : ಗುಮಾಸ್ತ ಹಾಗೂ ಕಚೇರಿ ಸಹಾಯಕ
  • ಅರ್ಜಿ ಸಲ್ಲಿಕೆ : ಆಫ್‌ಲೈನ್ ಮುಖಾಂತರ
  • ಒಟ್ಟು ಹುದ್ದೆಗಳು : 15+09 ಹುದ್ದೆಗಳು
  • ಉದ್ಯೋಗ ಸ್ಥಳ : ಮಂಗಳೂರು
WhatsApp Group Join Now
Telegram Group Join Now

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಖಾಲಿ ಇರುವ ಗುಮಾಸ್ತ ಹಾಗೂ ಕಚೇರಿ ಸಹಾಯಕರ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ Home loan complete information

Multipurpose CoOperative Society Recruitment
ವಿದ್ಯಾರ್ಹತೆ ಏನಿರಬೇಕು?

ಮೊದಲೇ ಹೇಳಿದಂತೆ ಪಿಯುಸಿ ಮತ್ತು ಪದವೀಧರ ಅರ್ಹ ಅಭ್ಯರ್ಥಿಗಳಿಗೆ ಅವಕಾಶವಿದ್ದು ಗುಮಾಸ್ತಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ದ್ವಿತೀಯ ದರ್ಜೆಯಲ್ಲಿ ಪದವೀಧರರಾಗಿರಬೇಕು.

ಕಂಪ್ಯೂಟರ್ ಅಪರೇಷನ್ ಮತ್ತು ಅಪ್ಲಿಕೇಶನ್‌ನಲ್ಲಿ ಜ್ಞಾನ ಹೊಂದಿರಬೇಕು. ಜೊತೆಗೆ ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು.

ಇನ್ನು ಕಚೇರಿ ಸಹಾಯಕಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಎಸ್.ಎಸ್.ಎಲ್‌ಸಿಯಲ್ಲಿ ಉತ್ತೀರ್ಣರಾಗಿದ್ದು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.

ಇದನ್ನೂ ಓದಿ: ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ 14,000 ಹುದ್ದೆಗಳ ನೇಮಕಾತಿ : SSLC, PUC ಪಾಸಾದವರಿಗೂ ಅವಕಾಶ Health Department Recruitment 2024

ವಯೋಮಿತಿ ವಿವರ

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಖಾಲಿ ಇರುವ ಗುಮಾಸ್ತ ಹಾಗೂ ಕಚೇರಿ ಸಹಾಯಕರ ಹುದ್ದೆಗಳಿಗೆ ಭ್ಯರ್ಥಿಗಳಿಗೆ ಕನಿಷ್ಟ 18 ವರ್ಷ ಆಗಿರಬೇಕು. ಗರಿಷ್ಟ ವಯೋಮಿತಿ ಸಾಮಾನ್ಯ ವರ್ಗದವರಿಗೆ 35 ವರ್ಷ, ಹಿಂದುಳಿದ ವರ್ಗದವರಿಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 40 ವರ್ಷಗಳನ್ನು ನಿಗದಿಪಡಿಸಲಾಗಿದೆ.

ಮಾಸಿಕ ವೇತನದ ವಿವರ

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಖಾಲಿ ಇರುವ ಗುಮಾಸ್ತ ಹುದ್ದೆಗಳಿಗೆ 21,400 ರಿಂದ 42,000 ರೂಪಾಯಿ ಹಾಗೂ ಕಚೇರಿ ಸಹಾಯಕರ ಹುದ್ದೆಗಳಿಗೆ 17,000 ರಿಂದ 28,950 ರೂಪಾಯಿ ಮಾಸಿಕ ಸಂಬಳ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ರಾಷ್ಟ್ರೀಕೃತ ಬ್ಯಾಂಕುಗಳ 5,351 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ IBPS Recruitment 2024

ಅರ್ಜಿ ಶುಲ್ಕದ ವಿವರ

ಸಂಘದ ಪ್ರಧಾನ ಕಚೇರಿಯಿಂದ ಕಚೇರಿ ವೇಳೆಯಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು 500 ರೂಪಾಯಿ ಹಾಗೂ ಇತರ ವರ್ಗಗಳ ಅಭ್ಯರ್ಥಿಗಳು 1000 ರೂಪಾಯಿ (ಜಿಎಸ್‌ಟಿ ಪ್ರತ್ಯೇಕ) ಅರ್ಜಿ ಶುಲ್ಕ ಪಾವತಿಸಿ ಪಡೆಯಬಹುದು.

Multipurpose CoOperative Society Recruitment
ನೇಮಕ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಕೆ ವಿವರ

ಅಭ್ಯರ್ಥಿಗಳಿಗೆ ಸಹಕಾರ ಸಂಘಗಳ ನಿಯಮ 18(ಸಿ)ರಂತೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆ ಸ್ಥಳ, ದಿನಾಂಕ, ಸಮಯವನ್ನು ಅರ್ಹ ಅಭ್ಯರ್ಥಿಗಳಿಗೆ ತಿಳಿಸಲಾಗುತ್ತದೆ. ಅರ್ಜಿಯೊಂದಿಗೆ ಹುದ್ದೆಗೆ ಸಂಬAಧಿಸಿದ ವಿದ್ಯಾರ್ಹತೆಯ ಅಂಕಪಟ್ಟಿಯ ಪ್ರತಿ ನೀಡಬೇಕು.

ಸಂಘದಿ೦ದ ಪಡೆದ ನಿಗದಿತ ಅರ್ಜಿ ನಮೂನೆಯನ್ನು ದಿನಾಂಕ 25-08-2024ರ ಸಂಜೆ 4.00 ಗಂಟೆಯ ಒಳಗೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) (ನೋಂದಣೆ ನಂ 19206) ಜೆಪ್ಪು, ಮೋರ್ಗನ್ಸ್ ಗೇಟ್, ಮಂಗಳೂರು-575002 ಈ ವಿಳಾಸಕ್ಕೆ ಸಲ್ಲಿಸಬೇಕು.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಸಂಘದ ಕಚೇರಿ ದೂರವಾಣಿ ಸಂಖ್ಯೆ 0824-2415227 ಸಂಪರ್ಕಿಸಬಹುದು.

ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ? Personal Loans Schemes


Spread the love
WhatsApp Group Join Now
Telegram Group Join Now

Leave a Comment

error: Content is protected !!