JobsNews

ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ನಬಾರ್ಡ್ ಬ್ಯಾಂಕಿನಲ್ಲಿ ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ₹35,000 ರೂಪಾಯಿ ಮಾಸಿಕ ವೇತನ NABARD Office Attendant Recruitment 2024

WhatsApp Group Join Now
Telegram Group Join Now

NABARD Office Attendant Recruitment 2024 : ಭಾರತದ ಸರ್ಕಾರ ಅಧೀನದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (NABARD – National Bank For Agriculture And Rural Development) ಗ್ರೂಪ್ ‘ಸಿ’ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೇವಲ SSLC ವಿದ್ಯಾರ್ಹತೆ ಹೊಂದಿದ್ದರೆ ಸಾಕು ಈ ಉದ್ಯೋಗಾವಕಾಶ ಬಳಸಿಕೊಳ್ಳಬಹುದು.

ಹೌದು, ದೇಶದ ಕೃಷಿ ಮತ್ತು ಗ್ರಾಮೀಣ ವಲಯದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾಗಿರುವ ನಬಾರ್ಡ್ ಬ್ಯಾಂಕಿನಲ್ಲಿ ಖಾಲಿ ಇರುವ ಕಚೇರಿ ಪರಿಚಾರಕ (Office Attendant) ಹುದ್ದೆಗಳಿಗೆ ಅರ್ಜಿ ಆಹ್ವನಿಸಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅಕ್ಟೋಬರ್ 21ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ಸಂಕ್ಷಿಪ್ತ ವಿವರ
  • ಉದ್ಯೋಗ ಸಂಸ್ಥೆ : ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (NABARD)
  • ಹುದ್ದೆಗಳ ಹೆಸರು : ಆಫೀಸ್ ಅಟೆಂಡರ್
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
  • ಒಟ್ಟು ಹುದ್ದೆಗಳು : 108 ಹುದ್ದೆಗಳು
ವಿದ್ಯಾರ್ಹತೆ ಏನಿರಬೇಕು?

ಮೊದಲೇ ಹೇಳಿದಂತೆ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಆಫೀಸ್ ಅಟೆಂಡರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಅಥವಾ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿರಬೇಕು.

ವಯೋಮಿತಿ, ಸಂಬಳದ ವಿವರ

ಈ ಹುದ್ದೆಗಳಿಗೆ ಕನಿಷ್ಟ 18 ಹಾಗೂ ಗರಿಷ್ಟ 30 ವಯಸ್ಸು ನಿಗದಿಪಡಿಸಲಾಗಿದ್ದು; ಆಫೀಸ್ ಅಟೆಂಡರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 35,000 ರೂಪಾಯಿ ಮಾಸಿಕ ವೇತನ ಸಿಗಲಿದೆ.

ಅರ್ಜಿ ಸಲ್ಲಿಕೆ ದಿನಾಂಕ
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
    02-10-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
    21-10-2024

ಆಸಕ್ತ ಅಭ್ಯರ್ಥಿಗಳು ನಬಾರ್ಡ್ ಅಧಿಕೃತ ವೆಬ್‌ಸೈಟ್ https://www.nabard.orgಗೆ ಭೇಟಿ ನೀಡಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ರಾಜ್ಯವಾರು ಹುದ್ದೆಗಳ ವಿವರ, ವಯೋಮಿತಿ ಸಡಿಲಿಕೆ ಕುರಿತ ಸಂಪೂರ್ಣ ವಿವರಗಳ ಮಾಹಿತಿಯನ್ನು ಪಡೆಯಬಹುದಾಗಿದೆ.

ಅಧಿಸೂಚನೆ : Download

WhatsApp Group Join Now
Telegram Group Join Now

Related Posts