Personal Loan EMI Tips : ಪರ್ಸನಲ್ ಲೋನ್ ಎಂಬುವುದು ಆಪತ್ಕಾಲದಲ್ಲಿ ಆಪತ್ಭಾಂಧವನಂತೆ. ತಕ್ಷಣಕ್ಕೆ ಅತೀ ಸರಳವಾಗಿವಾಗಿ ಸಿಗುತ್ತದೆ. ಆದರೆ, ಮರುಪಾವತಿಯಲ್ಲಿ ಎಚ್ಚರ ತಪ್ಪಿದರೆ ಅದೇ ಕುತ್ತಾಗುವ ಅಪಾಯವಿದೆ. ತುರ್ತು ಸಮಯಕ್ಕೆ ಪರ್ಸನಲ್ ಲೋನ್ ಪಡೆದಿರುತ್ತೇವೆ. ಕೆಲವೊಮ್ಮೆ ಯಾವುದೋ ಒಂದು ತಿಂಗಳು ಇಎಂಐ (Equated Monthly Installments – EMI) ಪಾವತಿಸಲು ಅಡಚಣೆಯಾಗುತ್ತದೆ.
ಸಕಾಲಕ್ಕೆ ಇಎಂಐ ಕಟ್ಟದಿದ್ದರೆ ಏನಾಗುತ್ತದೆ? ಹೆಚ್ಚೆಂದರೆ ವಿಳಂಬ ಶುಲ್ಕ, ದಂಡ ಬೀಳುತ್ತದೆ ಎಂದುಕೊAಡರೆ ಅದು ತಪ್ಪು. ವಿಳಂಬ ಶುಲ್ಕ (Late Fee), ದಂಡದ ಜೊತೆಗೆ ಇನ್ನೂ ಹಲವು ಸಮಸ್ಯೆಗಳು ಎದುರಾಗುತ್ತವೆ. ಪರ್ಸನಲ್ ಲೋನ್ ಇಎಂಐ ಕಟ್ಟದಿದ್ದರೆ ಆಗುವ ಪರಿಣಾಮ ಏನು? ಅದಕ್ಕಿರುವ ಪರಿಹಾರವೇನು? ಎಂಬುವುದನ್ನು ಇಲ್ಲಿ ನೋಡೋಣ…
EMI ಕಟ್ಟದಿದ್ದರೆ ಏನೇನಾಗುತ್ತದೆ?
ಮೊದಲನೆಯದಾಗಿ ಬಹುತೇಕ ಬ್ಯಾಂಕುಗಳು ಸಾಲಗಾರನು ಇಎಂಐ ಪಾವತಿಸುವಲ್ಲಿ ವಿಳಂಬ ಮಾಡಿದರೆ ಅಥವಾ ಇಎಂಐ ಕಟ್ಟುವುದು ತಪ್ಪಿದರೆ ಆ ಕಂತುಗಳಿಗೆ ವಿಳಂಬ ಶುಲ್ಕವನ್ನು ವಿಧಿಸುತ್ತವೆ. ಅದೇ ರೀತಿ ದಂಡವನ್ನೂ ಹಾಕುತ್ತವೆ. ದಂಡ, ವಿಳಂಬ ಶುಲ್ಕ ಪಾವತಿಸಿದರೂ ಕೂಡ ಬೇರೆ ನಿಟ್ಟಿನಲ್ಲೂ ಇದರ ಪರಿಣಾಮ ಬೀರುತ್ತದೆ.
ಈ ಪೈಕಿ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಅಥವಾ ಸಿಬಿಲ್ ಸ್ಕೋರ್ (CIBIL Score) ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದೆ (750ರ ಮೇಲೆ) ಎಂಬ ಕಾರಣಕ್ಕೆ ತಕ್ಷಣಕ್ಕೆ ಪರ್ಸನಲ್ ಲೋನ್ ಸಿಕ್ಕಿರುತ್ತದೆ. ನೀವು ಒಮ್ಮೆ ಇಎಂಐ ಪಾವತಿ ತಪ್ಪಿಸಿಕೊಂಡರೆ ಆಗ ಕ್ರೆಡಿಟ್ ಸ್ಕೋರ್ ಅನಾಮತ್ತು 50 ರಿಂದ 70ರಷ್ಟು ಇಳಿಕೆಯಾಗುತ್ತದೆ.
ಕ್ರೆಡಿಟ್ ರಿಪೋರ್ಟ್’ನಲ್ಲಿ ಇಎಂಐ ಮರುಪಾವತಿ (Refund of EMI), ಸಾಲ ಮರುಪಾವತಿಯ ಪ್ರತಿ ವಹಿವಾಟು ದಾಖಲಾಗುವುದರಿಂದ ಕ್ರೆಡಿಟ್ ಸ್ಕೋರ್ ಇಳಿದರೆ ಅದು ನಿಮ್ಮ ಸಾಲ ಪಡೆಯುವ ಅರ್ಹತೆಯನ್ನು ಕೂಡ ಕಡಿಮೆಯಾಗಿಸುತ್ತದೆ. ಇದರಿಂದ ಭವಿಷ್ಯದಲ್ಲಿ ಸಾಲ ಸಿಗುವ ಅವಕಾಶ ಕಡಿಮೆಯಾಗುತ್ತದೆ.
ಕೇವಲ ಒಂದು ಕಂತು ಇಎಂಐ ಮಿಸ್ಸಾದರೆ ಈ ರೀತಿ ಪರಿಣಾಮ ಬೀಳುತ್ತದೆ. ಇನ್ನು ಇಎಂಐ ಪಾವತಿ 90 ದಿನಗಳ ಗಡುವು ಮೀರಿದರೆ, ಬಾಕಿ ಮೊತ್ತ ವಸೂಲಿಗೆ ಬ್ಯಾಂಕುಗಳ ರಿಕವರಿ ಏಜೆಂಟ್‌ಗಳ (Loan Recovery Agent) ಪೀಡೆ ಶುರುವಾಗುತ್ತದೆ. 60 ದಿನಗಳು ಆಗುತ್ತಿದ್ದಂತೆಯೇ ರಿಕವರಿ ಏಜೆಂಟ್ ನಿಮ್ಮ ಬೆನ್ನು ಬೀಳುತ್ತಾರೆ.
ಸುಸ್ತಿಸಾಲದ ಹೊರೆ
90 ದಿನಗಳ ವರೆಗೆ ಸಾಲ ಮರುಪಾವತಿ ಮಾಡಲು ವಿಫಲನಾದರೆ ಆಗ ಆ ಸಾಲವನ್ನು ಬ್ಯಾಂಕ್ ಅನುತ್ಪಾದಕ ಆಸ್ತಿ (Non-Performing Asset – NPA) ಎಂದು ವರ್ಗೀಕರಿಸುತ್ತದೆ. ಅಂಥವರನ್ನು ದೊಡ್ಡ ಸುಸ್ತಿಸಾಲಗಾರನ (Major Default) ಪಟ್ಟಿಗೆ ಸೇರಿಸುತ್ತದೆ. ಇಂಥವರಿಗೆ ಮತ್ತೆ ಸಾಲ ಸಿಗುವುದು ಕಷ್ಟಕರ.
ಇನ್ನು 90 ದಿನಗಳ ಒಳಗಿನ ಅವಧಿಯಲ್ಲಿ ಇಎಂಐ ಪಾವತಿ ಮಾಡಿದರೆ ಅಂತಹ ಅವಧಿಯ ಸುಸ್ತಿ ಸಾಲವನ್ನು ಸಣ್ಣ ಸುಸ್ತಿಸಾಲ (Minor Default) ಎಂದು ಪರಿಗಣಿಸಲಾಗುತ್ತದೆ. ಇದು ಸಾಲಗಾರನ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಆದರೆ, ತಿದ್ದುಕೊಳ್ಳಲು ಅವಕಾಶವಿರುತ್ತದೆ.
EMI ಅಡಚಣೆಗೆ ಪರಿಹಾರಗಳೇನು?
ಪರ್ಸನಲ್ ಲೋನ್ ಇಎಂಐ ಪಾವತಿಸುವಲ್ಲಿ ವಿಳಂಬವಾದರೆ ಅಥವಾ ವಿಳಂಬವಾಗುವಂತಹ ಪರಿಸ್ಥಿತಿ ಎದುರಾದರೆ ನಿಮ್ಮ ಹಣಕಾಸಿನ ಸಾಮರ್ಥ್ಯಕ್ಕೆ ತಕ್ಕನಾಗಿ ಇಎಂಐ ಮೊತ್ತವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಸಾಲದ ಇಎಂಐ ಮೊತ್ತ ಕಡಿಮೆ ಮಾಡಿ ಸಾಲದ ಅವಧಿಯನ್ನು ಹೆಚ್ಚಿಸಲು ಬ್ಯಾಂಕ್ ಜೊತೆಗೆ ವಿನಂತಿಸಿಕೊಳ್ಳಬಹುದು.
ಇಎAಐ ಪಾವತಿಸುವಲ್ಲಿ ಅಡಚಣೆ ಆದರೆ ಆಗ ಇಎಂಐ ಪಾವತಿಗೆ ಗ್ರೇಸ್ ಅವಧಿ (Grace Period) ನೀಡುವಂತೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಬಳಿ ಮನವಿ ಸಲ್ಲಿಸಲು ಅವಕಾಶವಿದೆ. ಕೆಲವೊಮ್ಮೆ ಬ್ಯಾಂಕುಗಳು 3-6 ತಿಂಗಳ ತನಕ ಕಾಲಾವಕಾಶ ನೀಡುತ್ತವೆ. ಕೆಲವು ಬ್ಯಾಂಕುಗಳು ಸರಳ ಮರುಪಾವತಿಯ ಆಯ್ಕೆ ನೀಡುವುದರಿಂದ ಕಷ್ಟಕಾಲದಲ್ಲಿ ಅನುಕೂಲವಾಗುತ್ತದೆ.