PM Awas Yojana Free House Allotment : 2024-25ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (Pradhan Mantri Awas Yojana (Rural -PMAY-R) ಕರ್ನಾಟಕಕ್ಕೆ ಒಟ್ಟು 2.26 ಮನೆಗಳು ಮಂಜೂರಾಗಿವೆ. ರಾಜ್ಯದ ಸುಮಾರು 6,000 ಗ್ರಾಮ ಪಂಚಾಯತಿ ಪಿಡಿಒಗಳಿಗೆ (Panchayat Development Officer- PDO)ತಲಾ ಎಷ್ಟು ಮನೆಗಳ ಮಂಜೂರಾಗಿದೆ ಎಂಬ ಮಾಹಿತಿ ರವಾನೆಯಾಗಿದೆ. ಈ ಪಟ್ಟಿ ಪ್ರಕಾರವೇ ಅರ್ಹ ಫಲಾನುಭವಿಗಳ ಆಯ್ಕೆ ನಡೆಯಲಿದೆ.
ಇದು ಕೇಂದ್ರ ಸರ್ಕಾರದ (Government of India) ಮಹತ್ವದ ಯೋಜನೆಯಾಗಿದ್ದು; ಕೇಂದ್ರದ ಶೇ.60 ಮತ್ತು ರಾಜ್ಯದ ಶೇ.40ರ ಅನುದಾನದಲ್ಲಿ ಈ ಯೋಜನೆ ಅನುಷ್ಠಾನವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮೀಣ ಪ್ರದೇಶದ ವಸತಿ ರಹಿತರಿಗೆ (Homelessness in rural areas) ಮಂಜೂರಾಗಿರುವ 2.26 ಲಕ್ಷ ಉಚಿತ ಮನೆಗಳನ್ನು ಈ ವರ್ಷಾಂತ್ಯದಲ್ಲಿ ಕಟ್ಟುವ ಗುರಿ ಹೊಂದಲಾಗಿದೆ. ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ (Rajiv Gandhi Rural Housing Corporation) ಈ ಯೋಜನೆ ಅನುಷ್ಠಾನ ಮೇಲುಸ್ತುವಾರಿ ಹೊತ್ತಿದೆ.
ಯಾರಿಗೆ ಎಷ್ಟು ನೆರವು ಸಿಗಲಿದೆ?
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಒಂದು ಘಟಕಕ್ಕೆ 1.80 ಲಕ್ಷ ರೂಪಾಯಿ ಹಾಗೂ ಸಾಮಾನ್ಯರಿಗೆ 1.20 ಲಕ್ಷ ರೂಪಾಯಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ವ್ಯವಸ್ಥೆ ಮೂಲಕ ಜಮೆಯಾಗಲಿದೆ.
ಇದರ ಜೊತೆಗೆ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಶೌಚಾಲಯಕ್ಕೆ 12,000 ರೂಪಾಯಿ ನೆರವು ಫಲಾನುಭವಿಗೆ ಸಿಗಲಿದೆ. ಮಾತ್ರವಲ್ಲ, ಕುಟುಂಬದ ಇಬ್ಬರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತಲಾ 29 ಮಾನವ ದಿನಗಳ ಲೆಕ್ಕದಲ್ಲಿ ಕೂಲಿ ಸಹ ಸಿಗಲಿದೆ.
ಫಲಾನುಭವಿ ಆಯ್ಕೆ ಪ್ರಕ್ರಿಯೆ ಹೇಗೆ?
ಮನೆ ಮಂಜೂರು ಪಟ್ಟಿ ಪ್ರಕಾರ ಗ್ರಾಮ ಪಂಚಾಯತಿಯಿಂದ ಸ್ಥಳ ಪರಿಶೀಲನೆ ಮಾಡಿ ಅರ್ಹರಿದ್ದರೆ GPS ಮಾಡುತ್ತಾರೆ. ಬಳಿಕ ತಾಲ್ಲೂಕು ಪಂಚಾಯತಿವರು ಆವಾಸ್ ಸಾಫ್ಟ್’ಗೆ ಸೇರಿಸುತ್ತಾರೆ. ನಂತರ ಫಲಾನುಭವಿ ಸಮೇತ ಸ್ಥಳದಲ್ಲೇ ನಾಲ್ಕು ಭಾವಚಿತ್ರ ತೆಗೆಯಿಸಿ ಜಿಪಿಎಸ್ ಮಾಡಲಾಗುತ್ತದೆ. ಬಳಿಕ ನಾಲ್ಕು ಹಂತಗಳಲ್ಲಿ ನೇರವಾಗಿ ಫಲಾನಭವಿ ಖಾತೆಗೆ ಹಣ ಜಮೆ ಆಗಲಿದೆ. ಇದಕ್ಕಾಗಿ ಫಲಾನುಭವಿಗಳು ಯಾರಿಗೂ ಹಣ ಕೊಡುವ ಅಗತ್ಯವಿಲ್ಲ.
2018ರಲ್ಲಿ ಗ್ರಾಮ ಪಂಚಾಯತಿವಾರು ಸಿದ್ದಪಡಿಸಿರುವ ವಸತಿ ರಹಿತರ ಪಟ್ಟಿ ಆಧಾರದ ಮೇಲೆ ಇದೀಗ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಆದರೆ ಆರು ವರ್ಷಗಳ ಹಿಂದಿನ ಸಮೀಕ್ಷೆ ಪ್ರಕಾರ ಸಿದ್ಧವಾದ ಪಟ್ಟಿಯಂತೆ ಫಲಾನುಭವಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ಮಾಡುವುದು ಗ್ರಾಮ ಪಂಚಾಯತಿಯವರಿಗೆ ತಲೆನೋವಾಗಿ ಪರಿಣಮಿಸಿದೆ.
ಕಗ್ಗಂಟಾದ ಫಲಾನುಭವಿಗಳ ಆಯ್ಕೆ
ಈಗ ಮನೆ ಮಂಜೂರಿ ಪಟ್ಟಿ ಪ್ರಕಾರ ಗ್ರಾಮ ಪಂಚಾಯತಿಯವರು ಸ್ಥಳ ಪರಿಶೀಲನೆ ಮಾಡಬೇಕು. ಫಲಾನುಭವಿ ಅರ್ಹರೋ? ಅನರ್ಹರೋ? ಎಂಬುದು ನೋಡಬೇಕು. ಉಳ್ಳವರು, ಮನೆ ಇದ್ದವರು, ಬೇರೆ ಬೇರೆ ಯೋಜನೆಯಡಿ ಮನೆ ಪಡೆದಿದ್ದವರು ಆಗಿದ್ದರೆ ಅಂಥವರಿಗೆ ಅನರ್ಹರೆಂದು ಪರಿಗಣಿಸಬೇಕಿದೆ. ಹಿಂದಿನ ಪಟ್ಟಿಗೆ ಈಗಿನ ವಾಸ್ತವಕ್ಕೆ ಬಹಳ ವ್ಯತ್ಯಾಸ ಕಂಡಿರುವುದು ಅರ್ಹ ಫಲಾನುಭವಿ ಆಯ್ಕೆ ಕಗ್ಗಂಟಾಗಿಸಿದೆ.
ಆರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹಿಂದೆ ವಸತಿರಹಿತರ ಪಟ್ಟಿಯಲ್ಲಿದ್ದ ಅನೇಕರು ಈಗ ವಸತಿ ಹೊಂದಿದ್ದಾರೆ. ಇಂಥವರಿಗೆ ಪಟ್ಟಿಯಿಂದ ಕೈ ಬಿಡುವುದು ಸವಾಲಾಗಿ ಪರಿಣಮಿಸಿದೆ. ಗ್ರಾಮ ಸಭೆಗಳ ಮುಖಾಂತರ ಹೊಸದಾಗಿ ವಸತಿ ರಹಿತರ ಶಾರ್ಟ್ ಲಿಸ್ಟ್ ಮಾಡಿದ್ದರೆ ಅರ್ಹರ ಆಯ್ಕೆಗೆ ಈಗ ಸಮಸ್ಯೆಯೇ ಆಗುತ್ತಿರಲಿಲ್ಲ ಎಬುವುದು ಗ್ರಾಮ ಪಂಚಾಯತಿ ಅಧಿಆರಿಗಳ ಅಂಬೋಣ.