PM Kisan Samman Nidhi 18th installment : ಇಡೀ ದೇಶ ನವರಾತ್ರಿ ಉತ್ಸವಕ್ಕೆ ಸಿದ್ಧವಾಗುತ್ತಿದೆ. ದಸರಾ ಹಬ್ಬಕ್ಕೆ ಸರಿಯಾಗಿ ಸರ್ಕಾರ ರೈತರ ಖಾತೆಗೆ ತಲಾ 2,000 ರೂಪಾಯಿ ಹಣ ಜಮಾ ಮಾಡಲು ಮುಂದಾಗಿದೆ. ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (Pradhan Mantri Kisan Samman Nidhi) ಫಲಾನುಭವಿಯಾಗಿದ್ದರೆ ಶೀಘ್ರದಲ್ಲಿಯೇ ಈ ಹಣ ನಿಮ್ಮ ಬ್ಯಾಂಕ್ ಖಾತೆಗೆ ಸೇರಲಿದೆ.
ಪಿಎಂ ಕಿಸಾನ್ ನಿಧಿಯ (PM-Kisan) 18ನೇ ಕಂತಿನ (18th installment) ಹಣ ಬಿಡುಗಡೆ ದಿನಾಂಕವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇದೇ ನವರಾತ್ರಿ ಸಂದರ್ಭದಲ್ಲಿ ದೇಶಾದ್ಯಂತ 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಸರ್ಕಾರ ತಲಾ 2000 ರೂಪಾಯಿ ಪ್ರೋತ್ಸಾಹಧನ ಜಮಾ ಮಾಡಲಿದೆ.
ಈ ದಿನ ರೈತರ ಖಾತೆಗೆ ಹಣ ಜಮಾ
ಕೇಂದ್ರ ಸರ್ಕಾರವು ದೇಶದ ರೈತರನ್ನು ಉತ್ತೇಜಿಸುವ ಹಿನ್ನಲೆಯಲ್ಲಿ 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ ಸರ್ಕಾರದಿಂದ ವಾರ್ಷಿಕ 6,000 ರೂಪಾಯಿ ನೆರವನ್ನು ನೇರವಾಗಿ ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ವರ್ಷದ 3ನೇ ಕಂತಿನ ಹಣ ವರ್ಗಾವಣೆಗೆ ದಿನಾಂಕವನ್ನು ಘೋಷಣೆ ಮಾಡಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ವೆಬ್‌ಸೈಟ್ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 5 ರಂದು ರೈತರಿಗೆ 18ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಕಳೆದ ಜುಲೈ ತಿಂಗಳಿನಲ್ಲಿ ಯೋಜನೆಯ 17ನೇ ಕಂತನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಾಗಿತ್ತು.
e-KYC ಮಾಡದ ರೈತರಿಗಿಲ್ಲ ಹಣ
ಗಮನಾರ್ಹವೆಂದರೆ ಪಿಎಂ ಕಿಸಾನ್ ಯೋಜನೆಯಡಿ ರೈತರು ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಇ-ಕೆವೈಸಿ ಮಾಡಿಸಲು ಬಾಕಿ ಇರುವ ರೈತರು ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಲು ಕೃಷಿ ಇಲಾಖೆ ಕೋರಿದೆ.
ರೈತರು ಒಟಿಪಿ ಆಧಾರಿತ, ಬಯೋಮೆಟ್ರಿಕ ಆಧಾರಿತ ಹಾಗೂ ಮುಖಚರ್ಯೆ ಆಧಾರಿತ 3 ವಿಧದಲ್ಲಿ ಇ-ಕೆವೈಸಿಗೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಮೂಲಕ OTP ಸಹಾಯದಿಂದ ಪಿಎಂ ಕಿಸಾನ್ ಪೋರ್ಟಲ್ ಮೂಲಕವೂ e-KYC ಅನ್ನು ಪೂರ್ಣಗೊಳಿಸಬಹುದು.