PWD AEE Recruitment 2024 KPSC : ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission – KPSC) ಲೋಕೋಪಯೋಗಿ ಇಲಾಖೆಯ (Public Works Department – PWD) ‘ಎ’ ಗ್ರುಪ್ (Grade 1) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಸರ್ಕಾರಿ ಉದ್ಯೋಗಾವಕಾಶಕ್ಕಾಗಿ ಕಾದು ಕೂತ ಇಂಜಿನಿಯರಿ೦ಗ್ ಪದವೀಧರರಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳ (Assistant Executive Engineer – AEE) ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಉಳಿಕೆ ಮೂಲ ವೃಂದ-30 ಹಾಗೂ ಹೈದರಾಬಾದ್ ಕರ್ನಾಟಕ 12 ಸೇರಿ ಒಟ್ಟು 42 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಕರ್ನಾಟಕ ಲೋಕೋಪಯೋಗಿ ಇಲಾಖೆ ನೇಮಕಾತಿ ಸಂಕ್ಷಿಪ್ತ ವಿವರ
- ನೇಮಕಾತಿ ಪ್ರಾಧಿಕಾರ : ಕರ್ನಾಟಕ ಲೋಕಸೇವಾ ಆಯೋಗ (KPSC)
- ಉದ್ಯೋಗ ಇಲಾಖೆ : ಲೋಕೋಪಯೋಗಿ ಇಲಾಖೆ (PWD)
- ಹುದ್ದೆ ಹೆಸರು : ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE)
- ಹುದ್ದೆಗಳ ಸಂಖ್ಯೆ : 30+12=42
- ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
- ಉದ್ಯೋಗ ಸ್ಥಳ : ಕರ್ನಾಟಕ ರಾಜ್ಯಾದ್ಯಂತ
ಮಾಸಿಕ ಸಂಬಳದ ವಿವರ
ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ 83,700 ರಿಂದ 1,55,200 ರೂಪಾಯಿ ವರೆಗೂ ಮಾಸಿಕ ವೇತನ ಇರಲಿದೆ. ಜೊತೆಗೆ ಸರ್ಕಾರದ ಎಲ್ಲ ಸವಲತ್ತುಗಳು ಅನ್ವಯವಾಗಲಿವೆ.
ವಯೋಮಿತಿ ವಿವರ
ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35, ಹಿಂದುಳಿದ ವರ್ಗದವರಿಗೆ 38 ಹಾಗೂ ಪ್ರವರ್ಗ-1 ಹಾಗೂ ಪರಿಶಿಷ್ಟರಿಗೆ ಗರಿಷ್ಠ ವಯೋಮಿತಿ 40 ವರ್ಷ ಎಂದು ನಿಗದಿ ಮಾಡಲಾಗಿದೆ.
ವಿದ್ಯಾರ್ಹತೆ ಏನಿರಬೇಕು?
ಸಿವಿಲ್ ಇಂಜಿನಿಯರಿ೦ಗ್ ಹಾಗೂ ಸಂಬ೦ಧಿಸಿದ ಪದವಿ ಹಾಗೂ ಡಿಪ್ಲೊಮಾಗಳನ್ನು ಪೂರೈಸಿದವರು ಕೆಪಿಎಸ್‌ಸಿ ಉದ್ಯೋಗ ತಂತ್ರಾ೦ಶದ ಮೂಲಕ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿದ್ದಾರೆ. ಸಿವಿಲ್ ಇಂಜಿನಿಯರಿ೦ಗ್‌ನಲ್ಲಿ ಈ ಕೆಳಕಂಡ ವಿಷಯಗಳಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ:
- ಕನ್‌ಸ್ಟ್ರಕ್ಷನ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್
- ಬಿಲ್ಡಿ೦ಗ್ ಅಂಡ್ ಕನ್‌ಸ್ಟಕ್ಷನ್ ಟೆಕ್ನಾಲಜಿ
- ಸಿವಿಲ್ ಇಂಜನಿಯರಿ೦ಗ್ & ಪ್ಲಾನಿಂಗ್
- ಸಿವಿಲ್ ಟೆಕ್ನಾಲಜಿ
- ಕನ್‌ಸ್ಟ್ರಕ್ಷನ್ ಟೆಕ್ನಾಲಜಿ
- ಕನ್‌ಸ್ಟ್ರಕ್ಷನ್ ಇಂಜನಿಯರಿ೦ಗ್ & ಮ್ಯಾನೇಜ್’ಮೆಂಟ್
- ಜಿಯೋಮೆಕಾನಿಕ್ಸ್ ಅಂಡ್ ಸ್ಟ್ರಕ್ಟರ್ಸ್
- ಸ್ಟ್ರಕ್ಚರಲ್ & ಫೌಂಡೇಷನಲ್ ಇಂಜಿನಿಯರಿ೦ಗ್
- ಸ್ಟ್ರಕ್ಚರಲ್ ಇಂಜನಿಯರಿ೦ಗ್ & ಕನ್‌ಸ್ಟ್ರಕ್ಷನ್
ಅರ್ಜಿ ಶುಲ್ಕದ ವಿವರ
ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ., ಹಿಂದುಳಿದ ವರ್ಗಗಳಿಗೆ 300 ರೂ.. ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ., ಅರ್ಜಿಶುಲ್ಕ ನಿಗದಿಪಡಿಸಲಾಗಿದೆ. ಇನ್ನು ಪರಿಶಿಷ್ಟ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದ್ದು; ಈ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಹುದ್ದೆಗಳ ಸಂಖ್ಯೆಯ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಕನ್ನಡ, ಇಂಗ್ಲಿಷ್ ಭಾಷಾ ಪರೀಕ್ಷೆಗಳು ಅರ್ಹತಾದಾಯಕವಾಗಿರಲಿದೆ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನದ 1 ಹಾಗೂ ತಾಂತ್ರಿಕ ವಿಷಯದ ನಾಲ್ಕು ಪತ್ರಿಕೆಗಳು ಸೇರಿ ಐದು ಕಡ್ಡಾಯ ಪತ್ರಿಕೆಗಳಿರಲಿವೆ. ಪ್ರತಿ ಪತ್ರಿಕೆಗೆ 100 ಅಂಕಗಳನ್ನು ನಿಗದಿ ಮಾಡಲಾಗಿದೆ. ಸಂದರ್ಶನಕ್ಕೆ ಗರಿಷ್ಠ 25 ಅಂಕಗಳಿರಲಿವೆ.
ಅರ್ಜಿ ಸಲ್ಲಿಕೆಯ ಪ್ರಮುಖ ಮಾಹಿತಿ
ಅರ್ಜಿಗಳಲ್ಲಿ ಲೋಪ ದೋಷಗಳಿದ್ದಲ್ಲಿ, ಅರ್ಜಿ ಸಲ್ಲಿಕೆ ಕೊನೆಯ ದಿನದ ವರೆಗೂ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ತದನಂತರ ಸಲ್ಲಿಸಿದ ಯಾವುದೇ ಮನವಿಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವಯೋಮಿತಿ, ವಿದ್ಯಾರ್ಹತೆ ಹಾಗೂ ಮೀಸಲಾತಿ ಕೋರಿಕೆ ಸಂಬAಧಿಸಿದ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕದ ವರೆಗೆ ಚಾಲ್ತಿಯಲ್ಲಿರುವಂತೆ, ಅಧಿಸೂಚನೆಯಲ್ಲಿ ನೀಡಲಾಗಿರುವ ನಮೂನೆಯಲ್ಲೇ ಕಡ್ಡಾಯವಾಗಿ ಪಡೆದಿಟ್ಟುಕೊಳ್ಳುವುದು ಹಾಗೂ ಅರ್ಜಿ ಜತೆಗೆ ಅಪ್‌ಲೋಡ್ ಮಾಡಬೇಕು.
ದಾಖಲಾತಿ ಪರಿಶೀಲನೆ ವೇಳೆ ಇವೇ ಪ್ರಮಾಣ ಪತ್ರಗಳನ್ನು ಹಾಜರುಪಡಿಸಬೇಕು. ಯಾವುದೇ ಹಂತದ ಪರಿಶೀಲನೆ ವೇಳೆ ನ್ಯೂನ್ಯತೆಗಳು ಕಂಡು ಬಂದಲ್ಲಿ ಅರ್ಜಿ ತಿರಸ್ಕೃತವಾಗಲಿದೆ.
ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
03-10-2024 - ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
04-11-2024