JobsNews

ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 11,558 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ, ಪದವೀಧರರಿಗೆ ಭರ್ಜರಿ ಅವಕಾಶ RRB Non-Technical Popular Categories Posts Recruitment 2024

WhatsApp Group Join Now
Telegram Group Join Now

RRB Non-Technical Popular Categories Posts Recruitment 2024 : ಜಾಗತಿಕವಾಗಿ ಅತಿ ಹೆಚ್ಚು ಉದ್ಯೋಗ ನೀಡುತ್ತಿರುವ ಸಂಸ್ಥೆಗಳಲ್ಲಿ ಭಾರತೀಯ ರೈಲ್ವೆ (Indian Railways) ಸಂಸ್ಥೆಯು ಒಂದಾಗಿದೆ. ಪ್ರಸ್ತುತ 12.18 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಕಳೆದ ಬಾರಿ ಬೆಂಗಳೂರು ಆರ್‌ಆರ್‌ಬಿವೊಂದರಲ್ಲೇ 2,400ಕ್ಕೂ ಹೆಚ್ಚು ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು.

11,558 ಹುದ್ದೆಗಳ ನೇಮಕಾತಿ

ಈ ಬಾರಿಯೂ ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು (Railway Recruitment Board – RRB) ದೇಶದಾದ್ಯಂತ ಖಾಲಿ ಇರುವ ತಾಂತ್ರಿಕೇತರ ವಿಭಾಗಗಳ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಪದವಿ ಪೂರ್ವ ವಿಭಾಗದಲ್ಲಿ 8,113 ಹುದ್ದೆ ಮತ್ತು ಪದವಿ ವಿಭಾಗದಲ್ಲಿ 3,445 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದೆ.

ಭಾರತೀಯ ರೈಲ್ವೆಯಲ್ಲಿ ಅತಿ ಹೆಚ್ಚು ಉದ್ಯೋಗಿಗಳು ಅಥವಾ ನೇಮಕಾತಿಯ ವಿಭಾಗವನ್ನು NTPC (ನಾನ್-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ) ಎಂದೇ ಗುರುತಿಸಲಾಗಿದೆ. ಈ ವಿಭಾಗದಲ್ಲಿ ಪದವಿ (Graduate Posts) ಮತ್ತು ಪದವಿ ಪೂರ್ವ (Undergraduate Posts) ಹುದ್ದೆಗಳ ವಿವರ ಈ ಕೆಳಗಿನಂತಿದೆ:

ಪದವಿ ವಿಭಾಗದ ಹುದ್ದೆಗಳು
  • ಚೀಫ್ ಕಮರ್ಷಿಯಲ್ ಅಂಡ್ ಟಿಕೆಟ್ ಸೂಪರ್‌ವೈಸರ್: 1,736
  • ಸ್ಟೇಷನ್ ಮಾಸ್ಟರ್ : 994
  • ಸರಕು ರೈಲು ನಿರ್ವಾಹಕ : 3,144
  • ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್ : 1,507
  • ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ : 732
ಪದವಿ ಪೂರ್ವ ವಿಭಾಗದ ಹುದ್ದೆಗಳ ವಿವರ
  • ಕಮರ್ಷಿಯಲ್ ಮತ್ತು ಟಿಕೆಟ್ ಕ್ಲರ್ಕ್ : 2,022
  • ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್ : 361
  • ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್ : 990
  • ರೈಲು ಗುಮಾಸ್ತ : 72
ವಯೋಮಿತಿ ಎಷ್ಟು?

ಪದವಿ ವಿಭಾಗದ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18-36 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಪದವಿ ಪೂರ್ವ ವಿಭಾಗದ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18-33 ವರ್ಷದೊಳಗಿರಬೇಕು.

ಕೋವಿಡ್ ಕಾರಣದಿಂದಾಗಿ ಮೂರು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಇದು ಒಳಗೊಂಡಿದೆ. ಇದಲ್ಲದೆ, ಆಯಾ ಮೀಸಲಾತಿ ಅನ್ವಯ ವಯಸ್ಸಿನ ಮೀತಿಯಲ್ಲಿ ವಿನಾಯ್ತಿ ಕೂಡ ನೀಡಲಾಗುತ್ತದೆ.

ವೇತನ ಎಷ್ಟು?

ಈ ಎಲ್ಲ ಹುದ್ದೆಗಳು 7ನೇ ವೇತನ ಆಯೋಗದ ವೇತನ ಶ್ರೇಣಿಯನ್ನು ಒಳಗೊಂಡಿದ್ದು; ಆಯಾ ಹುದ್ದೆಗೆ ನಿಗದಿಯಾಗಿರುವ ಮಾಸಿಕ ವೇತನ ಈ ಕೆಳಗಿನಂತಿದೆ:

  • ಚೀಫ್ ಕಮರ್ಷಿಯಲ್ ಅಂಡ್ ಟಿಕೆಟ್ ಸೂಪರ್‌ವೈಸರ್, ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ 35,400 ರೂ.,
  • ಸರಕು ರೈಲು ನಿರ್ವಾಹಕ, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್, ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ ಹುದ್ದೆಗೆ 29,200 ರೂ.,
  • ಕಮರ್ಷಿಯಲ್ ಮತ್ತು ಟಿಕೆಟ್ ಕ್ಲರ್ಕ್ ಹುದ್ದೆಗೆ 21,700 ರೂ.,
  • ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್, ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್, ರೈಲು ಗುಮಾಸ್ತ ಹುದ್ದೆಗೆ 19,900 ರೂ.,
ಅರ್ಜಿ ಶುಲ್ಕವೆಷ್ಟು?

ಎಸ್ಸಿ/ಎಸ್ಟಿ, ಮಾಜಿ ಸೈನಿಕ, ಒಬಿಸಿ, ಅಂಗವಿಕಲ, ಮಹಿಳೆ, ಅಲ್ಪ ಸಂಖ್ಯಾತರು, ತೃತೀಯಲಿಂಗಿ ಅಭ್ಯರ್ಥಿಗಳಿಗೆ 250 ರೂ., ಇತರ ಎಲ್ಲ ವರ್ಗದ ಅಭ್ಯರ್ಥಿಗಳು 500 ರೂ., ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಶುಲ್ಕವನ್ನು ಆನ್‌ಲೈನ್ ಮೂಖಾಂತರವೆ ಸಲ್ಲಿಸಬೇಕು. ಬೇರೆ ವಿಧಾನದ ಮೂಲಕ ಸಲ್ಲಿಸಿದ ಅರ್ಜಿ ಶುಲ್ಕವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಆಯ್ಕೆ ಪ್ರಕ್ರಿಯೆ ಹೇಗೆ?

ಭಾರತೀಯ ರೈಲ್ವೆ ಇಲಾಖೆಯ ನಾನ್-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (ಎನ್‌ಟಿಪಿಸಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಿಬಿಟಿ ಲಿಖಿತ ಪರೀಕ್ಷೆ (ಟೈರ್-1, ಟೈರ್-2), ಕೌಶಲ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು

ಭಾರತೀಯ ರೈಲ್ವೆ ಇಲಾಖೆಯ ಎನ್‌ಟಿಪಿಸಿ ಹುದ್ದೆಗಳಿಗೆ ಪದವಿ ಪೂರ್ವ ಮತ್ತು ಪದವಿ ಆಧಾರಿತ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಲಾಗಿದ್ದು; ವಿವರ ಈ ಕೆಳಗಿನಂತಿದೆ:

ಪದವಿ ಆಧಾರಿತ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ

  • ಆರಂಭ : 14-09-2024
  • ಮುಕ್ತಾಯ : 13-10-2024

ಪದವಿ ಪೂರ್ವ ಆಧಾರಿತ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ

  • ಆರಂಭ : 21-9-2024
  • ಮುಕ್ತಾಯ : 20-10-2024

ಅರ್ಜಿ ಸಲ್ಲಿಕೆ ಲಿಂಕ್: Apply Now

WhatsApp Group Join Now
Telegram Group Join Now

Related Posts