Santoor Scholarship 2024 for Girl Students : ಸಂತೂರ್ ಸ್ಕಾಲರ್‌ಶಿಪ್‌ಗೆ (Santoor Scholarship 2024) ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿನಿಯರು ವರ್ಷಕ್ಕೆ 24,000 ರೂಪಾಯಿಗಳಂತೆ ಒಟ್ಟು ಮೂರು ವರ್ಷಕ್ಕೆ 72,000 ರೂಪಾಯಿ ಆರ್ಥಿಕ ನೆರವು ಪಡೆಯಬಹುದಾಗಿದೆ. ಸಂತೂರ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಕೆ ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
72,000 ರೂಪಾಯಿ ಆರ್ಥಿಕ ನೆರವು
ಪ್ರತೀ ವರ್ಷದಂತೆ ಈ ವರ್ಷವೂ ಅಂದರೆ, 2024-25ನೇ ಸಾಲಿನ ಸಂತೂರ್ ಸ್ಕಾಲರ್‌ಶಿಪ್‌ಗೆ (Santoor Scholarship Programme) ಅರ್ಜಿ ಕರೆಯಲಾಗಿದ್ದು; ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಛತ್ತೀಸ್‌ಘಡ ರಾಜ್ಯಗಳ ಮೂರು ವರ್ಷಗಳ ರೆಗ್ಯುಲರ್ ಪದವಿ ಕೋರ್ಸ್ ಸೇರಿರುವ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಬಹುದಾಗಿದೆ.
2016-17ನೇ ಸಾಲಿನಿಂದ ವಿಪ್ರೊ ಕನ್ಸೂಮರ್ ಕೇರ್ ಅಂಡ್ ಲೈಟಿಂಗ್ ಗ್ರುಪ್ (Wipro Consumer Care and Lighting Group – WCCLG) ಸಹಯೋಗದಲ್ಲಿ ಕೊಡಮಾಡಲ್ಪಡುವ ಸಂತೂರ್ ಸ್ಕಾಲರ್‌ಶಿಪ್ 8ನೇ ಆವೃತ್ತಿ ಇದಾಗಿದ್ದು; ಈ ಬಾರಿ ಒಟ್ಟು 1500 ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದೆ. ವರ್ಷಕ್ಕೆ 24,000 ರೂ.ದಂತೆ ಮೂರು ವರ್ಷಕ್ಕೆ ಒಟ್ಟು 72,000 ರೂ. ನೆರವು ಸಿಗಲಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಪ್ರಮುಖವಾಗಿ ಈ ವಿದ್ಯಾರ್ಥಿವೇತನವು ಹಿಂದುಳಿದ ವರ್ಗಗಳಿಗೆ ಸೇರಿದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಛತ್ತೀಸ್‌ಘಡ ರಾಜ್ಯಗಳ ಯುವತಿಯರಿಗೆ ಮೀಸಲಾಗಿದೆ. 12ನೇ ತರಗತಿ ತೇರ್ಗಡೆ ಹೊಂದಿ, ಉನ್ನತ ಶಿಕ್ಷಣ ಪದವಿ ಕೋರ್ಸ್’ಗಳಿಗೆ ಪ್ರವೇಶ ಪಡೆದವರಿಗೆ ಅರ್ಜಿ ಹಾಕಲು ಅವಕಾಶವಿದೆ.
2023-24ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆ ಅಥವಾ ಜೂನಿಯರ್ ಕಾಲೇಜಿನಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು. 2024-25ರಿಂದ ಪ್ರಾರಂಭವಾಗುವ ಪೂರ್ಣ ಸಮಯದ ಪದವಿ ಕಾರ್ಯಕ್ರಮಕ್ಕೆ ದಾಖಲಾಗಿರುವ ಮಹಿಳಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ದಾಖಲಾತಿಗಳು
- ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಪದವಿ ಕಾಲೇಜು ಗುರುತಿನ ಚೀಟಿ
- 10ನೇ ತರಗತಿಯ ಅಂಕಪಟ್ಟಿ
- 12ನೇ ತರಗತಿ ಅಂಕಪಟ್ಟಿ
- ಮೊಬೈಲ್ ಸಂಖ್ಯೆ
- ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಯಾವುದೇ ಐಡಿ ಪುರಾವೆ
- ಅರ್ಜಿದಾರರ ಪಾಸ್‌ಬುಕ್‌ನ ಫೋಟೋಕಾಪಿ
- ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
15-10-2024
ಅರ್ಜಿ ಸಲ್ಲಿಕೆ ಲಿಂಕ್ : Apply ಮಾಡಿ