Saraswat Bank Recruitment 2024 : ದೇಶದ ಪ್ರತಿಷ್ಟಿತ ಕೋ-ಅಪರೇಟಿವ್ ಬ್ಯಾಂಕುಗಳಲ್ಲಿ ಒಂದಾಗಿರುವ ಸಾರಸ್ವತ್ ಬ್ಯಾಂಕ್‌ನ (Saraswat Bank) ಕರ್ನಾಟಕ ಶಾಲೆಯ ವಿವಿಧ ಜಿಲ್ಲೆಗಳ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಸ್ನಾತಕೋತ್ತರ ಪದವಿ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಾರಸ್ವತ್ ಬ್ಯಾಂಕ್ ದೇಶಾದ್ಯಂತ 302 ಶಾಖೆಗಳನ್ನು ಹೊಂದಿದ್ದು; ಸದ್ಯ ಕರ್ನಾಟಕದ ಬೆಂಗಳೂರು, ಮಂಗಳೂರು, ತುಮಕೂರು ಹಾಗೂ ದಾವಣಗೆರೆ ಶಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ.
ಹುದ್ದೆಗಳ ವಿವರ
- ಬ್ರ‍್ಯಾಂಚ್ ಮ್ಯಾನೇಜರ್
- ಬ್ರ‍್ಯಾಂಚ್ ಡೆಪ್ಯೂಟಿ ಮ್ಯಾನೇಜರ್ಸ್
- ರಿಕವರಿ ಅಫೀಶಿಯಲ್ಸ್
- ಕ್ರೆಡಿಟ್ ಅಡ್ಮಿನಿಸ್ಟ್ರೇಷನ್ ಅಫೀಶಿಯಲ್ಸ್
- ರಿಲೇಶನ್ಶಿಪ್ ಮ್ಯಾನೇಜರ್
- ಬ್ಯುಸಿನೆಸ್ ಡೆವಲಪ್ಮೆಂಟ್ ಆಫೀಸರ್
- ಅಪ್ರೆಂಟಿಸ್ ಟ್ರೈನಿ
- ಕ್ರೆಡಿಟ್ ಮೌಲ್ಯಮಾಪನ ಅಫೀಶಿಯಲ್ಸ್
ಬ್ರ‍್ಯಾಂಚ್ ಮ್ಯಾನೇಜರ್
ಬೆಂಗಳೂರು ಹಾಗೂ ಮಂಗಳೂರು ಶಾಖೆಗಳಲ್ಲಿ ಬ್ರ‍್ಯಾಂಚ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು; ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಖಾಸಗಿ ಬ್ಯಾಂಕ್, ಸಣ್ಣ ಹಣಕಾಸು ಬ್ಯಾಂಕ್ ಅಥವಾ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ನಲ್ಲಿ ಶಾಖಾ ವ್ಯವಸ್ಥಾಪಕರಾಗಿ ಎರಡು ವರ್ಷಗಳ ಅನುಭವ ಹೊಂದಿರಬೇಕು.
ಬ್ರ‍್ಯಾಂಚ್ ಡೆಪ್ಯೂಟಿ ಮ್ಯಾನೇಜರ್ಸ್
ಬೆಂಗಳೂರು, ಮಂಗಳೂರು ಹಾಗೂ ದಾವಣಗೆರೆ ಶಾಖೆಗಳಲ್ಲಿ ಈ ಹುದ್ದೆಗಳಿದ್ದು; ಬ್ಯಾಂಕಿಂಗ್ ಸೇವೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು. ಅರ್ಜಿದಾರರು ಗ್ರಾಹಕ ಸೇವೆ, ಮಾರಾಟ, ನಿಯಮಗಳು ಮತ್ತು ನೀತಿಗಳ ಅನುಸರಣೆ ಸೇರಿದಂತೆ ಮೇಲ್ವಿಚಾರಣಾ ಕೇಡರ್‌ನಲ್ಲಿ ಶಾಖೆಯ ಕಾರ್ಯಾಚರಣೆಗಳನ್ನು ನಿರ್ವಹಿಸಿರಬೇಕು.
ರಿಕವರಿ ಅಫೀಶಿಯಲ್ಸ್
ಬೆಂಗಳೂರು ಶಾಖೆಯಲ್ಲಿ ಈ ಹುದ್ದೆ ಖಾಲಿ ಇದ್ದು; ಖಾಸಗಿ ಬ್ಯಾಂಕುಗಳಲ್ಲಿ ರಿಕವರಿ ವಿಭಾಗದಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು. ಕಾರ್ಪೊರೇಟ್ / ಎಸ್‌ಎಂಇ ಚೇತರಿಕೆಯ ಕಾರ್ಯವಿಧಾನಗಳನ್ನು ನಿರ್ವಹಿಸುವಲ್ಲಿ ಅನುಭವವನ್ನು ಹೊಂದಿರಬೇಕು.
ಕ್ರೆಡಿಟ್ ಅಡ್ಮಿನಿಸ್ಟ್ರೇಷನ್ ಅಫೀಶಿಯಲ್ಸ್
ಬೆಂಗಳೂರು ಶಾಖೆಯಲ್ಲಿ ಈ ಹುದ್ದೆ ಖಾಲಿ ಇದ್ದು; ಬಿಇ / ಬಿಎಸ್ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಕ್ರೆಡಿಟ್ ವಲಯದಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.
ರಿಲೇಶನ್ಶಿಪ್ ಮ್ಯಾನೇಜರ್
ಬೆಂಗಳೂರು ಮತ್ತು ಮಂಗಳೂರು ಶಾಖೆಗಳಲ್ಲಿ ಈ ಹುದ್ದೆಗಳಿದ್ದು; ಸಿಎ/ ಸಿಎಂಎ ಪಾಸಾದವರು ಅರ್ಜಿ ಸಲ್ಲಿಸಬಹುದು. ಕ್ರೆಡಿಟ್ ಪ್ರಸ್ತಾವನೆಗಳ ವಿಶ್ಲೇಷಣೆ ಮತ್ತು ಮೌಲ್ಯಮಾಪನ ಮತ್ತು ಕ್ರೆಡಿಟ್ ಸಂಬಂಧಗಳನ್ನು ನಿರ್ವಹಿಸುವಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.
ಬ್ಯುಸಿನೆಸ್ ಡೆವಲಪ್ಮೆಂಟ್ ಆಫೀಸರ್
ಬೆಂಗಳೂರು ಶಾಖೆಯಲ್ಲಿ ಈ ಹುದ್ದೆ ಖಾಲಿ ಇದ್ದು; 30ನೇ ಸೆಪ್ಟೆಂಬರ್ 2024ರಂತೆ 27 ವರ್ಷಕ್ಕಿಂತ ಕಡಿಮೆ ವಯೋಮಿತಿಯವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಮಾರ್ಕೆಟಿಂಗ್ ವಿಭಾಗದಲ್ಲಿ ಅನುಭವ ಹೊಂದಿರಬೇಕು.
ಅಪ್ರೆಂಟಿಸ್ ಟ್ರೈನಿ
ಬೆಂಗಳೂರು, ಮಂಗಳೂರು, ದಾವಣಗೆರೆ ಹಾಗೂ ತುಮಕೂರು ಶಾಖೆಗಳಲ್ಲಿ ಈ ಹುದ್ದೆಗಳು ಖಾಲಿ ಇದ್ದು; 30ನೇ ಸೆಪ್ಟೆಂಬರ್ 2024ರಂತೆ 27 ವರ್ಷಕ್ಕಿಂತ ಕಡಿಮೆ ವಯೋಮಿತಿಯವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ, ಬಿ.ಎಸ್ಸಿ ಪದವಿ ಹೊಂದಿರಬೇಕು.
ಕ್ರೆಡಿಟ್ ಮೌಲ್ಯಮಾಪನ ಅಫೀಶಿಯಲ್ಸ್
ಬೆಂಗಳೂರು ಶಾಖೆಯಲ್ಲಿ ಈ ಹುದ್ದೆ ಖಾಲಿ ಇದ್ದು; ಇಂಜಿನಿಯರ್‌ಗಳು / ವಿಜ್ಞಾನ ಪದವೀಧರರು ಹಣಕಾಸು ಜ್ಷಾನ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ
ಸಾರಸ್ವತ್ ಬ್ಯಾಂಕ್ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 750 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ಶುಲಕ ಪಾವತಿಸಬಹುದು. ಲಿಖಿತ ಪರೀಕ್ಷೆ / ಸಂದರ್ಶನ ನಡೆಸುವ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
09-10-2024 - ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
22-10-2024