Sarige Ilakhe Motor Vehicle Inspector Recruitment 2024 : ಕರ್ನಾಟಕ ಲೋಕಸೇವಾ ಆಯೋಗವು (Karnataka Public Service Commission – KPSC) ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆಯನ್ನು ಮಾಡಿರುವುದರಿಂದ 76 ಮೋಟಾರು ವಾಹನ ನಿರೀಕ್ಷಕರ (Motor Vehicle Inspector) ಹುದ್ದೆಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈ ಹಿಂದೆ ಕರ್ನಾಟಕ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ ಕಳೆದ ಮಾರ್ಚ್ 13, 2024ರಂದು ಅಧಿಸೂಚನೆ ಪ್ರಕಟಿಸಿ ಏಪ್ರಿಲ್ 22ರಿಂದ ಮೇ 21ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ವಯೋಮಿತಿ ವಿಸ್ತರಿಸಿದ ಹಿನ್ನಲೆಯಲ್ಲಿ ನವೆಂಬರ್ 5ರಿಂದ 20ರ ತನಕ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ನೇಮಕಾತಿ ಸಂಕ್ಷಿಪ್ತ ವಿವರ
- ನೇಮಕಾತಿ ಇಲಾಖೆ : ಕರ್ನಾಟಕ ಲೋಕಸೇವಾ ಆಯೋಗ (KPSC)
- ಹುದ್ದೆಗಳ ಹೆಸರು : ಮೋಟಾರು ವಾಹನ ನಿರೀಕ್ಷಕರು
- ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ : 76 ಹುದ್ದೆಗಳು
- ಅರ್ಜಿ ಸಲ್ಲಿಕೆ : ಆನ್‌ಲೈನ್ ಮೂಲಕ
- ಉದ್ಯೋಗ ಸ್ಥಳ : ಕರ್ನಾಟಕ
ಅರ್ಹತೆಗಳು ಏನಿರಬೇಕು?
ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ವ್ಯಾಸಂಗ ಪೂರ್ಣಗೊಳಿಸಿರಬೇಕು ಮತ್ತು ಆಟೊಮೊಬೈಲ್ ಎಂಜಿನಿಯರಿಂಗ್ / ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು. ಡಿಪ್ಲೊಮಾ ಆಟೊಮೊಬೈಲ್ ಎಂಜಿನಿಯರಿಂಗ್’ನಲ್ಲಿ ಪದವಿ /ಬಿಟೆಕ್ ಅರ್ಹತೆ ಇದ್ದರೂ ಅರ್ಜಿ ಸಲ್ಲಿಸಬಹುದು.
ಇದರೊಂದಿಗೆ ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯ. ಇದರೊಂದಿಗೆ ದೈಹಿಕ ಅರ್ಹತೆಯೂ ಬಹಳ ಮುಖ್ಯವಾಗುತ್ತದೆ. ಪುರುಷರಾಗಿದ್ದಲ್ಲಿ 168 ಸೆಂ.ಮೀ. ಎತ್ತರ ಮತ್ತು 86 ಸೆಂ.ಮೀ. ಎದೆಯಳತೆ ಹೊಂದಿರಬೇಕು. ಮಹಿಳೆಯರಾಗಿದ್ದಲ್ಲಿ 157 ಸೆಂ.ಮೀ. ಎತ್ತರ. 49 ಕೆ.ಜಿ ತೂಕ ಹೊಂದಿರಬೇಕಾಗುತ್ತದೆ.
ವೇತನ ಶ್ರೇಣಿ
ಕರ್ನಾಟಕ ಸಾರಿಗೆ ಇಲಾಖೆಯ ಮೋಟಾರು ವೆಹಿಹಲ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ರೂ. ಯಿಂದ 62,600 ರೂ. ವರೆಗೆ ಮಾಸಿಕ ವೇತನ ಇರಲಿದೆ. ಜೊತೆಗೆ ಸರ್ಕಾರದ ಎಲ್ಲ ಸವಲತ್ತುಗಳು ಅನ್ವಯವಾಗಲಿವೆ.
ವಯೋಮಿತಿ ವಿವರ
18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಪ್ರವರ್ಗ 2ಎ, 2ಬಿ, 3ಎ ಹಾಗೂ 3ಬಿ ವರ್ಗದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 38 ವರ್ಷಗಳು ಮತ್ತು ಎಸ್‌ಸಿ/ಎಸ್‌ಟಿ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಾಗಿದ್ದಲ್ಲಿ 40 ವರ್ಷಗಳು.
ಅರ್ಜಿ ಶುಲ್ಕವೆಷ್ಟು?
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ., ಪ್ರವರ್ಗ 2ಎ, 2ಬಿ, 3ಎ ಹಾಗೂ 3ಬಿ ವರ್ಗದ ಅಭ್ಯರ್ಥಿಗಳಿಗೆ 300 ರೂ., ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ವಿಶೇಷಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 05-11-2024
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 20-11-2024
ಅರ್ಜಿ ಲಿಂಕ್ : Apply Now