JobsNews

SBI ಬ್ಯಾಂಕ್ 1000+ ಹುದ್ದೆಗಳಿಗೆ ಅರ್ಜಿ ಆಹ್ವಾನ | ವಾರ್ಷಿಕ 66 ಲಕ್ಷ ರೂಪಾಯಿ ವರೆಗೂ ಸಂಬಳ SBI Bank SCO Recruitment 2024

WhatsApp Group Join Now
Telegram Group Join Now

SBI Bank SCO Recruitment 2024 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಬ್ಯಾಂಕಿನಲ್ಲಿ ಖಾಲಿ ಇರುವ 1000ಕ್ಕೂ ಹೆಚ್ಚು ಸ್ಪೆಷಲಿಸ್ಟ್ ಕೇಡರ್ ಆಫೀಸರ್ (Specialist Cadre Officer) ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಬಿಡುಗಡೆ ಮಾಡಿದ್ದು, ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ…

ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವ೦ತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆ, ಅರ್ಜಿ ಸಲ್ಲಿಸುವ ಲಿಂಕ್, ಬಿಡುಗಡೆಯಾಗಿರುವ ಅಧಿಕೃತ ಅಧಿಸೂಚನೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳನ್ನು ಖಾಯಂ ಹಾಗೂ ಗುತ್ತಿಗೆ ಆಧಾರದಲ್ಲಿ ಒಟ್ಟು 1040 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ನೇಮಕಾತಿ ಪ್ರಕ್ರಿಯೆಯು ಅಕ್ಟೋಬರ್ ನಿಂದ ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ.

SBI SCO Recruitment 2024 ಸಂಕ್ಷಿಪ್ತ ವಿವರ
  • ನೇಮಕಾತಿ ಇಲಾಖೆ : State Bank of India
  • ಹುದ್ದೆಗಳ ಹೆಸರು : Specialist Cadre Officers
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
  • ಒಟ್ಟು ಹುದ್ದೆಗಳು : 1040 ಹುದ್ದೆಗಳು
  • ಉದ್ಯೋಗ ಸ್ಥಳ : ಭಾರತದದ್ಯಾಂತ
ವಿದ್ಯಾರ್ಹತೆ, ವಯೋಮಿತಿ ವಿವರ

ಎಸ್‌ಬಿಐ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿAದ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸಿರಬೇಕು.

ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನಿಗದಿತ ದಿನಾಂಕಕ್ಕೆ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕನಿಷ್ಠ 25 ವರ್ಷ ಹಾಗೂ ಗರಿಷ್ಠ 45 ವರ್ಷದ ಒಳಗಿರಬೇಕು.

ಮಾಸಿಕ ಸಂಬಳ ಎಷ್ಟಿರುತ್ತದೆ?

ನೇಮಕಾತಿ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅದಿಸೂಚನೆಯಲ್ಲಿ ತಿಳಿಸಿರುವಂತೆ ನೇಮಕಾತಿ ನಿಯಮಗಳ ಪ್ರಕಾರ ಮಾಸಿಕ ವೇತನವನ್ನು ನೀಡಲಾಗುವುದು.

ಒಂದೊ೦ದು ಹುದ್ದೆಗೆ ಒಂದೊ೦ದು ರೀತಿಯ ವಾರ್ಷಿಕ ಸಂಬಳ ನಿಗದಿಪಡಿಸಿದ್ದು; ವರ್ಷಕ್ಕೆ ಕನಿಷ್ಟ 20.50 ಲಕ್ಷದಿಂದ 66 ಲಕ್ಷದ ವರೆಗೂ ಸಂಬಳ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ Selection Procedure

ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೂರು ಹಂತದಲ್ಲಿ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು. ಮೊದಲ ಹಂತ ಪ್ರೀಮಿನರಿ ಪರೀಕ್ಷೆ (Preliminary exam) 2ನೇ ಹಂತವಾಗಿ ಮೇನ್ಸ್ ಪರೀಕ್ಷೆ (Mains exam) ಹಾಗೂ 3ನೇ ಹಂತವಾಗಿ ಸಂದರ್ಶನ (Interview) ನಡೆಸುವ ಮೂಲಕ ಅಂತಿಮವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕಗಳ ವಿವರ

ಎಸ್‌ಸಿ/ಎಸ್‌ಟಿ, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಇವರನ್ನು ಹೊರತುಪಡಿಸಿ ಇತರೆ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ (Application fees) 750 ರೂಪಾಯಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :
    19 ಜುಲೈ 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
    08 ಆಗಸ್ಟ್ 2024

ಅಧಿಸೂಚನೆ : Download
ಅಧಿಕೃತ ಜಾಲತಾಣ : https://sbi.co.in

WhatsApp Group Join Now
Telegram Group Join Now

Related Posts