ಕುರಿ ಮೇಕೆ ಸಾಕಾಣಿಕೆಗೆ ಸರ್ಕಾರದ ಈ ಯೋಜನೆಗಳಲ್ಲಿ ಸಿಗುತ್ತದೆ ಭರ್ಜರಿ ಸಾಲ ಮತ್ತು ಸಬ್ಸಿಡಿ | ₹5ರಿಂದ ₹10 ಲಕ್ಷ ವರೆಗೆ ಕಡಿಮೆ ಬಡ್ಡಿ ಸಾಲ ಸೌಲಭ್ಯ Sheep and Goat Farming Loan Schemes

WhatsApp
Telegram
Facebook
Twitter
LinkedIn

Sheep and Goat Farming Loan Schemes : ರೈತರು, ಬರ-ನೆರೆಯಿಂದಾಗಿ ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಗೆ ಪರ್ಯಾಯವಾಗಿ ಉಪಕಸುಬನ್ನಾಗಿ ಕುರಿ, ಮೇಕೆ ಸಾಕಾಣಿಕೆ (Sheep and Goat Farming) ಕಡೆಗೆ ಒಲವು ತೋರಿಸುತ್ತಿದ್ದಾರೆ. ಕೃಷಿ (Agriculture), ತೋಟಗಾರಿಕೆ (Horticulture) ಬೆಳೆಗಳಲ್ಲಿ ಈಗ ಅಂತಹ ಲಾಭ ಸಿಗುತ್ತಿಲ್ಲ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿದರೂ, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಇಂತಹ ಅನಾನುಕೂಲದ ಸ್ಥಿತಿಯಲ್ಲಿ ಕುರಿ ಮತ್ತು ಮೇಕೆಗಳ ಸಾಕಾಣಿಕೆ ರೈತರ ಕೈಹಿಡಿದಿದ್ದು, ರೈತರು ಹಾಗೂ ಸಣ್ಣ ಮತ್ತು ಮಧ್ಯಮ ವರ್ಗದ ಕುಟುಂಬಗಳ ಪಾಲಿಗೆ ಇದು ವರದಾನವಾಗಿದೆ.

ಕುರಿ, ಮೇಕೆ ಸಾಕಾಣಿಕೆ ಮಾಡಿಕೊಂಡರೆ ಪ್ರತಿನಿತ್ಯ ಬಂಡವಾಳ ಹೂಡಿಕೆ ಮಾಡುವಂತಿಲ್ಲ. ಒಂದು ಬಾರಿ ಬಂಡವಾಳ ಹೂಡಿಕೆ ಮಾಡಿದರೆ, ಅದು ದ್ವಿಗುಣವಾಗುತ್ತಾ ಹೋಗುತ್ತದೆ. ಕುರಿ ಮತ್ತು ಮೇಕೆಗಳು ಕಡಿಮೆ ಸಂಖ್ಯೆಯಲ್ಲಿದ್ದರೆ, ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ಕಬ್ಬಿಣದ ಶೆಡ್ ನಿರ್ಮಾಣಕ್ಕೆ ಹಣ ಕೊಡುತ್ತಾರೆ. ಒಂದು ಕುರಿ ಎರಡು ವರ್ಷದಲ್ಲಿ ಮೂರು ಮರಿ ಹಾಕುತ್ತವೆ. ಆದಾಯವೂ ದ್ವಿಗುಣವಾಗುತ್ತದೆ.

ಸರ್ಕಾರದ ಸಾಲ ಮತ್ತು ಸಬ್ಸಿಡಿ ಯೋಜನೆಗಳು

ಕುರಿ-ಮೇಕೆ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಸಾಲ ಮತ್ತು ಸಬ್ಸಿಡಿ ಯೋಜನೆಗಳನ್ನು (Loan and subsidy schemes) ಅನುಷ್ಠಾನಗೊಳಿಸಿವೆ. ಈ ಪೈಕಿ ನರೇಗಾ ಯೋಜನೆಯಡಿ ನಿಮ್ಮೂರ ಗ್ರಾಮ ಪಂಚಾಯ್ತಿಯಲ್ಲಿಯೇ ಅರ್ಜಿ ಸಲ್ಲಿಸಿ ಕುರಿ-ಮೇಕೆ ಶೆಡ್ ನಿರ್ಮಾಣಕ್ಕೆ ಅನುದಾನ ಪಡೆಯಬಹುದು.

ಇನ್ನು ಕುರಿ-ಮೇಕೆ ಸಾಕಾಣಿಕೆದಾರರನ್ನು ಉತ್ತೇಜಿಸುವ ಉದ್ದೇಶದಿಂದಲೇ ಕರ್ನಾಟಕ ಕುರಿ ಮತ್ತು ಉಣ್ಣೆ ಅಬಿವೃದ್ಧಿ ನಿಗಮ ನಿಯಮಿತವನ್ನು (Karnataka Sheep & Wool Development Corporation Ltd) ಸ್ಥಾಪನೆ ಮಾಡಲಾಗಿದೆ. ಸದರಿ ನಿಗಮವು ರಾಜ್ಯಾದ್ಯಂತ ಕುರಿ ಸೊಸೈಟಿಗಳನ್ನು ಸ್ಥಾಪನೆ ಮಾಡಿದ್ದು; ಕುರಿ ಸೊಸೈಟಿ ಸದಸ್ಯರುಗಳಿಗೆ ಹಲವು ರೀತಿಯ ಸಾಲ, ಸಬ್ಸಿಡಿ ಸೌಲಭ್ಯಗಳನ್ನು ನೀಡಲಾಗುತ್ತದೆ.

ಇದಲ್ಲದೇ, ಕೇಂದ್ರ ಸರ್ಕಾರ ಪ್ರಯೋಜಿತ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆ (Pashu Kisan Credit Card – PKCC) ಹಾಗೂ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿಯಲ್ಲೂ (National Livestock Mission Scheme- NLM) ಕುರಿ-ಮೇಕೆ ಸಾಕಾಣಿಕೆಗೆ ದೊಡ್ಡ ಪ್ರಮಾಣದಲ್ಲಿ ಸಾಲ ಹಾಗೂ ಸಬ್ಸಿಡಿ ಸಿಗಲಿದೆ.

Sheep and Goat Farming Loan Schemes
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆ

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (PKCC) ಯೋಜನೆಯಡಿ ಮೀನು ಸಾಕಣೆ, ಕೋಳಿ ಸಾಕಣೆ, ಕುರಿ-ಮೇಕೆ, ಹಸು ಮತ್ತು ಎಮ್ಮೆ ಪಾಲನೆಗಾಗಿ ರೈತರಿಗೆ ಸಾಲ ನೀಡಲಾಗುತ್ತದೆ. ಈ ಕಾರ್ಡ್ ಮೂಲಕ ರೈತರು ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಪಡೆಯಬಹುದಾಗಿದೆ. ಕುರಿ-ಮೇಕೆ, ಹಸು, ಎಮ್ಮೆ, ಸಾಕಾಣಿಕೆಗೆ ಗರಿಷ್ಠ ₹2ರಿಂದ ₹3 ಲಕ್ಷ ವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗುತ್ತದೆ.

ಈ ಯೋಜನೆಯಲ್ಲಿ ಪ್ರತಿ ಕುರಿ/ಮೇಕೆಯ ಮೇಲೆ ತಲಾ ₹4,063 ರೂಪಾಯಿ ಸಾಲ ನೀಡಲಾಗುತ್ತದೆ. ₹1.6 ಲಕ್ಷ ವರೆಗಿನ ಸಾಲಗಳಿಗೆ ಯಾವುದೇ ಗ್ಯಾರಂಟಿ ಅಗತ್ಯವಿಲ್ಲ. ಹಣಕಾಸು ಸಂಸ್ಥೆಗಳು/ಬ್ಯಾಂಕ್‌ಗಳು 7% ಬಡ್ಡಿದರದಲ್ಲಿ ಸಾಲವನ್ನು ನೀಡಿದರೆ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಜಾನುವಾರು ಮಾಲೀಕರು 4% ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು.

ಆಸಕ್ತ ಫಲಾನುಭವಿಗಳು ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ಪಶು ಕಿಸಾನ್ ಕ್ರೆಡಿಟ್ ಕಾರ್ಡ್’ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಪರಿಶೀಲನೆಯ ನಂತರ ಒಂದು ತಿಂಗಳ ಬಳಿಕ ನಿಮಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ. ಈ ಸಾಲಕ್ಕೆ ಯಾವುದೇ ಸಬ್ಸಿಡಿ ಇರುವುದಿಲ್ಲ.

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ

ಇನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಡಿ (NLM) ಕುರಿ, ಮೇಕೆ ತಳಿ ಸಂವರ್ದನಾ ಘಟಕ ಸ್ಥಾಪನೆ ಮಾಡಿಕೊಳ್ಳಲು ಅವಕಾಶವಿದೆ. 100+1 ಕುರಿ ಘಟಕಕ್ಕೆ 10 ಲಕ್ಷ ರೂಪಾಯಿ ಸಾಲ ಸೌಲಭ್ಯ ದೊರೆಯಲಿದೆ.

ಈ ಯೋಜನೆಯಡಿ ಶೇ.50ರಷ್ಟು ಸಹಾಯಧನ ಸಿಗಲಿದೆ. ಅಂದರೆ ಅರ್ಧಕ್ಕರ್ಧ ಸಾಲ ಮನ್ನಾ ಆಗಲಿದೆ. ₹10 ಲಕ್ಷ ಆರ್ಥಿಕ ನೆರವು ಪಡೆದು ಕುರಿ ಮೇಕೆ ಸಾಕಾಣಿಕೆ ಶುರು ಮಾಡಿದರೆ ಬರೋಬ್ಬರಿ ₹5 ಲಕ್ಷ ಸಬ್ಸಿಡಿ ಸಿಗಲಿದೆ.

ಎನ್‌ಎಲ್‌ಎಂ ಲೋನ್ ಅರ್ಜಿ ಸಲ್ಲಿಕೆ ಹೇಗೆ?

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಡಿ (ಎನ್‌ಎಲ್‌ಎಂ) ಕುರಿ-ಮೇಕೆ ಘಟಕವನ್ನು ಸ್ಥಾಪನೆ ಸಾಲ ಪಡೆಯಲಿಚ್ಚಿಸುವ ರೈತರು, ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಪಶುಪಾಲನಾ ಇಲಾಖೆಯನ್ನು ಸಂಪರ್ಕಿಸಬಹುದು. ಅಥವಾ https://nlm.udyamimitra.in/ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Samagra Krushi   About Us
Samagra Krushi samagrakrushi.com - Comprehensive Kannada website for govt scheme, education, jobs information Read More
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon