UAS Dharwad Assistant Professor Recruitment 2024 : ಪ್ರತಿಷ್ಟಿತ ಧಾರವಾಡದ ಕೃಷಿ ವಿಶ್ವವಿದ್ಯಾಲಯ (University of Agricultural Sciences, Dharwad) ಅಧೀನದ ವಿವಿಧ ಮಹಾವಿದ್ಯಾಲಯಗಳ ಅನೇಕ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನವೆಂಬರ್ 26ರಂದು ನೇರ ಸಂದರ್ಶನಕ್ಕೆ ಹಾಜರಾಗಬೇಕೆಂದು ಧಾರವಾಡ ಕೃಷಿ ವಿವಿ ಶಿಕ್ಷಣ ನಿರ್ದೇಶಕರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಹುದ್ದೆಗಳ ವಿವರ
ಸದರಿ ಸಹಾಯಕ ಪ್ರಾಧ್ಯಾಪಕರು ಹುದ್ದೆಗಳು ತಾತ್ಕಾಲಿಕ/ಅರೆಕಾಲಿಕ ಅವಧಿಗೆ ಸೀಮಿತವಾಗಿದ್ದು; ಪೂರ್ಣಾವಧಿಗೆ ಹಾಗೂ ಅರೆಕಾಲಿಕ ಅವಧಿಗೆ ಮೀಸಲಿರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ:
- ಪೂರ್ಣಾವಧಿ ಹುದ್ದೆಗಳು : 44
- ಅರೆಕಾಲಿಕ ಹುದ್ದೆಗಳು : 13
- ಒಟ್ಟು ಹುದ್ದೆಗಳು : 57
ವಯೋಮಿತಿ ಮತ್ತು ವಿದ್ಯಾರ್ಹತೆ
ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಗೊಳಪಡುವ ಧಾರವಾಡ, ವಿಜಯಪುರ, ಹನುಮನಹಟ್ಟಿ, ಶಿರಸಿಯ ಕೃಷಿ ಮಹಾವಿದ್ಯಾಲಯಗಳ ಅನೇಕ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ವಿಷಯವಾರು ಸ್ನಾತಕೋತ್ತರ ಪದವಿ ಮತ್ತು ಎಂಟೆಕ್ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಯ ವಯಸ್ಸು ಸಂದರ್ಶನದ ದಿನಾಂಕಕ್ಕೆ ಅನ್ವಯವಾಗುವಂತೆ 60 ವರ್ಷದೊಳಗಿರಬೇಕು.
ವೇತನ ಮತ್ತು ಸಂದರ್ಶನದ ವಿವರ
ಪೂರ್ಣವಾಧಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ 40,000 – 45,000 ರೂ., ಅರೆಕಾಲಿಕ ಅವಧಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಒಂದು ತಾಸಿಗೆ 2,000 ರೂ. ವೇತನವನ್ನು ನಿಗದಿಪಡಿಸಲಾಗಿದೆ.
ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನವನ್ನು ನಡೆಸಲಾಗುತ್ತದೆ. ಸಂದರ್ಶನವು ಇದೇ ನವೆಂಬರ್ 12 ರಿಂದ 26ರ ವರೆಗೆ ನಡೆಯಲಿದೆ. ಅಗತ್ಯ ದಾಖಲೆಗಳೊಂದಿಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ, ಕೃಷಿ ನಗರ, ಧಾರವಾಡ-580005 ಈ ವಿಳಾಸದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ಅಭ್ಯರ್ಥಿಗಳು ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಈ ಕಚೇರಿಗೆ ಕಳುಹಿಸುವಂತಿಲ್ಲ. ಸಂದರ್ಶನಕ್ಕೆ ಬರುವಾಗ ಅರ್ಜಿಗೆ ಸಂಬAಧಪಟ್ಟ ಎಲ್ಲ ಪೂರಕ ದಾಖಲೆಗಳನ್ನು ಅಂದರೆ ಮೂಲ ಪ್ರತಿ ಹಾಗೂ ಅವುಗಳ ಎರಡು ಸೆಟ್ ಸ್ವಯಂ ದೃಢೀಕೃತ ಛಾಯಾ ಪ್ರತಿಗಳನ್ನು ಭರ್ತಿ ಮಾಡಿದ ಅರ್ಜಿ ನಮೂನೆಗೆ ಲಗತ್ತಿಸಿ, ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.
ಅಧಿಸೂಚನೆ : Download
ಅಧಿಕೃತ ಜಾಲತಾಣ : https://uasd.edu/