Vidyasiri Scholarship for Post Matric Students : ವಿದ್ಯಾರ್ಥಿಗಳು 2024-25ನೇ ಸಾಲಿನ ‘ವಿದ್ಯಾಸಿರಿ’ (Vidyasiri Scholarship) ಯೋಜನೆಯ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಿದೆ. ಇದೇ ಸೆಪ್ಟೆಂಬರ್ 15ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಮೂಲಕ ಅರ್ಹ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.
ಮೆಟ್ರಿಕ್ ನಂತರದ ಕೋರ್ಸುಗಳಾದ ಪಿಯು ಹಾಗೂ ತತ್ಸಮಾನ ವಿದ್ಯಾರ್ಹತೆ, ಸಾಮಾನ್ಯ ಪದವಿ ಹಾಗೂ ಸಂಯೋಜಿತ ಉಭಯ ಪದವಿ ಕೋರ್ಸ್ಗಳನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸರ್ಕಾರದ ಈ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಯಾವೆಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು?
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುತ್ತಿರುವ ಸದರಿ ವಿದ್ಯಾಸಿರಿ ಯೋಜನೆಯ ಪ್ರಯೋಜನ ಪಡೆಯಲು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ / ಅರೆ ಅಲೆಮಾರಿ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಹಾಗೂ ಊಟ ಹಾಗೂ ವಸತಿ ಸಹಾಯ ಯೋಜನೆ ‘ವಿದ್ಯಾಸಿರಿ’ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
- ಆಧಾರ್ ನಂಬರ್
- ಮೊಬೈಲ್ ನಂಬರ್
- ಇ-ಮೇಲ್ ಐಡಿ
- ಎಸ್‌ಎಸ್‌ಎಲ್‌ಸಿ ನೋಂದಣಿ ಸಂಖ್ಯೆ
- ಜಾತಿ ಮತ್ತು ಆದಾಯ ಪತ್ರದ ಆರ್.ಡಿ ಸಂಖ್ಯೆ
- ವಿಕಲಚೇತನರಾಗಿದ್ದಲ್ಲಿ ಯುಡಿಐಡಿ ಗುರುತಿನ ಸಂಖ್ಯೆ
- ವಿದ್ಯಾರ್ಥಿಯು ವಾಸವಿರುವ ಜಿಲ್ಲೆಯ, ತಾಲ್ಲೂಕು, ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ವಿಳಾಸ
- ಕಾಲೇಜು ದಾಖಲಾತಿ/ ನೋಂದಣಿ ಸಂಖ್ಯೆ
ssp.postmatric.karnataka.gov.in ವೆಬ್‌ಸೈಟ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-09-2024
- ಅರ್ಜಿ ಸಲ್ಲಿಸುವ ಲಿಂಕ್: Apply Now
- ಅಧಿಕೃತ ವೆಬ್‌ಸೈಟ್: ssp.postmatric.karnataka.gov.in, bcwd.karnataka.gov.in
- ಇಲಾಖೆಯ ಸಹಾಯವಾಣಿ: 8050770005