Village Administrative New Recruitment 2024 : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (Karnataka Examination Authority – KEA) ಕಂದಾಯ ಇಲಾಖೆಯಲ್ಲಿ (Karnataka Revenue Department) ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕರ್ನಾಟಕ (ಸ್ಥಳೀಯ) ವೃಂದದಲ್ಲಿನ ಒಟ್ಟು 1,000 ಗ್ರಾಮ ಆಡಳಿತಾಧಿಕಾರಿ (Village Administrative Officer) ಹುದ್ದೆಗಳನ್ನು ಭರ್ತಿ ಮಾಡಲು ಮತ್ತೊಮ್ಮೆ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳ ವಯೋಮಿತಿಯನ್ನು ಹೆಚ್ಚಳಗೊಳಿಸಿದ ಹಿನ್ನೆಲೆಯಲ್ಲಿ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗೆ ಇದೀಗ ತಿದ್ದುಪಡಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಕಾಂಕ್ಷಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ವಿದ್ಯಾರ್ಹತೆ ಎಷ್ಟಿರಬೇಕು?
ಕನಿಷ್ಠ ದ್ವಿತೀಯ ಪಿಯು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ಸಿಬಿಎಸ್‌ಇ ಅಥವಾ ಇತರ ಶೈಕ್ಷಣಿಕ ಮಂಡಳಿಗಳು ನಡೆಸುವ 10+2 ಪರೀಕ್ಷೆ ಉತ್ತೀರ್ಣರಾಗಿರಬೇಕು. ಮೂರು ವರ್ಷಗಳ ಡಿಪ್ಲೊಮಾ ಅಥವಾ ಎರಡು ವರ್ಷಗಳ ಐಟಿಐ, ವೃತ್ತಿ ಶಿಕ್ಷಣ ಡಿಪ್ಲೊಮಾ ಪೂರೈಸಿರಬೇಕು. ಜಿಲ್ಲಾವಾರು ಲಭ್ಯವಿರುವ ಹುದ್ದೆಗಳ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ವಯೋಮಿತಿ ವಿವರ
ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊರಡಿಸಿದ್ದ ಅಧಿಸೂಚನೆಯಲ್ಲಿ ತಿಳಿಸಿದ್ದಕ್ಕಿಂತ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ವಿನಾಯ್ತಿ ನೀಡಲಾಗಿದೆ. ಅದರಂತೆ ಸಾಮಾನ್ಯ ವರ್ಗದವರಿಗೆ 38 ವರ್ಷ, ಒಬಿಸಿಯ ವರ್ಗದವರಿಗೆ 41 ವರ್ಷ ಹಾಗೂ ಪರಿಶಿಷ್ಟರು ಹಾಗೂ ಅಂಗವಿಕಲರಿಗೆ 43 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕ ಎಷ್ಟು?
ಕರ್ನಾಟಕ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಸಾಮಾನ್ಯ ಹಾಗೂ ಇತರ ಪ್ರವರ್ಗಗಳ ಅಭ್ಯರ್ಥಿಗಳಿಗೆ 750 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಇನ್ನು ಪರಿಶಿಷ್ಟರು, ಮಾಜಿ ಸೈನಿಕರು ಮತ್ತು ಅಂಗವಿಕಲರಿಗೆ 500 ರೂಪಾಯಿ ಶುಲ್ಕ ಇರಲಿದೆ.
ಮಾಸಿಕ ವೇತನವೆಷ್ಟು?
ಕರ್ನಾಟಕ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ನೇಮಕವಾಗು ಅಭ್ಯರ್ಥಿಗಳಿಗೆ ಮಾಸಿಕ 21,400 ರಿಂದ 42,000 ರೂಪಾಯಿ ವರೆಗೂ ವೇತನ ಶ್ರೇಣಿ ಇರಲಿದೆ. ಇದರ ಜೊತೆಗೆ ಸರ್ಕಾರದ ಎಲ್ಲ ಸವಲತ್ತುಗಳು ಅನ್ವಯವಾಗಲಿವೆ.
ಸ್ಪರ್ಧಾತ್ಮಕ ಪರೀಕ್ಷೆ ಹೇಗೆ?
ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ 150 ಅಂಕಗಳಿಗೆ ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಲಾ 100 ಅಂಕದ ಎರಡು ಪತ್ರಿಕೆಗಳಿದ್ದು, 2 ತಾಸಿನ ಅವಧಿ ನೀಡಲಾಗುತ್ತದೆ.
ಪತ್ರಿಕೆ-1 ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ವಿಷಯಗಳಿಗೆ ಸಂಬ೦ಧಿಸಿದ್ದರೆ, ಎರಡನೇ ಪತ್ರಿಕೆಯು ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನಕ್ಕೆ ಸಂಬAಧಿಸಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೇ ಶೇ.25 ಅಂಕಗಳನ್ನು ಕಳೆಯಲಾಗುತ್ತದೆ.
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ :
28-09-2024 - ಅಧಿಸೂಚನೆ : Download
- ಅರ್ಜಿ ಸಲ್ಲಿಕೆ ಲಿಂಕ್ : ಇಲ್ಲಿ ಒತ್ತಿ