NewsSchemes

ಮೊಬೈಲ್‌ನಲ್ಲೇ ಪಡೆಯಿರಿ ನಿಮ್ಮೂರಿನ ಮಳೆ, ಬೆಳೆ, ಜಾನುವಾರು ಮಾಹಿತಿ Weather Forecas Report Meghdoot Mobile App

WhatsApp Group Join Now
Telegram Group Join Now

Weather Forecas Report Meghdoot Mobile App : ನಿಮ್ಮೂರಲ್ಲಿ ಯಾವ ದಿನ ಎಷ್ಟು ಮಳೆ ಬೀಳಲಿದೆ, ಕಾಲಮಾನ, ವಾತಾವರಣಕ್ಕೆ ಅನುಗುಣವಾಗಿ ನಿಮ್ಮ ಜಿಲ್ಲೆಯಲ್ಲಿ ಬೆಳೆಯುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ರೋಗ, ಕೀಟಬಾಧೆ, ಮಾರುಕಟ್ಟೆ ಕುರಿತ ಸಲಹೆ ಹಾಗೂ ನಿಮ್ಮ ಹಸು, ಎಮ್ಮೆಗಳ ರೋಗ, ಔಷಧೋಪಚಾರ, ಮೇವು-ಆಹಾರ ಕುರಿತ ಮಾಹಿತಿಗಳೆಲ್ಲವನ್ನೂ ಮೊಬೈಲ್‌ನಲ್ಲಿಯೇ ಪಡೆಯಬಹುದು.

ವಿಶೇಷವೆಂದರೆ ಕೃಷಿ, ತೋಟಗಾರಿಕೆ ಮತ್ತು ಪಶುಪಾಲನೆಯ ಮುಂಜಾಗ್ರತ ಕ್ರಮಗಳನ್ನು ಅನುಸರಿಸಲು ಇಲ್ಲಿ ಅತ್ಯಂತ ಉಪಯುಕ್ತ ಮಾಹಿತಿ ಸಿಗುತ್ತದೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಈ ಮಾಹಿತಿ ಅಪ್‌ಡೇಟ್ ಆಗುವುದರಿಂದ ಸಕಾಲಿಕ ಮಾಹಿತಿ ಆಧರಿಸಿ ರೈತರು ಕೃಷಿ ಮತ್ತು ಪಶುಪಾಲನೆಯಲ್ಲಿ ಸುಸ್ಥಿರ ಆದಾಯ ಗಳಿಸಬಹುದು.

ಏನಿದು ಮೊಬೈಲ್ ಮಾಹಿತಿ?

ಕೇಂದ್ರ ಸರ್ಕಾರದ ಕೃಷಿ ಮತ್ತು ಭೂ ವಿಜ್ಞಾನ ಸಚಿವಾಲಯ ನೆರವಿನೊಂದಿಗೆ ಅಭಿವೃದ್ಧಿ ಪಡಿಸಿರುವ ಮೇಘದೂತ್ ತಂತ್ರಾಂಶ (Meghdoot website) ಹಾಗೂ ಮೊಬೈಲ್ ಆಪ್ (Meghdoot App) ಮೂಲಕ ರೈತರಿಗೆ ಮತ್ತು ಹೈನುಗಾರರಿಗೆ ಮಾರ್ಗದರ್ಶನ ಲಭ್ಯವಾಗಲಿದೆ. ಸ್ಮಾರ್ಟ್ ಫೋನ್ ಇದ್ದರೆ ಸಾಕು; ವಾತಾವರಣ ಆಧಾರಿತ ಕೃಷಿ ಚಟುವಟಿಕೆ ಕೈಗೊಳ್ಳಲು ಸ್ಥಳೀಯ ಭಾಷೆಯಲ್ಲಿ ಮಾಹಿತಿ ದೊರೆಯುತ್ತದೆ. ಯಾವ ಋತುವಿನಲ್ಲಿ ಎಂತಹ ಬೆಳೆ ಬೆಳೆಯಬೇಕು. ಬೆಳೆ ರೋಗಬಾಧೆ, ಕೀಟಗಳ ಬಗೆಗಿನ ಮಾಹಿತಿ ಸಿಗುತ್ತದೆ.

ದಿಲ್ಲಿಯ ಐಐಟಿಎಂ, ಪುಣೆ ಮತ್ತು ಐಎಂಡಿ ಸಹಯೋಗದೊಂದಿಗೆ ಹೈದರಾಬಾದ್‌ನ ಇಂಟನ್ಯಾಶನಲ್ ಕಾಸ್ಟ್ ರಿಸರ್ಚ್ ಇನ್ ಸ್ಟಿಟ್ಯೂಟ್ ಫಾರ್ ಸೆಮಿ-ಆಂಡ್ ಟ್ರಾಪಿಕ್‌ನಲ್ಲಿ (ICRISAT) ಡಿಜಿಟಲ್ ಅಗ್ರಿಕರಲ್ ರಿಸರ್ಚ್ ಥೀಮ್ (Digital Agricultural Research Theme) ಈ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದೆ. ಅಗತ್ಯಕ್ಕೆ ಅನುಗುಣವಾದ ಮಾಹಿತಿ ಪೂರೈಸುವ ಕೆಲಸವನ್ನು ಸದರಿ ಆಪ್‌ನಲ್ಲಿ ಅಳವಡಿಸಲಾಗಿದೆ. ಎರಡು ವರ್ಷದ ಹಿಂದೆ ಇದನ್ನು ಕೇಂದ್ರ ಸರ್ಕಾರ ಪರಿಚಯಿಸಿದ್ದು ಈಗಾಗಲೇ ಸಾಕಷ್ಟು ರೈತರು ಇದರ ಲಾಭ ಪಡೆಯುತ್ತಿದ್ದಾರೆ.

ದೇಶದ 668 ಜಿಲ್ಲೆಗಳ ಮಾಹಿತಿ

ಮೇಘದೂತ್ ತಂತ್ರಾಂಶ ಆರಂಭಿಕ ದಿನಗಳಲ್ಲಿ ಕರ್ನಾಟಕದ 30 ಜಿಲ್ಲೆಗಳು ಸೇರಿ ದೇಶದ 150 ಜಿಲ್ಲೆಯಲ್ಲಿ ಚಾಲನೆ ನೀಡಿತ್ತು. ಇದೀಗ 668 ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜಿಲ್ಲೆಗಳಿಗೆ ಈ ತಂತ್ರಾಂಶದ ಪ್ರಯೋಜನ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಕನ್ನಡವೂ ಸೇರಿದಂತೆ ದೇಶದ ಒಟ್ಟು 10 ಭಾಷೆಯಲ್ಲಿ ಜಿಲ್ಲಾವಾರು ರೈತರಿಗೆ ಮುಂದಿನ ಐದು ದಿನಗಳ ಹವಾಮಾನ ಆಧಾರಿತ ಉಷ್ಣಾಂಶ, ಮಳೆ, ಮೋಡ, ಗಾಳಿಯ ದಿಕ್ಕು ಮತ್ತು ವೇಗದ ಬಗ್ಗೆ ಮಾಹಿತಿ ಸಿಗುತ್ತದೆ. ವಾರದಲ್ಲಿ ಎರಡು ದಿವಸ ಅಗೋ ಮೆಟ್ ಫೀಲ್ಡ್ ಯೂನಿಟ್‌ಗಳು (ಎಎಂಎಫ್ಯು) ಜಿಲ್ಲಾವಾರು, ಬೆಳೆವಾರು, ಜಾನುವಾರು ಸಲಹೆಯನ್ನು ನೀಡಲಾಗುತ್ತಿದೆ.

ಅಂಗೈಯಲ್ಲೇ ಉಪಯುಕ್ತ ಮಾಹಿತಿ

ನಿಮ್ಮ ಜಿಲ್ಲೆಯ ಎಲ್ಲ ಬೆಳೆಗಳ ಕುರಿತ ಮಾಹಿತಿ, ಭೂತಕಾಲ ಮತ್ತು ವರ್ತಮಾನದ ಹವಾಮಾನ, ಮುನ್ಸೂಚನೆ, ಶೀಘ್ರ ನೋಟ, ಉಷ್ಣಾಂಶ, ಆದ್ರತೆ, ಮೋಡ, ಗಾಳಿಯ ದಿಕ್ಕು, ವೇಗ ಸೇರಿದಂತೆ ಇತ್ಯಾದಿ ಮಾಹಿತಿ ಇದಲ್ಲಿದೆ. ಅಷ್ಟೇ ಅಲ್ಲದೇ, ಜಾನುವಾರುಗಳಿಗೆ ಬರಬಹುದಾದ ಕಾಯಿಲೆ, ಚಿಕಿತ್ಸೆ, ಲಸಿಕೆ, ಔಷಧಗಳ ಸಂಪೂರ್ಣ ಮಾಹಿತಿ ಕೂಡ ಇದರಲ್ಲಿ ಸಿಗುತ್ತದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಕೃಷಿ ಮತ್ತು ಹೈನುಗಾರಿಕೆಗೆ ಸಂಬ೦ಧಿಸಿದ ಎಲ್ಲಾ ಮಾಹಿತಿ ಮೊಬೈಲ್‌ನಲ್ಲಿಯೇ ದೊರೆಯುತ್ತದೆ.

ನಿಮ್ಮ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಮೇಘದೂತ್ ಆಪ್ ಮೂಲಕ ಪ್ರಾದೇಶಿಕ ಮಾಹಿತಿ ನೀಡುತ್ತವೆ. ಸದರಿ ವಿಶ್ವವಿದ್ಯಾಲಯಗಳಲ್ಲಿಯ ಗ್ರಾಮೀಣ ಕೃಷಿ ಮೌಸಮ್ ಸೇವಾ ವಿಭಾಗದಲ್ಲಿ ನೋಡಲ್ ಅಧಿಕಾರಿ ಹಾಗೂ ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ನೀಡಿದ್ದು ಅವರೇ ಇದರ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಹೀಗಾಗಿ ಮೇಘದೂತ್ ಆಪ್‌ನಲ್ಲಿ ಲಭ್ಯವಾಗುವ ಮಾಹಿತಿ ಬಹುತೇಕ ವಿಶ್ವಾರ್ಹವಾಗಿದ್ದು ರೈತರು ಇದರ ಪ್ರಯೋಜನ ಪಡೆಯಬೇಕಿದೆ.

ಆಪ್ ಡೌನ್‌ಲೋಡ್ ಹೇಗೆ?

ಗೂಗಲ್ ಪ್ಲೇ ಸ್ಟೋರ್ ಅಥವಾ ಗೂಗಲ್ ಕ್ರೋಮ್‌ನಲ್ಲಿ https/[email protected] ಟೈಪ್ ಮಾಡಿದಾಗ ಮೇಘದೂತ್ ಆಪ್‌ನ ಹೋಮ್ ಪೇಜ್ ತೆರೆಯುತ್ತದೆ. ಅಲ್ಲಿ ಇನ್ಸಸ್ಟಾಲ್ ಮೇಲೆ ಕ್ಲಿಕ್ ಮಾಡಬೇಕು. ಆಪ್ ಡೌನ್ಲೋಡ್ ಆಗುತ್ತದೆ. ಬಳಿಕ ನೋಂದಣಿಗಾಗಿ ಭಾಷೆ ಆಯ್ಕೆ ಮಾಡಿಕೊಂಡು ನಿಮ್ಮ ಹೆಸರು, ಮೊಬೈಲ್ ನಂಬರ್, ರಾಜ್ಯ ಮತ್ತು ಜಿಲ್ಲೆಗಳನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿದರೆ ನೋಂದಣಿ ಆಗಿರುವುದಾಗಿ ಮೊಬೈಲ್ ಪರದೆಯ ಮೇಲೆ ಹೆಸರು ಬರುತ್ತದೆ. ಇದಾದ ಬಳಿಕ ಲಾಗಿನ್ ಆಗಿ ಮಳೆ ಮುನ್ಸೂಚನೆ ಸೇರಿದಂತೆ ಇತರ ಮಾಹಿತಿಯನ್ನು ಪಡೆಯಬಹುದು.

  • Meghdoot App link : Download
  • Meghdoot website link : https://mausam.imd.gov.in/
WhatsApp Group Join Now
Telegram Group Join Now

Related Posts