News

ಕರ್ನಾಟಕದಲ್ಲಿ ಯಾವಾಗ ತಗ್ಗಲಿದೆ ಹಿಂಗಾರು ಮಳೆ ಅಬ್ಬರ? | ಹವಾಮಾನ ಇಲಾಖೆ ಸೂಚನೆ ಇಲ್ಲಿದೆ… When will rain subside in Karnataka?

WhatsApp Group Join Now
Telegram Group Join Now

When will rain subside in Karnataka? : ಹಿಂಗಾರು ಮಳೆಯ (Hingaru Male) ಆರ್ಭಟಕ್ಕೆ ಕರ್ನಾಟಕದಲ್ಲಿ ಎರಡು ಡಜನ್‌ಗೂ ಹೆಚ್ಚು ಜಿಲ್ಲೆಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಕೊಯ್ಲಿಗೆ ಬಂದಿದ್ದ ಬೆಳೆ ನೀರುಪಾಲಾಗಿ ಲಕ್ಷಾಂತ ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿದೆ. ರಾಜಧಾನಿ ಬೆಂಗಳೂರಿನಿಂದ ಹಿಡಿದು ರಾಜ್ಯದ ಗ್ರಾಮೀಣ ಪ್ರದೇಶದ ವರೆಗೂ ಮಳೆ ಅಬ್ಬರ ಮುಂದುವರೆದಿದೆ.

ಕಳೆದ ಒಂದು ವಾರದಿಂದ ಪ್ರತಿ ರಾತ್ರಿ ಗುಡುಗು ಮಿಂಚು ಸಹಿತ ರಚ್ಚೆ ಹಿಡಿದು ಸುರಿಯುತ್ತಿವ ಮಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲವು ದಿನ ಮುಂದುವರೆಯಲಿದೆ. ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಕರಾವಳಿ (Karnatak Coast) ಮತ್ತು ದಕ್ಷಿಣ ಒಳನಾಡಿನ (Southern hinterland) ಕೆಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ನಂತರ ಮಳೆ ಪ್ರಮಾಣ ತುಸು ತಗ್ಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ.

ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ

ನಿನ್ನೆ ಅಕ್ಟೋಬರ್ 21ರ ಸೋಮವಾರ ರಾಜ್ಯಾದ್ಯಂತ ಮಳೆಯಾಗಿದ್ದು; ಅದರಲ್ಲೂ ಕಾರವಾರ, ಮುಂಡಗೋಡು, ಹಾವೇರಿ ಜಿಲ್ಲೆಯ ಶಿಗ್ಗಾವಿ, ಹಿರೇಕೆರೂರು, ಉಡುಪಿ ಜಿಲ್ಲೆಯ ಕುಂದಾಪುರ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಆನವಟ್ಟಿ ಮತ್ತು ಚಿತ್ರದುರ್ಗ ಜಿಲ್ಲೆಯ ಬಹಳಷ್ಟು ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗಿದೆ.

ಈ ಹಿನ್ನಲೆಯಲ್ಲಿ ಅಕ್ಟೋಬರ್ 22ರ ಇಂದು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಲಿದ್ದು; ಯೆಲ್ಲೊ ಅಲರ್ಟ್ (Yellow alert) ನೀಡಲಾಗಿದೆ.

When will rain subside in Karnataka

ಭಾರಿ ಪ್ರಮಾಣದ ಬೆಳೆ ಹಾನಿ

ಕಳೆದ 2-3 ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಗೆ ಸುಮಾರು 36,000 ಹೆಕ್ಟೇರ್ ಪ್ರದೇಶ ವ್ಯಾಪ್ತಿಯ ಬೆಳೆ ಹಾನಿಗೊಳಗಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 25,000 ಹೆಕ್ಟೇರ್ ಅಡಿಕೆ ಬೆಳೆಗೆ ಕೊಳೆರೋಗ ತಗುಲಿದೆ. 3,000 ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ ಬೆಳೆ ಹಾನಿಯಾಗಿದೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನಲ್ಲಿ 850 ಎಕರೆಗೂ ಹೆಚ್ಚು ಪ್ರದೇಶದ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ.

ಇನ್ನು ಕೊಪ್ಪಳ ಜಿಲ್ಲೆಯಲ್ಲಿ 350 ಹೆಕ್ಟೇರ್ ಭತ್ತದ ಬೆಳೆ ಹಾನಿಯಾಗಿದ್ದರೆ, 900 ಹೆಕ್ಟೇರ್’ಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ, ಈರುಳ್ಳಿ, ಮೆಣಸಿನಕಾಯಿ ಬೆಳೆಗಳು ಹಾನಿಗೊಳಗಾಗಿವೆ. ಅದೇ ರೀತಿ ಹಾವೇರಿ ಜಿಲ್ಲೆಯಲ್ಲಿ ಸುಮಾರು 5,000ಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ, ಕಡ್ಲೆ ಬೆಳೆ ಹಾನಿಯಾಗಿದೆ. ಇದಲ್ಲದೇ ವಿವಿಧ ಜಿಲ್ಲೆಗಳಲ್ಲಿ ಕೊಯ್ಲಿಗೆ ಬಂದಿದ್ದ ಬೆಳೆ ಸಂಪೂರ್ಣ ನೀರಿಪಾಲಾದ ವರದಿಯಾಗಿದೆ.

ಯಾವಾಗ ತಗ್ಗಲಿದೆ ಮಳೆಯಬ್ಬರ?

ನಿರಂತರ ಮಳೆ, ಪ್ರವಾಹದಿಂದ ವ್ಯಾಪಕ ನಷ್ಟ ಸಂಭವಿಸುತ್ತಿದ್ದು; ಮಳೆಯಬ್ಬರ ಯಾವಾಗ ತಗ್ಗಲಿದೆ? ಎಂಬ ಆತಂಕದ ಪ್ರಶ್ನೆ ಹಲವರನ್ನು ಕಾಡತೊಡಗಿದೆ. ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಅಕ್ಟೋಬರ್ 23, 24 ಮತ್ತು 25ರ ವರೆಗೆ ಅತಿ ಸಾಧಾರಣ ಮಳೆಯಾಗಲಿದ್ದು; ಕ್ರಮೇಣ ಮಳೆ ಅಬ್ಬರ ತಗ್ಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತವು ವಾಯವ್ಯ ದಿಕ್ಕಿನಲ್ಲಿ ಚಲಿಸುತ್ತಾ ತೀವ್ರಗೊಂಡಿದ್ದರಿಂದ ‘ಥಾಣಾ’ ಎನ್ನುವ ಚಂಡಮಾರುತ (Cyclone) ಸೃಷ್ಟಿಯಾಗಿದೆ. ಇದು ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಬೆಂಗಳೂರು) ನಿರ್ದೇಶಕ ಸಿ ಎಸ್ ಪಾಟೀಲ್ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now

Related Posts