Mudra Tarun Loan for Small Business : ಪಿಎಂ ಮುದ್ರಾ ಸಾಲ ಯೋಜನೆಯಡಿ (Pradhan Mantri Mudra Yojana- PMMY) ಅನೇಕ ಬ್ಯಾಂಕುಗಳು ಸಾಲ ಸೌಲಭ್ಯ ಒದಗಿಸುತ್ತವೆ. ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಮಾತ್ರವಲ್ಲದೇ ಇಎಂಎಫ್ಐ ಹಾಗೂ ಎನ್ಬಿಎಫ್ಸಿ ವಲಯದ ಫೈನಾನ್ಶಿಯಲ್ ಕಂಪನಿಗಳೂ ಸಹ ಈ ಸಾಲ ಯೋಜನೆಯ ವ್ಯಾಪಿಗೆ ಒಳಪಟ್ಟಿವೆ.
ಸಣ್ಣ ವ್ಯಾಪಾರವನ್ನು (Small Business) ಪ್ರಾರಂಭಿಸುವ ಅಥವಾ ಅಸ್ತಿತ್ವದಲ್ಲಿರುವ ಉದ್ಯಮವನ್ನು ವಿಸ್ತರಿಸಲು ಬಯಸುವ ವ್ಯಕ್ತಿಗಳು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ 50,000 ದಿಂದ 20 ಲಕ್ಷ ರೂಪಾಯಿ ವರೆಗೂ ಸಾಲ ಪಡೆಯಬಹುದಾಗಿದೆ.
ಏನಿದು ಮುದ್ರಾ ಲೋನ್?
ಒUಆಖಂ ಸಾಲ ಎಂದರೆ ಮೈಕ್ರೋ ಯೂನಿಟ್ ಡೆವಲಪ್ಮೆಂಟ್ ಮತ್ತು ರಿಫೈನೆನ್ಸ್ ಏಜೆನ್ಸಿ (Micro Units Development & Refinance Agency Ltd.,) ಎಂದರ್ಥ. ಅದರ ಮಾರ್ಗದರ್ಶನದಲ್ಲಿ ವಿವಿಧ ಬ್ಯಾಂಕುಗಳಿ೦ದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎ೦ಇ) ಸಾಲ ನೀಡಲಾಗುತ್ತದೆ. ಮುದ್ರಾ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು ಅಥವಾ ಘಟಕಗಳಿಗೆ ಅಗತ್ಯ ಸಾಲ ನೀಡಲಾಗುತ್ತದೆ.
ನೀವು ಎಸ್ಬಿಐನಲ್ಲಿ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆದಾರರಾಗಿದ್ದರೆ ಎಸ್ಬಿಐನಿಂದ 50,000 ದಿಂದ 20 ಲಕ್ಷ ರೂಪಾಯಿ ವರೆಗೂ ಇ-ಮುದ್ರಾ ಸಾಲವನ್ನು ತೆಗೆದುಕೊಳ್ಳಬಹುದು. ಇ-ಮುದ್ರಾ ಸಾಲಗಳು ಆನ್ಲೈನ್ನಲ್ಲೇ ಲಭ್ಯ ಇದ್ದು 5 ವರ್ಷಗಳ ವರೆಗೆ ಸಾಲದ ಕಂತುಗಳನ್ನು ಕಟ್ಟುವ ಅವಕಾಶ ನೀಡಲಾಗುತ್ತದೆ. ನಿಮ್ಮ ಉದ್ದಿಮೆ ಬೆಳೆಸಲು ಅಗತ್ಯವಾದ ವೆಚ್ಚಕ್ಕೆ ಈ ಸಾಲವನ್ನು ಬಳಸಬಹುದು.
ಯಾವೆಲ್ಲ ವ್ಯವಹಾರಕ್ಕೆ ಸಾಲ ಸಿಗುತ್ತೆ?
- ಆಹಾರ ಉತ್ಪನ್ನಗಳ ತಯಾರಿ
- ಆಟೋ ರಿಕ್ಷಾ
- ಸಣ್ಣ ಸರಕುಗಳ ಸಾಗಾಟ ವಾಹನ
- ತ್ರಿಚಕ್ರ ವಾಹನ
- ಇ-ರಿಕ್ಷಾ, ಕಾರು, ಟ್ಯಾಕ್ಸಿ ಖರೀದಿ
- ಸೆಲೂನ್ ಶಾಪ್, ಬ್ಯೂಟಿಪಾರ್ಲರ್
- ವ್ಯಾಯಾಮ ಶಾಲೆ (ಜಿಮ್)
- ದಿನಸಿ ಅಂಗಡಿ
- ಹೊಲಿಗೆ ಅಂಗಡಿ
- ಡಿ.ಟಿ.ಪಿ., ಝರಾಕ್ಸ್ ಸೆಂಟರ್
- ಕೊರಿಯರ್ ಏಜೆಂಟ್ಸ್
- ಆಹಾರ ಮಳಿಗೆಗಳು
- ಕೈಮಗ್ಗ ತಯಾರಿಕೆ
- ಉಡುಪು ತಯಾರಿ ಘಟಕ ನಿರ್ಮಾಣ
ಹೀಗೆ ಆದಾಯ ತರಬಲ್ಲ ಬಹುತೇಕ ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆಗಳಿಗೆ ಮುದ್ರಾ ಯೋಜನೆಯಡಿ ಸಾಲ ಪಡೆಯಬಹುದು. ಈ ಸಾಲ ಪಡೆಯಲು ಒಂದೇ ಸ್ಥಳದಲ್ಲಿ ಕನಿಷ್ಠ ಎರಡು ವರ್ಷವಾದರೂ ನೆಲಸಿರಬೇಕು.
ಮುದ್ರಾ ಯೋಜನೆ ವಿಧಗಳು ಮತ್ತು ಸಾಲ ಮಿತಿ
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಶಿಶು ಸಾಲ (Mudra Shishu Loan), ಕಿಶೋರ ಸಾಲ ಹಾಗೂ ತರುಣ್ ಸಾಲ ಎಂದು ಮೂರು ವಿಭಾಗಗಳಿದ್ದು; ಈ ಪೈಕಿ ತರುಣ್ ಸಾಲದ ಮಿತಿಯನ್ನು ಇಂದು ಮಂಡನೆಯಾದ ಪ್ರಸಕ್ತ 2024ನೇ ಸಾಲಿನ ಕೇಂದ್ರ ಬಜೆಟ್’ನಲ್ಲಿ ದುಪ್ಪಟ್ಟು ಮಾಡಲಾಗಿದೆ.
ಶಿಶು ಸಾಲದ ಮಿತಿ 50,000 ರೂಪಾಯಿ, ಕಿಶೋರ ಸಾಲದ (Mudra Kishore Loan) ಮಿತಿ 50,000 ದಿಂದ 5 ಲಕ್ಷ ರೂಪಾಯಿ ವರೆಗೆ ಇದೆ. ಇಷ್ಟು ದಿನಗಳಿಂದ ತರುಣ್ ಯೋಜನೆ ಸಾಲ (Mudra Tarun Loan) ಮಿತಿಯು 5 ಲಕ್ಷ ದಿಂದ 10 ಲಕ್ಷ ರೂಪಾಯಿ ಇತ್ತು. ಈ ವರ್ಷದ ಕೇಂದ್ರ ಬಜೆಟ್ ಮಂಡನೆಯ ನಂತರ ಈ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಸಾಲ ಪಡೆಯಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಖಾಯಂ ವಿಳಾಸ ಪುರಾವೆ
- ವ್ಯಾಪಾರ ಸ್ಥಳ ವಿಳಾಸ
- ಮಾಲೀಕತ್ವದ ಪುರಾವೆ
- 3 ವರ್ಷದ ಬ್ಯಾಂಕ್ ಬ್ಯಾಲೆನ್ಸ್ ಶೀಟ್
- ಆದಾಯ ತೆರಿಗೆ ರಿಟರ್ನ್ಸ್
- ಸ್ವಯಂ ಮೌಲ್ಯಮಾಪನ ರಿಟರ್ನ್ಸ್
- ಪಾಸ್ಪೋರ್ಟ್ ಗಾತ್ರದ ಫೋಟೋ
ಮೇಲಾಧಾರ ರಹಿತ ಸರಳ ಬಡ್ಡಿ ಸಾಲ
ಮುದ್ರಾ ಯೋಜನೆಯಡಿ ಸಿಗುವ ಸಾಲವು ಜಾಮೀನು ರಹಿತ ಸಾಲವಾಗಿದ್ದವು ಹೆಚ್ಚಿನ ಮೇಲಾಧಾರಗಳು ಇರುವುದಿಲ್ಲ. ಆದರೆ, ಇದು ಬಡ್ಡಿರಹಿತ ಸಾಲವಲ್ಲ. ಬಡ್ಡಿ ದರವು ಅರ್ಜಿದಾರರ ಬ್ಯಾಂಕ್ ವ್ಯವಹಾರ, ಕ್ರೆಡಿಟ್ ಸ್ಕೋರ್ಗಳ ಮೇಲೆ ಅವಲಂಬಿತವಾಗಿರುತ್ತದೆ. ಮುದ್ರಾ ಯೋಜನೆ ಕುರಿತು ಹೆಚ್ಚಿನ ಮಾಹಿತಿಗೆ ಸ್ಥಳೀಯ ಬ್ಯಾಂಕ್ಗಳನ್ನು ಸಂಪರ್ಕಿಸಬಹುದು.
ಮುದ್ರಾ ಯೋಜನೆಯ ಕುರಿತ ಹೆಚ್ಚಿನ ಮಾಹಿತಿಗೆ https://www.mudra.org.in/ ವೆಬ್ಸೈಟ್’ಗೆ ಭೇಟಿ ನೀಡಿ…
ಅರ್ಜಿ ಸಲ್ಲಿಕೆ ಲಿಂಕ್ : Apply Now