ರಾಜ್ಯದಲ್ಲಿ ಪಡಿತರ ಚೀಟಿಯ ಅರ್ಹತಾ ಮಾನದಂಡಗಳನ್ನು ಉಲ್ಲಂಘಿಸಿ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ರೇಷನ್ ಕಾರ್ಡ್ ಪಡೆದಿದ್ದ 91,000ಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್’ಗಳನ್ನು (BPL Card) ರದ್ದುಪಡಿಸಲಾಗಿ ಎಂದು ಆಹಾರ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ನಕಲಿ ದಾಖಲಾತಿಗಳೊಂದಿಗೆ ಪಡಿತರ ಚೀಟಿ ಪಡೆದವರನ್ನು ಗುರುತಿಸಿದ ಆಹಾರ ಇಲಾಖೆಯು 2023-24ರಲ್ಲಿ 74,342 ಹಾಗೂ 2024-25ರಲ್ಲಿ 16,719 ಚೀಟಿ ಸೇರಿ ಒಟ್ಟು 91,061 ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿದೆ.
ಈ ಜಿಲ್ಲೆಗಳಲ್ಲಿ ಅತೀ ಹೆಚ್ಚು ಕಾರ್ಡ್ ರದ್ದು
ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 1,3254 ಬಿಪಿಎಲ್ ಕಾರ್ಡುಗಳು ರದ್ದಾಗಿವೆ. ಎರಡನೇ ಸ್ಥಾನದಲ್ಲಿರುವ ರಾಜಧಾನಿ ಬೆಂಗಳೂರಿನಲ್ಲಿ 7,631 ಕಾರ್ಡುಗಳನ್ನು ರದ್ದುಪಡಿಸಲಾಗಿದೆ.
ಅದೇ ರೀತಿ ಮೈಸೂರು ಜಿಲ್ಲೆಯಲ್ಲಿ 6.095, ತುಮಕೂರು ಜಿಲ್ಲೆಯಲ್ಲಿ 5,222 ಹಾಗೂ ಧಾರವಾಡ ಜಿಲ್ಲೆಯಲ್ಲಿ 3,722 ಬಿಪಿಎಲ್ ಕಾರ್ಡುಗಳು ರದ್ದಾಗಿವೆ.
ಯಾವ್ಯಾವ ಕಾರ್ಡ್ ರದ್ದು?
- ಆದಾಯ ತೆರಿಗೆ ಪಾವತಿದಾರರು
- ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚಿರುವವರು
- ಸರ್ಕಾರಿ ನೌಕರರು
- ಮೃತ ಫಲಾನುಭವಿಗಳು
- ಆರು ತಿಂಗಳಿAದ ಪಡಿತರ ಪಡೆಯದ ಕಾರ್ಡ್
ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ಮೊಬೈಲ್’ನಲ್ಲಿಯೇ ನೋಡಿ…
ಮೊಬೈಲ್’ನಲ್ಲಿಯೇ ರದ್ದುಗೊಳಿಸಲಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಫಲಾನುಭವಿಗಳ ಹೆಸರುಗಳನ್ನು (Show cancelled/suspended list) ಚೆಕ್ ಮಾಡಬಹುದಾಗಿದೆ. ಅದಕ್ಕಾಗಿ ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ…
https://ahara.kar.nic.in/Home/EServices
ಆಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಇ-ಸರ್ವಿಸ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಬಲಗಡೆ ಕೆಲವು ಆಯ್ಕೆಗಳು ಕಾಣುತ್ತವೆ. ಅಲ್ಲಿ ಹಲವು ಆಯ್ಕೆಗಳು ಕಾಣಿಸುತ್ತವೆ.
ಅವುಗಳ ಪೈಕಿ ಎರಡನೇ ಆಯ್ಕೆ e-Ration card ಮೇಲೆ ಒತ್ತಿದರೆ ಮತ್ತಷ್ಟು ಆಯ್ಕೆಗಳು ತೆರೆದುಕೊಳ್ಳುತ್ತವೆ. ಅವುಗಳಲ್ಲಿ 6ನೇ ಆಯ್ಕೆ Show cancelled/suspended list ಮೇಲೆ ಒತ್ತಿ. ಪುನಃ ಮತ್ತೊಂದು ಪುಟ ಒಪನ್ ಆಗುತ್ತದೆ.
ಅಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು ಆಯ್ಕೆ ಮಾಡಿಕೊಳ್ಳಬೇಕು. ನಂತರ ‘ಗೊ’ ಮೇಲೆ ಒತ್ತಬೇಕು. ಆಗ ಯಾವೆಲ್ಲ ಹೆಸರನ್ನು ತೆಗೆಯಲಾಗಿದೆ? ಯಾವಾಗ ತೆಗೆಯಲಾಗಿದೆ? ಯಾವ ಕಾರಣಕ್ಕಾಗಿ ರದ್ದುಗೊಳಿಸಲಾಗಿದೆ ಎಂಬ ಕಾರಣವುಳ್ಳ ಸಂಪೂರ್ಣ ವಿವರ ಈ ಕೆಳಗಿನಂತೆ ಲಭ್ಯವಾಗುತ್ತದೆ.