Indian Army Group C Group Posts Recruitment 2025 : ಭಾರತೀಯ ಸೇನೆಯು ಗ್ರೂಪ್ ‘ಸಿ’ ವೃಂದದ ವಿವಿಧ ಹುದ್ದೆಗಳ ಭರ್ತಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಸೇರಿದಂತೆ ದೇಶದಾದ್ಯಂತ ವಿವಿಧ ಸೇನಾ ಹೆಡ್ ಕ್ವಾರ್ಟರ್ಸ್ ಮೂಲಕ ನೇಮಕಾತಿ ನಡೆಯಲಿದ್ದು; ಆಸಕ್ತಿಯುಳ್ಳ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಹುದ್ದೆಗಳ ವಿವರ
ಎಲೆಕ್ನಿಷಿಯನ್, ಟೆಲಿಕಾಂ ಮೆಕಾನಿಕ್, ಆರ್ಮಮೆಂಟ್ ಮೆಕಾನಿಕ್, ಫಾರ್ಮಸಿಸ್ಟ್, ಫೈರ್‌ಮನ್, ಫೈರ್ ಎಂಜಿನ್ ಡೈವರ್, ಲೋವರ್ ಡಿವಿಷನ್ ಕ್ಲರ್ಕ್, ಕುಕ್, ಟ್ರೇಡ್ಸ್ಮನ್. ಸ್ಟೋರ್ ಕೀಪರ್, ವೆಹಿಕಲ್ ಮೆಕಾನಿಕಲ್ ಸೇರಿದಂತೆ 625 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಬೆಂಗಳೂರಿನಲ್ಲಿ ವಿವಿಧ 49 ಹುದ್ದೆಗಳು ಖಾಲಿ ಇವೆ.
ಶೈಕ್ಷಣಿಕ ಅರ್ಹತೆಗಳೇನು?
ಫಾರ್ಮಸಿಸ್ಟ್, ಸ್ಟೋರ್‌ಕೀಪರ್, ಎಲೆಕ್ನಿಷಿಯನ್, ವೆಹಿಕಲ್ ಮೆಕಾನಿಕ್, ಆರ್ಮಮೆಂಟ್ ಮೆಕಾನಿಕ್, ಸ್ಪೆನೋಗ್ರಾಫರ್, ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಕೆಲವು ಹುದ್ದೆಗಳಿಗೆ ಪಿಯುಸಿ ಜೊತೆಗೆ ಆಯಾ ವಿಭಾಗಕ್ಕೆ ಸಂಬ೦ಧಿಸಿದ ಕೋರ್ಸ್’ಗಳನ್ನೂ ಪೂರ್ಣಗೊಳಿಸಬೇಕಾಗುತ್ತದೆ. ಉಳಿದ ಎಲ್ಲಾ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯುಳ್ಳವರು ಪ್ರಯತ್ನಿಸಬಹುದಾಗಿದೆ.
ವಯೋಮಿತಿ ವಿವರ
ಫೈರ್ ಎಂಜಿನಿಯರ್ ಹುದ್ದೆಗೆ 18ರಿಂದ 30 ವರ್ಷದೊಳಗಿನವರು, ಉಳಿದೆಲ್ಲಾ ಹುದ್ದೆಗಳಿಗೆ 18ರಿಂದ 25 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ನಿಯಮನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮೂಲಕ ಆಯ್ಕೆ ನಡೆಯುತ್ತದೆ. ಲಿಖಿತ ಪರೀಕ್ಷೆಗೆ ವಸ್ತುನಿಷ್ಠ ಮಾದರಿಯ 150 ಅಂಕಗಳ ಲಿಖಿತ ಪರೀಕ್ಷೆ ಅಭ್ಯರ್ಥಿಗಳು ಬರೆಯಬೇಕು. ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್, ಜನರಲ್ ಅವೇರ್ನೆಸ್, ಜನರಲ್ ಇಂಗ್ಲಿಷ್, ನ್ಯೂಮರಿಕಲ್ ಅಪ್ಟಿಟ್ಯೂಡ್ ಮತ್ತು ಸಂಬAಧಿಸಿದ ನಿರ್ದಿಷ್ಟ ಟ್ರೇಡ್‌ಗೆ ಸಂಬ೦ಧಿಸಿದ೦ತೆ ಪ್ರಶ್ನೆಗಳಿರುತ್ತವೆ. ತಪ್ಪು ಉತ್ತರಗಳಿಗೆ 0.25 ನೆಗೆಟಿವ್ ಅಂಕಗಳಿರುತ್ತವೆ.
ಅರ್ಜಿ ಸಲ್ಲಿಕೆ ಹೇಗೆ?
ಭಾರತೀಯ ಸೇನೆಯು ಗ್ರೂಪ್ ‘ಸಿ’ ವೃಂದದ ವಿವಿಧ ಹುದ್ದೆಗಳಿಗೆ ಕರ್ನಾಟಕದ ಅಭ್ಯರ್ಥಿಗಳು ಈ ಕೆಳಕಂಡ ಅಂಚೆ ವಿಳಾಸಕ್ಕೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ:
ಅರ್ಜಿ ಸಲ್ಲಿಕೆ ವಿಳಾಸ : Commandant, 515 Army Base Workshop, Ulsoor, Bangaluru, Karnataka- 560008
ಅರ್ಜಿ ಸಲ್ಲಿಕೆ ಕೊನೇ ದಿನ : 09-01-2025
ಅಧಿಸೂಚನೆ : Download
ವಿವರಗಳಿಗೆ: www.joinindianarmy.nic.in