BSNL 147 Rupees Popular Recharge plan : ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (Bharat Sanchar Nigam Limited) ಟೆಲಿಕಾಂ ಸಂಸ್ಥೆ ಚೇರಿಸಿಕೊಳ್ಳುತ್ತಿದ್ದಂತೆಯೇ ಖಾಸಗಿ ಟೆಲಿಕಾಂ ಕಂಪನಿಗಳ (Private telecom company) ನಡುವೆ ಬೆಲೆ ಪೈಪೋಟಿ ಶುರುವಾಗಿದೆ. ಕಡಿಮೆ ಬೆಲೆಯ, ಹೆಚ್ಚು ವ್ಯಾಲಿಡಿಟಿ (More validity) ಹೊಂದಿರುವ ರೀಚಾರ್ಜ್ ಯೋಜನೆಗಳು (Recharge plans) ಚಾಲ್ತಿಗೆ ಬರುತ್ತಿವೆ.
ಇಂತಹ ವಿಶೇಷ ರೀಚಾರ್ಜ್ ಯೋಜನೆಗಳಲ್ಲಿ BSNL ಹೊರ ತಂದಿರುವ 147 ರೂಪಾಯಿಯ ಪ್ರಿಪೇಯ್ಡ್ ಯೋಜನೆ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. 200 ರೂಪಾಯಿಗಿಂತ ಕಡಿಮೆ ಬೆಲೆಯ ಈ ಯೋಜನೆಯಲ್ಲಿ ಗ್ರಾಹಕರಿಗೆ ಹಲವು ಪ್ರಯೋಜನಗಳಿಗೆ ಸಿಗುತ್ತವೆ.
147 ರೂಪಾಯಿ ಬಿಎಸ್ಎನ್ಎಲ್ ಯೋಜನೆ
ಕೇವಲ 147 ರೂಪಾಯಿಯ ಈ ಯೋಜನೆಯಡಿ ರೀಚಾರ್ಜ್ ಮಾಡಿದರೆ ಭರ್ತಿ 30 ದಿನಗಳ ಕಾಲ ಉಚಿತ ಕರೆಯನ್ನು ಆನಂದಿಸಬಹುದು. Jio, Airtel, Vodafone, Idea ಕಂಪನಿಗಳಲ್ಲಿ ಈ ರೀತಿಯ ಪ್ಲಾನ್ ಇಲ್ಲವಾದ್ದರಿಂದ ಸಹಜವಾಗಿಯೇ ಬಿಎಸ್ಎನ್ಎಲ್ನ ಈ ಪ್ಲಾನ್ ಜನರ ಮನಗೆದ್ದಿದೆ.
ದಿನಕ್ಕೆ ಬರೀ 4.90 ರೂಪಾಯಿ ವೆಚ್ಚದೊಂದಿಗೆ 147 ರೂಪಾಯಿಯ ಈ ಪ್ಲಾನ್’ನಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳು ಉಚಿತವಾಗಿ ಸಿಗುತ್ತವೆ. ಮಾತ್ರವಲ್ಲದೆ, 100 ಎಸ್ಎಮ್ಎಸ್ ಕೂಡ ಉಚಿತ. ತಿಂಗಳಿಗೆ ಹೆಚ್ಚುವರಿಯಾಗಿ 10ಜಿಬಿ ಡೇಟಾ ಕೂಡ ಸಿಗುತ್ತದೆ.
ಜೊತೆಗೆ ಈ ಯೋಜನೆಯಲ್ಲಿ ಬಿಎಸ್ಎನ್ಎಲ್ ಟ್ಯೂನ್ (BSNL Tune) ಒಳಗೊಂಡಿರುವುದರಿ೦ದ ಬಳಕೆದಾರರು ತಮ್ಮ ಕಾಲರ್ ಟ್ಯೂನ್ ಅನ್ನು ಹೆಚ್ಚುವರಿ ವೆಚ್ಚವಿಲ್ಲದೆ ಆನಂದಿಸಬಹುದು. 147 ರೂಪಾಯಿಗೆ ಒಂದು ತಿಂಗಳ ಸಿಂಧುತ್ವದಲ್ಲಿ ಇಷ್ಟೆಲ್ಲ ಪ್ರಯೋಜನಗಳು ಸಿಗುತ್ತವೆ.
ವ್ಯಾಲಿಡಿಟಿ ಕ್ಯಾರಿ ಫಾರ್ವರ್ಡ್ ಆಯ್ಕೆ Validity carry forward
ವ್ಯಾಲಿಡಿಟಿ ಕ್ಯಾರಿ ಫಾರ್ವರ್ಡ್ ಆಯ್ಕೆ ಹೊಂದಿರುವುದು ಈ ಯೋಜನೆಯ ಮತ್ತೊಂದು ವೈಶಿಷ್ಟ್ಯವಾಗಿದೆ. ಅಂದರೆ, ಮೊದಲ 30 ದಿನಗಳ ನಂತರ ನೀವು ಈ ಯೋಜನೆಯನ್ನು ನವೀಕರಿಸಲು ನಿರ್ಧರಿಸಿದರೆ, ಯಾವುದೇ ಬಳಕೆಯಾಗದ ಮಾನ್ಯತೆಯನ್ನು ನಿಮ್ಮ ಹೊಸ ಯೋಜನೆಗೆ ಸೇರಿಸಬಹುದು.
ಇದರರ್ಥ ನಿಮ್ಮ ಹಣಕ್ಕೆ ಇನ್ನೂ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ. ಈ ವೈಶಿಷ್ಟ್ಯವು ಕಡಿಮೆ ಬೆಲೆಯಲ್ಲಿ ಹೆಚ್ಚು ವ್ಯಾಲಿಡಿಟಿ, ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವವರಿಗೆ 147 ರೂಪಾಯಿಯ ಈ ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ.