Krishi Totagarike Mela 2024 Bagalakot Mudagere : ಇದೇ ಡಿಸೆಂಬರ್ ತಿಂಗಳಲ್ಲಿ ಎರಡು ಕಡೆಗೆ ಕೃಷಿ ಮತ್ತು ತೋಟಗಾರಿಕೆ ಮೇಳಗಳು ನಡೆಯಲಿದ್ದು; ಈ ಮೇಳ ಪ್ರಮುಖ ಆಕರ್ಷಣೆಗಳೇನು? ಮೇಳದಲ್ಲಿ ಏನೆಲ್ಲ ಇರಲಿದೆ? ಈ ಕುರಿತ ವಿಶೇಷ ವರದಿ ಇಲ್ಲಿದೆ…
ಬಾಗಲಕೋಟೆ ತೋಟಗಾರಿಕೆ ಮೇಳ
ಇದೇ ಡಿಸೆಂಬರ್ 21, 22 ಮತ್ತು 23ರಂದು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (University of Horticultural Sciences Bagalkot) ಆವರಣದಲ್ಲಿ ಒಟ್ಟು ಮೂರು ದಿನಗಳ ಕಾಲ ‘ತೋಟಗಾರಿಕೆ ಮೇಳ – 2024’ (Horticulture Fair 2024) ನಡೆಯಲಿದೆ.
‘ಆರ್ಥಿಕತೆ ಮತ್ತು ಪೌಷ್ಟಿಕತೆಗಾಗಿ ತೋಟಗಾರಿಕೆ’ (Horticulture for Economy and Nutrition) ಎಂಬ ದ್ಯೇಯವಾಕ್ಯದೊಂದಿಗೆ ಆಯೋಜಿಸÀಲಾಗಿರಿ ಸದರಿ ಮೇಳದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ / ಪರಿಕರಗಳ ಪ್ರದರ್ಶನ, ತೋಟಗಾರಿಕೆಯಲ್ಲಿ ನಿಖರ ಬೇಸಾಯ, ತರಕಾರಿ ಮತ್ತು ಹೂ ಬೆಳಗಳ ಪ್ರಾತ್ಯಕ್ಷಿಕೆ, ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ, ಕೃಷಿ ಬ್ಯಾಂಕಿAಗ್ ವ್ಯವಹಾರಗಳ ಮಾಹಿತಿ, ಕೃಷಿಯಲ್ಲಿ ಡಿಜಿಟಲ್ ಆ್ಯಪ್‌ಗಳ ಬಳಕೆ ಈ ವರ್ಷದ ತೋಟಗಾರಿಕೆ ಮೇಳದ ವೈಶಿಷ್ಟö್ಯತೆಯಾಗಿವೆ.
ಮೂಡಗೆರೆ ಕೃಷಿ-ತೋಟಗಾರಿಕೆ ಮೇಳ
ಇನ್ನು ಇದೇ ಡಿಸೆಂಬರ್ 27 ಮತ್ತು 28ರಂದು ಚಿಕ್ಕಮಗಳೂರು ಜಿಲ್ಲೆ ಮೂಡಗೆರೆಯ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ‘ಕೃಷಿ ಮತ್ತು ತೋಟಗಾರಿಕೆ ಮೇಳ 2024’ ನಡೆಯಲಿದೆ. ‘ಸುಸ್ಥಿರ ಕೃಷಿಗೆ ವಿನೂತನ ತಂತ್ರಜ್ಞಾನಗಳು’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಈ ಮೇಳವು ರೈತರಿಗೆ ಹಲವು ಆಕರ್ಷಣೆಗಳ ಕೇಂದ್ರವಾಗಿದೆ.
ಈ ಮೇಳದಲ್ಲಿ ಕೃಷಿ-ತೋಟಗಾರಿಕೆ ತಂತ್ರಜ್ಞಾನಗಳು, ವೈಜ್ಞಾನಿಕ ಜೇನು ಸಾಕಾಣಿಕೆ ಮತ್ತು ಕೀಟ ಪ್ರಪಂಚ, ತಾರಸಿ ಕೈತೋಟ, ಎರೆಹುಳು ಗೊಬ್ಬರ ತಯಾರಿಕೆ, ಅಡಿಕೆ ಸಿಪ್ಪೆ ಗೊಬ್ಬರ ತಯಾರಿಕೆ, ವೈಜ್ಞಾನಿಕ ಮೀನು ಕೃಷಿ ಸೇರಿದಂತೆ ವಿವಿಧ ಕೃಷಿ ಸಂಬ೦ಧಿತ ಇಲಾಖೆಗಳು ಹಾಗೂ ಕೃಷಿ ಪರಿಕರಗಳ ಸಂಸ್ಥೆಗಳಿ೦ದ ಬೀಜ, ಗೊಬ್ಬರ, ಸಸ್ಯ ಸಂರಕ್ಷಣೆ ಮತ್ತು ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನ ನಡೆಯಲಿದೆ.
ಆಸಕ್ತ ರೈತರು ಡಿಸೆಂಬರ್ 21ರಿಂದ 23ರ ವರೆಗೆ ಬಾಗಲಕೋಟೆಯಲ್ಲಿ ನಡೆಯಲಿರುವ ‘ತೋಟಗಾರಿಕೆ ಮೇಳ 2024’ ಹಾಗೂ ಡಿಸೆಂರ್ 27-28ರಂದು ಮೂಡಗೆರೆಯಲ್ಲಿ ನಡೆಯುವ ‘ಕೃಷಿ ಮತ್ತು ತೋಟಗಾರಿಕೆ ಮೇಳ 2024’ರಲ್ಲಿ ಭಾಗಿಯಾಗುವ ಮೂಲಕ ಕೃಷಿ, ತೋಟಗಾರಿಕೆ, ಯಂತ್ರೋಪಕರಣ, ಆಧುನಿಕ ತಂತ್ರಜ್ಞಾನ ಕುರಿತ ಮಾಹಿತಿ ಪಡೆದುಕೊಳ್ಳಬಹುದಾಗಿದೆ.