FinanceSchemes

ಮಹಿಳೆಯರ ಹೆಸರಿನಲ್ಲಿ ಸಾಲ ಪಡೆದರೆ ಸಿಗುತ್ತೆ ಭರ್ಜರಿ ಪ್ರಯೋಜನ | ಗೃಹ ಸಾಲದಲ್ಲಿ ಮಹಿಳೆಯರಿಗೆ ಸಿಗುವ ಪ್ರಯೋಜನಳು ಇಲ್ಲಿವೆ… Loan benefits for Womens

WhatsApp Group Join Now
Telegram Group Join Now

Loan benefits for Womens : ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಪುರುಷರಿಗಿಂತ ಮಹಿಳೆಯರಿಗಾಗಿಯೇ ಹಲವು ವಿಶೇಷ ಸೌಲಭ್ಯಗಳಿವೆ. ಅದರಲ್ಲೂ ಸಾಲ ಯೋಜನೆಯಲ್ಲಿ ಕಡಿಮೆ ಬಡ್ಡಿ ದರ, ಬಡ್ಡಿ ದರದಲ್ಲಿ ಸಬ್ಸಿಡಿ, ಹೆಚ್ಚಿನ ಮರುಪಾವತಿ ಅವಧಿ ಸೇರಿದಂತೆ ವಿವಿಧ ವಿಶೇಷ ಸೌಲಭ್ಯಗಳಿವೆ.

ಇಂದಿನ ಈ ದುಬಾರಿ ದುನಿಯಾದಲ್ಲಿ ಹೊಸ ಮನೆ ಖರೀದಿಗೆ (Real estate) ಲಕ್ಷಗಟ್ಟಲೆ ಹಣ ಬೇಕಾಗುತ್ತದೆ. ಈ ಹಣದ ಅಗತ್ಯಕ್ಕಾಗಿ ಬಹಳಷ್ಟು ಜನ ಹೋಂ ಲೋನ್ ಪಡೆಯುತ್ತಾರೆ. ಮಹಿಳೆಯರ ಹೆಸರಿನಲ್ಲಿ ಗೃಹ ಸಾಲವನ್ನು ಪಡೆಯುವುದರ ಲಾಭಗಳೇನು? ಯಾವ್ಯಾವ ಬ್ಯಾಂಕುಗಳು ಎಷ್ಟೆಷ್ಟು ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತವೆ? ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ…

ಮಹಿಳೆಯರಿಗೆ ಸಿಗುತ್ತೆ ಕಡಿಮೆ ಬಡ್ಡಿ ಸಾಲ

ಹೊಸ ಮನೆ ಖರೀದಿ (New Home Purchase), ಮನೆ ನಿರ್ಮಾಣಕ್ಕೆ ಗೃಹ ಸಾಲ ಪಡೆಯಲು ಮಹಿಳೆಯರಿಗಾಗಿಯೇ ಹಲವಾರು ಬ್ಯಾಂಕುಗಳು ಪುರುಷರಿಗಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತವೆ.

ಹಲವಾರು ಬ್ಯಾಂಕುಗಳಲ್ಲಿ ಮಹಿಳೆಯರಿಗೆ ಬಡ್ಡಿ ದರದಲ್ಲಿ ಪುರುಷರಿಗಿಂತ 5 ರಿಂದ 10 ಮೂಲಾಂಶದಷ್ಟು ರಿಯಾಯಿತಿ ನೀಡುತ್ತವೆ. ಇದರ ಅರ್ಥ ಮಹಿಳೆಯರಿಗೆ ಸಾಮಾನ್ಯ ಬಡ್ಡಿ ದರಕ್ಕಿಂತ 0.05 ರಿಂದ 0.10 ರಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.

ಮಹಿಳೆಯರಿಗೆ ಸಾಲದ ಪ್ರಯೋಜನೆಗಳೇನು?

ಮಹಿಳೆಯರ ಹೆಸರಿನಲ್ಲಿ ಸಾಲ ಪಡೆಯುವುದರಿಂದ ಕಡಿಮೆ ಬಡ್ಡಿ ದರ ದೊರೆಯುವುದರ ಜೊತೆಗೆ ಇನ್ನು ಹಲವಾರು ಪ್ರಯೋಜನಗಳಿವೆ.

  • ಕಡಿಮೆ ಬಡ್ಡಿ ದರ
  • ಬಡ್ಡಿ ದರದಲ್ಲಿ ಸಬ್ಸಿಡಿ
  • ಹೆಚ್ಚಿನ ಮರುಪಾವತಿ ಅವಧಿ
  • ಕಡಿಮೆ ದರದಲ್ಲಿ ಸ್ಟ್ಯಾಂಪ್ ಡ್ಯೂಟಿ

ಇದನ್ನು ಹೊರತುಪಡಿಸಿ ಮಹಿಳೆಯರಿಗಾಗಿಯೇ ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ, ಪ್ರತಿಯೊಬ್ಬ ಮಹಿಳೆಯರ ಸ್ವಂತ ಮನೆಯನ್ನು ಹೊಂದಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯು (PM- Avas Yojane) ಕೂಡ ಜಾರಿಗೆಯಲ್ಲಿದೆ. ಪ್ರತಿಯೊಬ್ಬ ಮಹಿಳೆಯರು ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬಹುದು.

ಮಹಿಳೆಯರಿಗೆ ಯಾವ್ಯಾವ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿ ದರದಲ್ಲಿ ಗೃಹ ಸಾಲ ದೊರೆಯುತ್ತದೆ?

ಮಹಿಳೆಯರಿಗೆ ಗೃಹ ಸಾಲದಲ್ಲಿ ಬಡ್ಡಿದರ ರಿಯಾಯ್ತಿ ಬ್ಯಾಂಕಿನಿ೦ದ ಬ್ಯಾಂಕಿಗೆ ಭಿನ್ನವಾಗಿರುತ್ತದೆ. ಗೃಹ ಸಾಲದ ಮೇಲಿನ ಬಡ್ಡಿ ದರವು ಬ್ಯಾಂಕಿನಿ೦ದ ಬ್ಯಾಂಕಿಗೆ ಹೊರತುಪಡಿಸಿ ಇದು ವೈಯಕ್ತಿಕ ಕ್ರೆಡಿಟ್ ಸ್ಕೋರ್ (Cibil Score) ಮೇಲೆಯೂ ಕೂಡ ಅವಲಂಬಿತವಾಗಿರುತ್ತದೆ.

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (State Bank of India) ಸಾಲ ತೆಗೆದುಕೊಂಡರೆ ಪುರುಷರಿಗೆ 9.15 ರಷ್ಟು ಬಡ್ಡಿ ದರದಲ್ಲಿ (Interest Rate) ಸಾಲ ದೊರೆಯುತ್ತದೆ. ಅದೇ ಮಹಿಳೆಯರಿಗೆ 9.10 ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ. ಇದರ ವ್ಯತ್ಯಾಸ ಕೇವಲ 0.05 ರಷ್ಟು ಮಾತ್ರ, ಆದರೆ ಧೀರ್ಘಾವಧಿಯಲ್ಲಿ ಇದು ನಿಮಗೆ ಹೆಚ್ಚಿನ ಹಣವನ್ನು ಉಳಿತಾಯ ಮಾಡಲು ಸಹಾಯವಾಗುತ್ತದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (Central Bank of India) ಮಹಿಳೆಯರಿಗಾಗಿ ಗೃಹ ಸಾಲವು 8.35 ರಿಂದ 9.25 ಬಡ್ಡಿ ದರದಲ್ಲಿ ದೊರೆಯುತ್ತದೆ. ಆದರೆ, ಪುರುಷರಿಗೆ ಇದು 8.5 ರಿಂದ 9.5 ರಷ್ಟು ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ.

ಗೃಹ ಸಾಲ ಪಡೆಯುವ ಮುಂಚೆ ವಿವಿಧ ಬ್ಯಾಂಕುಗಳ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ತಿಳಿದುಕೊಂಡು, ನಂತರದಲ್ಲಿ ಸಂಬAಧಪಟ್ಟ ಬ್ಯಾಂಕಿಗೆ ಭೇಟಿ ನೀಡಿ ಅಗತ್ಯವಿರುವ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಗೃಹ ಸಾಲ ಪಡೆಯಬಹುದು.

WhatsApp Group Join Now
Telegram Group Join Now

Related Posts