NIACL Recruitment 2025 : ಭಾರತ ಸರ್ಕಾರದ ಧೀನದಲ್ಲಿರುವ ‘ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್’ನಲ್ಲಿ (New India Assurance Co. Ltd.) ಖಾಲಿ ಇರುವ 500 ಅಸಿಸ್ಟೆಂಟ್ ಹುದ್ದೆಗಳ (Assistant Posts) ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು ಹುದ್ದೆಗಳ ಪೈಕಿ 50 ಹುದ್ದೆಗಳನ್ನು ಕರ್ನಾಟಕ ರಾಜ್ಯಕ್ಕೆ ಮೀಸಲಿಡಲಾಗಿದೆ.
ಶೈಕ್ಷಣಿಕ ಅರ್ಹತೆಗಳೇನು?
ಕಲೆ, ವಾಣಿಜ್ಯ, ವಿಜ್ಞಾನ, ಎಂಜಿನಿಯರಿ೦ಗ್ ಸೇರಿದಂತೆ ಯಾವುದೇ ವಿಷಯದಲ್ಲಿ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿದೆ. ಇದರೊಂದಿಗೆ ಅಭ್ಯರ್ಥಿಗಳು ಎಸ್‌ಎಸ್‌ಸಿ/ ಎಚ್.ಎಸ್‌ಸಿ/ ಇಂಟರ್‌ಮೀಡಿಯೇಟ್/ ಪದವಿಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು. 2024ರ ಡಿಸೆಂಬರ್ 1ರೊಳಗೆ ನಿಗದಿತ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳಿಗೆ ಆಯಾ ರಾಜ್ಯಗಳ ಸ್ಥಳೀಯ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.
ಇದನ್ನೂ ಓದಿ: ಪ್ಯಾನ್ ಕಾರ್ಡ್’ದಾರರಿಗೆ ಸೈಬರ್ ಪೊಲೀಸರ ಎಚ್ಚರಿಕೆ ಸಂದೇಶ New PAN Card Scam Cyber Police Alert
ವಯೋಮಿತಿ ಮತ್ತು ವೇತನ ವಿವರ
ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ಮತ್ತು ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ. ಅಂದರೆ, ಅಭ್ಯರ್ಥಿಗಳು 1994ರ ಡಿಸೆಂಬರ್ 2 ಮತ್ತು 2003ರ ಡಿಸೆಂಬರ್ 1ರ ನಡುವೆ ಜನಿಸಿರಬೇಕು. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಇನ್ನು ‘ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್’ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ 22,405 ರಿಂದ 62,265 ರೂ. ವರೆಗೂ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ. ಜೊತೆಗೆ ಇತರ ಸೌಲಭ್ಯಗಳು ಅನ್ವಯವಾಗಲಿವೆ.
ಅರ್ಜಿ ಶುಲ್ಕವೆಷ್ಟು?
ಎಸ್‌ಸಿ/ಎಸ್‌ಟಿ, ಆರ್ಥಿಕ ದುರ್ಬಲ ವರ್ಗ ಮತ್ತು ವಿಶೇಷ ಚೇತನ ಅಭ್ಯರ್ಥಿಗಳು ಜಿಎಸ್‌ಟಿ ಮತ್ತು ಇಂಟಿಮೇಷನ್ ಫೀ ಸೇರಿ 100 ರೂ. ಪಾವತಿಸಬೇಕು. ಉಳಿದ ಎಲ್ಲಾ ವರ್ಗದವರು 850 ರೂ. ಶುಲ್ಕ ಪಾವತಿಸಲು ಸೂಚಿಸಲಾಗಿದೆ.
ಪರೀಕ್ಷಾ ಪೂರ್ವ ತರಬೇತಿ
ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಗಳನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಬರೆಯಬಹುದಾಗಿದ್ದು; ಇವೆರಡು ಪರೀಕ್ಷೆಯಲ್ಲಿ ಅರ್ಹರಾದವರಿಗೆ ಭಾಷಾ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಎಸ್‌ಸಿ/ಎಸ್‌ಟಿ, ಒಬಿಸಿ, ವಿಶೇಷ ಚೇತನರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಬ್ಯಾಂಕ್ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಆನ್‌ಲೈನ್ ಮೂಲಕವೇ ತರಬೇತಿ ಕಾರ್ಯಕ್ರಮ ನಡೆಯುತ್ತದೆ. ಇದರ ಅಗತ್ಯವಿದ್ದರೆ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ನೀಡಿರುವ ಈ ಸಂಬAಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆನ್‌ಲೈನ್ ಮೂಲಕವೇ ಸಲ್ಲಿಸಬೇಕು.
ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು
ಬೆಳಗಾವಿ, ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ/ಧಾರವಾಡ, ಮಂಗಳೂರು, ಮೈಸೂರು ಮತ್ತು ಶಿವಮೊಗ್ಗ ಪರೀಕ್ಷಾ ಕೇಂದ್ರಗಳು ಇರಲಿದ್ದು; ಮುಖ್ಯ ಪರೀಕ್ಷೆಯನ್ನು ರಾಜಧಾನಿ ಬೆಂಗಳೂರು ನಡೆಸಲಾಗುತ್ತದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನ : ಜನವರಿ 1, 2025
- ಪೂರ್ವಭಾವಿ ಪರೀಕ್ಷೆ: ಜನವರಿ 27, 2025
- ಮುಖ್ಯ ಪರೀಕ್ಷೆ: ಮಾರ್ಚ್ 2, 2025
NIACL Recruitment 2025 : Important Links
ಅಧಿಸೂಚನೆ : Download
ಅರ್ಜಿ ಲಿಂಕ್ : Apply Now