SBI Probationary Officers Recruitment 2025 : ಈಚೆಗಷ್ಟೇ 13,735 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India -SBI) ಇದೀಗ ಪ್ರೊಬೇಷನರಿ ಆಫೀಸರ್ (Probationary Officers) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ ಒಟ್ಟು 600 ಹುದ್ದೆ ನೇಮಕಾತಿ ನಡೆಯಲಿದ್ದು; ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ ಮತ್ತು ಸಿಬಿಲ್ ಸ್ಕೋರ್
ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವೀಧರರಾಗಿರಬೇಕು. ಪದವಿ ವ್ಯಾಸಂಗ ಮಾಡುತ್ತಿರುವವರು 2025ರ ಏಪ್ರಿಲ್ 30ರೊಳಗೆ ಉತ್ತೀರ್ಣರಾಗಿರಬೇಕು. ವೈದ್ಯಕೀಯ, ಇಂಜಿನಿಯರಿ೦ಗ್ ಸಿಎ, ಸಿಎಸ್ ಮೊದಲಾದ ವೃತ್ತಿಪರ ಕೋರ್ಸ್ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಿಶೇವೆಂದರೆ ಈ ನೇಮಕಾತಿಗೆ ಸಿಬಿಲ್ ಸ್ಕೋರ್ ಕೂಡ ಮುಖ್ಯ ಅರ್ಹತೆಯಾಗಿದೆ. ಸುಸ್ತಿದಾರರಾಗಿರಬಾರದು. ನೇಮಕಾತಿ ದಿನಕ್ಕೂ ಮುನ್ನ ಸಾಲ ಮರುಪಾವತಿ ಪ್ರಮಾಣಪತ್ರ ಸಲ್ಲಿಕೆ ಅಗತ್ಯ. ಇಲ್ಲದಿದ್ದರೆ ನೇಮಕಾತಿಯನ್ನೇ ರದ್ದು ಮಾಡಲಾಗುತ್ತದೆ.
ವಯೋಮಿತಿ ಮತ್ತು ಒಬಿಸಿ ಮೀಸಲಾತಿ
ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 2024ರ ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ ಕನಿಷ್ಠ 21, ಗರಿಷ್ಠ 30 ವರ್ಷದೊಳಗಿರಬೇಕು. ಮೀಸಲಾತಿಯನ್ವಯ 3 ರಿಂದ 15 ವರ್ಷದವರೆಗೆ ವಿನಾಯ್ತಿ ಅನ್ವಯವಾಗಲಿದೆ.
ಒಬಿಸಿ ಮೀಸಲಿಗೆ ಏಪ್ರಿಲ್ 2024ರ ನಂತರ ಪಡೆದ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ ಸಂದರ್ಶನಕ್ಕೆ ಅರ್ಹರಾಗುವುದಿಲ್ಲ. ಅಂಗವಿಕಲ ಮೀಸಲು ಕೋರುವವರು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕಕ್ಕೆ ಮುನ್ನ ಪಡೆದ ಪ್ರಮಾಣಪತ್ರ ಹೊಂದಿರಬೇಕು.
18.67 ಲಕ್ಷ ರೂ. ವಾರ್ಷಿಕ ವೇತನ ವೇತನ
ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಹುದ್ದೆಗಳು ಅತ್ಯಾಕರ್ಷಕ ವೇತನದ ಹುದ್ದೆಗಳಾಗಿದ್ದು; ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂಬೈ ಕೇಂದ್ರವಾದಲ್ಲಿ ಆರಂಭಿಕ ವಾರ್ಷಿಕ ವೇತನ ಮೊತ್ತ 18.67 ಲಕ್ಷ ರೂ. ಆಗಿರಲಿದೆ. ಮೂಲವೇತನವೇ 48,480 ರೂ. ಆಗಿದ್ದು, ಇತರ ಭತ್ಯೆಗಳ ಸೇರಿ 85,920 ರೂ. ವರೆಗಿನ ವೇತನಶ್ರೇಣಿ ಇರಲಿದೆ. ಇತರ ಸೌಲಭ್ಯಗಳು ಅನ್ವಯಿಸಲಿವೆ.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಕಿರಿಯ ಸಹಾಯಕರು ಹುದ್ದೆಗಳಿಗೆ ಅರ್ಜಿ ಆಹ್ವಾನ DCC Bank Junior Assistant Recruitment 2025
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 750 ರೂ. ಮತ್ತು ಎಸ್‌ಸಿ, ಎಸ್‌ಟಿ, ವಿಸೇಷಚೇತನ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಈ ವರ್ಗದ ಅಭ್ಯರ್ಥಿಗಳು ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಪರೀಕ್ಷಾ ಕೇಂದ್ರ ಮತ್ತು ಪೂರ್ವಭಾವಿ ತರಬೇತಿ
ರಾಜ್ಯದ ಅಭ್ಯರ್ಥಿಗಳಿಗೆ ಬೆಳಗಾವಿ, ಬೆಂಗಳೂರು, ಧಾರವಾಡ-ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ. ಮುಖ್ಯ ಪರೀಕ್ಷೆಗೆ ಬೆಂಗಳೂರು ಮಾತ್ರ ಕೇಂದ್ರವಾಗಿದೆ.
ಪರೀಕ್ಷೆ ಸಿದ್ಧತೆಗಾಗಿ ಪೂರ್ವಭಾವಿ ತರಬೇತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ವೇಳೆಯಲ್ಲಿಯೇ ಇಚ್ಛೆಯನ್ನು ದಾಖಲಿಸಬೇಕು. ಫೆಬ್ರವರಿಯಲ್ಲಿ ಈ ತರಬೇತಿಯನ್ನು ಆಯೋಜಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಒಟ್ಟು ಮೂರು ಹಂತದ ಪರೀಕ್ಷೆ ಮೂಲಕ ನಡೆಯಲಿದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಮತ್ತು ಗುಂಪು ಚರ್ಚೆಗಳನ್ನು ನಡೆಸಲಾಗುತ್ತದೆ.
ಪೂರ್ವಭಾವಿ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷೆ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೀಸನಿಂಗ್ ಎಬಿಲಿಟಿಯ 100 ಪ್ರಶ್ನೆಗಳಿಗೆ ನೂರು ಅಂಕಗಳಿದ್ದು, ಒಂದು ತಾಸಿನಲ್ಲಿ ಉತ್ತರಿಸಬೇಕಾಗುತ್ತದೆ.ಮುಖ್ಯ ಪರೀಕ್ಷೆಯಲ್ಲಿ 170 ಪ್ರಶ್ನೆಗಳಿಗೆ 200 ಅಂಕಗಳಿದ್ದು, 3 ತಾಸು ನೀಡಲಾಗುತ್ತದೆ.
ವಿವರಣಾತ್ಮಕ ಉತ್ತರ ಬಯಸುವ 50 ಅಂಕದ ಇನ್ನೊಂದು ಪತ್ರಿಕೆಯೂ ಇರಲಿದೆ. 50 ಅಂಕದ ಪ್ರಶ್ನೆಗೆ 30 ನಿಮಿಷ ನೀಡಲಾಗುತ್ತದೆ. ಎಲ್ಲ ವಿಷಯಗಳಲ್ಲೂ ಅರ್ಹತಾ ಅಂಕಗಳನ್ನು ಗಳಿಸಬೇಕಿರುತ್ತದೆ. ತಪ್ಪು ಉತ್ತರಗಳಿಗೆ 1/4 ಅಂಕ ಕಳೆಯಲಾಗುತ್ತದೆ. ಸಂದರ್ಶನ ಹಾಗೂ ಗುಂಪು ಚಟುವಟಿಕೆಗೆ 50 ಅಂಕ ನಿಗದಿ ಮಾಡಲಾಗಿದೆ. ಒಟ್ಟಾರೆ 300 ಅಂಕಗಳಿಗೆ ಕನಿಷ್ಠ 100 ಅಂಕ ಗಳಿಸಿದವರನ್ನು ಅರ್ಹರನ್ನಾಗಿ ಪರಿಗಣಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 06-01-2025
ಅಧಿಸೂಚನೆ: Download
ಅರ್ಜಿ ಲಿಂಕ್: Apply Now