ಪಡೆದ ಸಾಲ ಕಟ್ಟದಿದ್ದರೆ ಏನೇನಾಗುತ್ತದೆ? ಸಾಲಗಾರರಿಗೆ ಕಾನೂನು ರಕ್ಷಣೆ ಏನು? Legal protection for Loan Repayment

Spread the love

Legal protection for Loan Repayment : ಸಾಲವಿಲ್ಲದೇ ಬದುಕುವುದು ಇಂದು ಕಷ್ಟಸಾಧ್ಯ. ಜೀವನದ ವಿವಿಧ ಘಟ್ಟಗಳಲ್ಲಿ ಸಾಲ ಅನಿವಾರ್ಯವಾಗುತ್ತದೆ. ದೊಡ್ಡ ಮೊತ್ತದ ಸಾಲಗಳು (Large amount of loans) ಬದುಕಿನ ದಿಕ್ಕನ್ನೇ ಬದಲಿಸಿಬಿಡಬಹುದು. ಮಾನಸಿಕ ನೆಮ್ಮದಿ, ಸಾಮಾಜಿಕ ಘನತೆಗೆ ಕುತ್ತು ತರಬಹುದು. ಮಾಡಿದ ಸಾಲ ತೀರಿಸಲಾಗದೇ ಅನೇಕರು ಆತ್ಮಹತ್ಯೆಗೆ ಶರಣಾಗಿದ್ದುಂಟು.

WhatsApp Group Join Now
Telegram Group Join Now

ಹಾಗಿದ್ದರೆ ಮಾಡಿದ ಸಾಲ ತೀರಿಸಲಾಗದೇ ಪರಿಸ್ಥಿತಿ ಎದುರಾದರೆ ಏನು ಮಾಡಬೇಕು? ಸಾಲ ತೀರಿಸದಿದ್ದರೆ ಏನಾಗುತ್ತದೆ? ಈ ಬಗ್ಗೆ ಕಾನೂನು ಏನು ಹೇಳುತ್ತದೆ? ನಿಜಕ್ಕೂ ಸಾಲ ತೀರಸದೇ ಇರುವುದು ಅಪರಾಧವೇ? ಈ ಬಗ್ಗೆ ಇಲ್ಲಿ ನೋಡೋಣ…

ಇದನ್ನೂ ಓದಿ: 1ನೇ ತರಗತಿಯಿಂದ PUC, ಪದವಿ ವಿದ್ಯಾರ್ಥಿಗಳ ವರೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | 75,000 ವರೆಗೂ ಆರ್ಥಿಕ ನೆರವು HDFC Bank Parivartan ECSS Scholarship 2024

ಇದು ಕ್ರಿಮಿನಲ್ ಅಪರಾಧವಲ್ಲ Not a criminal offence

ಮರುಪಾವತಿಸುತ್ತೇವೆಂಬ ಉದ್ದೇಶ ಇಟ್ಟುಕೊಂಡೇ ಬಹಳಷ್ಟು ಜನ ಸಾಲ ಮಾಡುತ್ತಾರೆ. ಆದರೆ ವಿವಿಧ ಕಾರಣಾಂತರಗಳಿ೦ದ ಮರುಪಾವತಿ ಕಷ್ಟವಾಗಬಹುದು. ಆಗ ಸಾಲ ಕೊಟ್ಟ ಹಣಕಾಸು ಸಂಸ್ಥೆಯವರು (financial institutions) ಮನೆ ಬಾಗಿಲಿಗೆ ಬಂದು ಗಲಾಟೆ ಮಾಡಬಹುದು, ಮನೆ-ಆಸ್ತಿ ಜೊತೆಗೆ ಮಾನ-ಮರ್ಯಾದೆ ಕೂಡ ಹರಾಜಾಗಬಹುದು ಎಂಬ ಭಯ ಇದ್ದೇ ಇರುತ್ತದೆ.

ಸಾಲ ಪಡೆದು ಪ್ರಾಮಾಣಿಕವಾಗಿ ತೀರಿಸದೇ ಇರುವುದು ತಪ್ಪೇ ಹೌದಾದರೂ ಅದು ಖಂಡಿತವಾಗಿಯೂ ಕ್ರಿಮಿನಲ್ ಅಪರಾಧವಲ್ಲ. ಸಾಲ ವಸೂಲಿಗೂ ರೀತಿ-ರಿವಾಜುಗಳಿವೆ. ಸಾಲ ತೀರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾದಾಗ ಭರವಸೆ ಕೈಚೆಲ್ಲುವ ಅವಶ್ಯಕತೆ ಇಲ್ಲ. ಕಾನೂನು ಪ್ರಕಾರ ಏನೇನಾಗಬಹುದು ಎಂಬುದನ್ನು ತಿಳಿದಿಯುವುದು ಉತ್ತಮ.

ಚೆಕ್ ಬೌನ್ಸ್ (Check Bounce) ಪ್ರಕರಣವನ್ನು ಮಾತ್ರವೇ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆಯೇ ವಿನಃ ಸಾಲ ಮರುಪಾವತಿ ಮಾಡದೇ ಇರುವುದು ಕ್ರಿಮಿನಲ್ ಅಪರಾಧವಲ್ಲ. ಈ ಕಾರಣಕ್ಕೆ ಜೈಲುಶಿಕ್ಷೆ ಇರುವುದಿಲ್ಲ. ನಿಗದಿತ ಇಎಂಐ (Equated Monthly Instalment -EMI) ಕಟ್ಟದಿರುವುದು, ಪಡೆದ ಸಾಲವನ್ನು ಪೂರ್ಣ ತೀರಿಸದೇ ಇರುವುದು ಕ್ರಿಮಿನಲ್ ಅಫೆನ್ಸ್ ಅಲ್ಲವೇ ಅಲ್ಲ ಎಂಬುವುದನ್ನು ಮೊದಲು ತಿಳಿಯಿರಿ.

Legal protection for Loan Repayment

ಇದನ್ನೂ ಓದಿ: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ… Google Pay loan upto 8 lakh

ಸಾಲ ವಸೂಲಾತಿಗೆ ಆರ್‌ಬಿಐ ಮಾರ್ಗಸೂಚಿಗಳೇನು? RBI Guidelines for Loan Recovery

Reserve Bank of India (RBI) ಇತ್ತೀಚಿನ ಮಾರ್ಗಸೂಚಿ ಪ್ರಕಾರ ಸಾಲ ನೀಡಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಅನುಸರಿಸಬೇಕಾದ ಕ್ರಮಗಳು ಈ ಕೆಳಗಿನಂತಿವೆ:

  • ಪಡೆದ ಸಾಲವನ್ನು ಸಂಪೂರ್ಣವಾಗಿ ಸಾಲ ಮರುಪಾವತಿ ಮಾಡಲಾಗದ ಗ್ರಾಹಕರಿಗೆ ಬೆದರಿಕೆ ಹಾಕುವಂತಿಲ್ಲ. ಸಾರ್ವಜನಿಕವಾಗಿ ಅವಮಾನ ಮಾಡುವಂತಿಲ್ಲ.
  • ಸಾಲ ವಸೂಲಿಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಮೊದಲು 60 ದಿನ ಮುಂಚಿತವಾಗಿ ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿ ವಿವರವಾದ ನೋಟಿಸ್ ನೀಡಬೇಕು.
  • ಸಾಲ ವಸೂಲಿಗೆ ಅಪವೇಳೆಗಳಲ್ಲಿ ಫೋನ್ ಕರೆ ಮಾಡುವುದಾಗಲಿ, ಮನೆಗೆ ಬಂದು ಪೀಡಿಸುವುದಾಗಲಿ ಮಾಡುವಂತಿಲ್ಲ. ಗೌರವಯುತವಾಗಿ ನಡೆಸಿಕೊಳ್ಳಬೇಕು.
  • ಸಾಲ ಪಡೆಯುವಾಗ ಅಡ ಇಟ್ಟಿರುವ ಚಿನ್ನವನ್ನೋ, ಮನೆಪತ್ರವನ್ನೋ, ವಾಹನವನ್ನೋ ಹರಾಜು ಹಾಕುವಾಗ, ಆಸ್ತಿಯ ಸರಿಯಾದ ಮೌಲ್ಯ ನಿಗದಿ ಮಾಡಬೇಕು.
  • ಸಾಲ ಮರುಪಾವತಿಗಾಗಿ ಗ್ರಾಹಕರ ಆಸ್ತಿ ಮಾರಿದ ಬಳಿಕ ಬಾಕಿ ಸಾಲದ ಮೊತ್ತವನ್ನು ಮಾತ್ರವೇ ಮುರಿದುಕೊಂಡು ಉಳಿದ ಹಣವನ್ನು ಗ್ರಾಹಕರಿಗೆ ನೀಡಬೇಕು.

ಇದನ್ನೂ ಓದಿ: ಪರ್ಸನಲ್ ಲೋನ್ ಪಡೆಯುವ ಮುನ್ನ ಈ ಮಹತ್ವದ ಮಾಹಿತಿ ತಿಳಿದಿರಿ… Personal Loan Important Information

ಕಾನೂನು ರಕ್ಷಣೆ ಎಷ್ಟಿದೆ?

ಪಡೆದ ಸಾಲ ತೀರಿಸಲು ಆಗದಿದ್ದಾಗ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳು ನೋಟಿಸ್ ಕಳಿಸುತ್ತವೆ. ಅವರದೇ ಆದ ರೀತಿಯಲ್ಲಿ ವಸೂಲಿಗೆ ಮುಂದಾಗುತ್ತವೆ. ಆದರೆ ಯಾವುದಕ್ಕೂ ಕಾನೂನು ಚೌಕಟ್ಟು ಮೀರುವಂತಿಲ್ಲ. ಕಾನೂನು ನೋಟಿಸ್ (Legal notice) ಕೊಟ್ಟಿದ್ದರೆ ಅದನ್ನು ಪ್ರಶ್ನಿಸಿ ಸೂಕ್ತ ಉತ್ತರ ಕೊಡಬಹುದು.

ಸಾಲ ಪಡೆದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಮ್ಯಾನೇಜರ್ ಭೇಟಿಯಾಗಿ ಮರುಪಾವತಿ ವಿಳಂಬಕ್ಕೆ ಕಾರಣವನ್ನು ಹೇಳಿ ಕಾಲಾವಕಾಶ ಕೇಳಿಕೊಳ್ಳಬಹುದು. ಹಣಕಾಸು ಸಂಸ್ಥೆಗಳಿಗೆ ಸಾಲ ವಸೂಲಾತಿ ಮುಖ್ಯವಾಗಿರುವುದರಿಂದ ನಿಮಗೆ ಮತ್ತಷ್ಟು ಕಾಲಾವಕಾಶ ನೀಡಬಹುದು. ಸಾಧ್ಯವಾದಷ್ಟು ಸಾಲ ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಸಾಲ ಮಾಡುವುದು ಉತ್ತಮ.

ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ? Personal Loans Schemes


Spread the love
WhatsApp Group Join Now
Telegram Group Join Now

Leave a Comment

error: Content is protected !!