ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಮೊಬೈಲ್ ಕರೆನ್ಸಿ ಬೆಲೆಯನ್ನು ಕಡ್ಡಾಯವಾಗಿ ಅಗ್ಗವಾಗಿಸುವ ನಿಟ್ಟಿನಲ್ಲಿ ಟ್ರಾಯ್ (Telecom Regulatory Authority of India -TRAI) ಹಲವು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳ ಅನ್ವಯ ಇನ್ಮುಂದೆ ಬಹಳಷ್ಟು ಅಗ್ಗವಾಗಲಿದೆ ಮೊಬೈಲ್ ಕರೆನ್ಸಿ ದರ.
ಡೇಟಾ ಪ್ಯಾಕ್ ರಹಿತ ಸೌಲಭ್ಯ
ಹೌದು, ಟೆಲಿಕಾಂ ಸೇವೆಗಳನ್ನು ಮತ್ತಷ್ಟು ಗ್ರಾಹಕ ಸ್ನೇಹಿ ಹಾಗೂ ಅಗ್ಗವಾಗಿಸುವ ಹಿನ್ನಲೆಯಲ್ಲಿ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (TRAI) ಹಲವು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ಮುಂದೆ Airtel, Jio, Vodafone Idea, BSNL ಸೇರಿದಂತೆ ಎಲ್ಲಾ ರೀತಿಯ ಟೆಲಿಕಾಂ ಕಂಪನಿಗಳು ಅಗ್ಗದ ಕರೆನ್ಸಿ ಸೌಲಭ್ಯ ಒದಗಿಸಬೇಕಿದೆ.
ಈಗಲೂ ದೇಶಾದ್ಯಂತ ಬೇಸಿಕ್ ಮೊಬೈಲ್ ಸೆಟ್ ಬಳಸುವ ಸುಮಾರು 15 ಕೋಟಿ ಜನರಿಗೆ ಅನುಕೂಲ ಒದಗಿಸಲು ಟ್ರಾಯ್ ಮುಂದಾಗಿದೆ. ಟ್ರಾಯ್ ಹೊಸ ನಿಯಮದ ಪ್ರಕಾರ ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಡೇಟಾ ಪ್ಯಾಕ್ ಇಲ್ಲದ, ಕೇವಲ ಕರೆ ಮತ್ತು ಎಸ್‌ಎಂಎಸ್ ಸೌಲಭ್ಯ ಹೊಂದಿರುವ ಪ್ಯಾಕೇಜ್‌ಗಳನ್ನು ಜಾರಿಗೊಳಿಸಬೇಕಿದೆ.
ಇಲ್ಲಿಯ ತನಕ ಡೇಟಾ ಫ್ಯಾಕ್ ಬೇಡದೇ ಇದ್ದರೂ, ಬೇಸಿಕ್ ಮೊಬೈಲ್ ಸೆಟ್ ಬಳಸುವವರು ಕೂಡ ಎಲ್ಲಾ ರೀಚಾರ್ಜ್ ಪ್ಲಾನ್’ಗಳಲ್ಲೂ ಕಡ್ಡಾಯವಾಗಿ ದುಬಾರಿ ಬೆಲೆ ತೆತ್ತು ಖರೀದಿಸಬೇಕಾಗಿತ್ತು. ಇನ್ಮುಂದೆ ಆ ಕಿರಿಕಿರಿ ಇಲ್ಲ. ಜೊತೆಗೆ ‘ಸ್ಪೆಷೆಲ್ ಟ್ಯಾರಿಫ್ ವೋಚರ್’ಗಳ (STV) ವ್ಯಾಲಿಡಿಟಿ ಅವಧಿಯನ್ನೂ ವಿಸ್ತರಿಸುವಂತೆ ಟ್ರಾಯ್ ನಿರ್ದೇಶಿಸಿದೆ.
8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ… Google Pay loan upto 8 lakh