Bank of Baroda Recruitment 2025 : ದೇಶಾದ್ಯಂತ ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಆಫ್ ಬರೋಡಾ (Bank of Baroda – BOB) ವಿವಿಧ ವಿಭಾಗಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಎಲ್ಲ ಹುದ್ದೆಗಳಲ್ಲೂ ಮೀಸಲಾತಿ ನಿಗದಿಪಡಿಸಲಾಗಿದ್ದು, ಪದವಿಯಿಂದ ಪಿಎಚ್.ಡಿ ವರೆಗೆ ವಿದ್ಯಾರ್ಹತೆ ಪೂರ್ಣಗೊಳಿಸಿದ ಮತ್ತು ದೇಶದ ಎಲ್ಲಿಯಾದರೂ ಸೇವೆ ಸಲ್ಲಿಸಲು ತಯಾರಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ಬ್ಯಾಂಕ್ ಆಫ್ ಬರೋಡಾದ ವಿವಿಧ ವಿಭಾಗಗಳಲ್ಲಿ ಆಫೀಸರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಚೀಫ್ ಮ್ಯಾನೇಜರ್, ಹೆಡ್, ಡೆವಪರ್, ಐಟಿ ಇಂಜಿನಿಯರ್, ಡಿಕ್ಯೂ ಅನಾಲಿಸ್ಟ್ ಸೇರಿ ಹಲವಾರು ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ವಿಭಾಗವಾರು ಹುದ್ದೆಗಳ ಸಂಖ್ಯ ಈ ಕೆಳಗಿನಂತಿದೆ:
- ಗ್ರಾಮೀಣ ಮತ್ತು ಕೃಷಿ ಬ್ಯಾಂಕಿAಗ್ : 200
- ಚಿಲ್ಲರೆ ಹೊಣೆಗಾರಿಕೆ : 450
- ಎಂಎಸ್‌ಎ೦ಇ ಬ್ಯಾಂಕಿ೦ಗ್ : 341
- ಇನ್ಸಾರ್ಮೇಷನ್ ಸೆಕ್ಯುರಿಟಿ : 09
- ಫೆಸಿಲಿಟಿ ಮ್ಯಾನೇಜ್‌ಮೆಂಟ್ : 22
- ಕಾರ್ಪೊರೇಟ್ ಆ್ಯಂಡ್ ಇನ್‌ಸ್ಟಿಟ್ಯೂಷನಲ್ ಕ್ರೆಡಿಟ್ : 30
- ಹಣಕಾಸು ಇಲಾಖೆ : 13
- ಮಾಹಿತಿ ತಂತ್ರಜ್ಞಾನ : 177
- ಎಂಟರ್ ಪ್ರೈಸ್ ಡೇಟಾ ಮ್ಯಾನೇಜ್‌ಮೆಂಟ್ ಆಫೀಸ್ : 25
ವಿದ್ಯಾರ್ಹತೆ ಎಷ್ಟಿರಬೇಕು?
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಬಿಇ ಅಥವಾ ಬಿಟೆಕ್, ಬಿಎಸ್ಸಿ, ಬಿಸಿಎ, ಎಂಬಿಎ, ಪಿಜಿಡಿಎಂ, ಎಂಸಿಎ, ಎಂಎಸ್ಸಿ, ಸಿ, ಎಂಇ ಅಥವಾ ಎಂಟೆಕ್, ಪಿಎಚ್.ಡಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಸೀನಿಯರ್ ಪೋಸ್ಟ್’ಗೆ 10 ವರ್ಷ, ಜೂನಿಯರ್ ಹುದ್ದೆಗಳಿಗೆ 3 ರಿಂದ 1 ವರ್ಷ ಸಂಬ೦ಧಪಟ್ಟ ಕ್ಷೇತ್ರದಲ್ಲಿ ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ ಎಷ್ಟು?
ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಕನಿಷ್ಠ 22 ವರ್ಷದಿಂದ ಗರಿಷ್ಠ 45 ವರ್ಷದೊಳಗಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷ ವಯೋಸಡಿಲಿಕೆ ಇರಲಿದೆ.
ವೇತನ ಶ್ರೇಣಿ ವಿವರ
ಬ್ಯಾಂಕ್ ಆಫ್ ಬರೋಡಾ ವಿವಿಧ ವಿಭಾಗದ ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು; ವಿವಿಧ ವೇತನ ಶ್ರೇಣಿ ಈ ಕೆಳಗಿನಂತಿದೆ:
- ಸ್ಕೇಲ್ 1 ಹುದ್ದೆಗಳಿಗೆ 48,480 – 85,920 ರೂ.,
- ಸ್ಕೇಲ್ 2 ಹುದ್ದೆಗಳಿಗೆ 64,820 – 93,960 ರೂ.,
- ಸ್ಕೇಲ್ 3 ಹುದ್ದೆಗಳಿಗೆ 85,920 – 1,05,280 ರೂ,
- ಸ್ಕೇಲ್ 4 ಹುದ್ದೆಗಳಿಗೆ 1,02,300 – 1,20,940 ರೂ.,
- ಸ್ಕೇಲ್ 5 ಹುದ್ದೆಗಳಿಗೆ 1,20,940 – 1,35,020 ರೂ.,
ಆಯ್ಕೆ ಪ್ರಕ್ರಿಯೆ ಹೇಗೆ?
ಆನ್‌ಲೈನ್, ಸೈಕೋಮೆಟ್ರಿಕ್ ಪರೀಕ್ಷೆ ಅಥವಾ ಆಯ್ಕೆ ಪರೀಕ್ಷೆಗೆ ಸೂಕ್ತವಾದ ಯಾವುದೇ ಪರೀಕ್ಷೆಯನ್ನು ನಡೆಸಬಹುದಾಗಿದೆ. ಇದರಲ್ಲಿ ಅರ್ಹತೆ ಪಡೆದವರಿಗೆ ಗುಂಪು ಚರ್ಚೆ, ಸಂದರ್ಶನ ನಡೆಸುವ ಮೂಲಕ ಅಯ್ಕೆ ಮಾಡಿಕೊಳ್ಳಲಾಗುತ್ತದೆ. ಪರೀಕ್ಷಾ ಕೇಂದ್ರ ಬೆಂಗಳೂರಿನಲ್ಲಿರಲಿದ್ದು; ಹುದ್ದೆಗೆ ಅಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ಪ್ರೊಬೇಷನರಿ ಅವಧಿ ಇರುತ್ತದೆ.
ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಕೆ ವಿವರ
ಆಸಕ್ತ ಅಭ್ಯರ್ಥಿಗಳು bankofbaroda.inಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಎಸ್ಸಿ/ಎಸ್ಪಿ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳು 100 ರೂ., ಸಾಮಾನ್ಯ/ ಇಡಬ್ಲ್ಯುಎಸ್/ಒಬಿಸಿ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಜನವರಿ 17ರೊಳಗೆ ಪಾವತಿಸಬೇಕು.
ಅರ್ಜಿ ಸಲ್ಲಿಕೆ ಕೊನೇ ದಿನಾಂಕ : 17-01-2025
ಅಧಿಸೂಚನೆ : Download
ಅರ್ಜಿ ಲಿಂಕ್ : Apply Now
8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ… Google Pay loan upto 8 lakh