JobsNews

SSLC ಪಾಸಾದವರಿಗೆ ಕೇಂದ್ರ ಸರ್ಕಾರಿ ಹುದ್ದೆಗಳು | ಕೇಂದ್ರ ಸರ್ಕಾರಿ ವಿವಿಧ ಇಲಾಖೆ ಹುದ್ದೆಗಳ ಪಟ್ಟಿ ಇಲ್ಲಿದೆ… Central Govt Jobs for SSLC Passed

SSLC ಪಾಸಾದವರಿಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ಸಚಿವಾಲಯಗಳಲ್ಲಿ, ಕಚೇರಿಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ಅವಕಾಶ ಇರುವಂತಹ ಹಲವು ಉದ್ಯೋಗಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ...
WhatsApp Group Join Now
Telegram Group Join Now

Central Govt Jobs for SSLC Passed : 10ನೇ ತರಗತಿ ಪಾಸಾದ ನಂತರ ಅನೇಕ ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದಾಗಿ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಇಂಥವರಿಗಾಗಿಯೇ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಾದ ರೈಲ್ವೆ ಇಲಾಖೆ (Railway Department Jobs), ರಕ್ಷಣಾ ಇಲಾಖೆ (Defence Department) ಹಾಗೂ ಕೇಂದ್ರದ ವಿವಿಧ ಸಂಸ್ಥೆಗಳು ಹಾಗೂ ಸಚಿವಾಲಯಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ.

10ನೇ ತರಗತಿ ಪಾಸಾದವರು ಕೇಂದ್ರ ಸರ್ಕಾರಿ ಉದ್ಯೋಗಗಳನ್ನು ಪಡೆಯಬೇಕಾದರೆ ಶೈಕ್ಷಣಿಕ ಅರ್ಹತೆಗಳೊಂದಿಗೆ ಹಲವು ದೈಹಿಕ ಅರ್ಹತೆಗಳು ಮತ್ತು ವಯೋಮಿತಿ ಅರ್ಹತೆಗಳನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಉದಾಹರಣೆಗೆ ನೀವು ರಕ್ಷಣಾ ಪಡೆಗಳಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ನೀವು ದೈಹಿಕ ಅರ್ಹತೆಗಳನ್ನು ಹೊಂದಿರಬೇಕು. ಕೇಂದ್ರದ ವಿವಿಧ ಇಲಾಖೆಗಳಲ್ಲಿ ಅವಕಾಶ ಇರುವಂತಹ ಹಲವು ಉದ್ಯೋಗಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ…

ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಯಾವೆಲ್ಲ ಇಲಾಖೆಗಳಲ್ಲಿ ಉದ್ಯೋಗ ಅವಕಾಶವಿದೆ?

ಭಾರತ ದೇಶದ ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿ೦ದ 10ನೇ ತರಗತಿ ಪಾಸಾದವರು ಕೇಂದ್ರ ಸರ್ಕಾರದ ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ:

  • SSC ಗ್ರೂಪ್ ‘ಡಿ’ ಹುದ್ದೆಗಳು
  • ಅಗ್ನಿವೀರ್ ಹುದ್ದೆಗಳು
  • ರೈಲ್ವೆ ಇಲಾಖೆಯ ಹುದ್ದೆಗಳು
  • ಸಿಆರ್‌ಪಿಎಫ್ ಕಾನ್’ಸ್ಟೇಬಲ್
  • ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗಳು
  • ಅಂಚೆ ಇಲಾಖೆಯ ಹುದ್ದೆಗಳು

ಕೋಳಿ ಸಾಕಣೆಗೆ 25 ಲಕ್ಷ, ಕುರಿ-ಮೇಕೆ ತಳಿ ಸಂವರ್ಧನೆಗೆ 50 ಲಕ್ಷ ಆರ್ಥಿಕ ನೆರವು National Livestock Mission NLM

1. SSC ಗ್ರೂಪ್ ‘ಡಿ’ ಹುದ್ದೆಗಳು

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ಸಚಿವಾಲಯಗಳಲ್ಲಿ, ಕಚೇರಿಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ಖಾಲಿ ಇರುವ ಹಲವಾರು ಗ್ರೂಪ್ ‘ಡಿ’ ಹುದ್ದೆಗಳಿಗೆ ನೇಮಕಾತಿಯನ್ನು ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (Staff Selection Commission) ಪ್ರತಿ ವರ್ಷವೂ ಸಾವಿರಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತದೆ. ಮೊದಲೇ ತಿಳಿಸಿದಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಅರ್ಹತೆ ಇರಬೇಕು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಟ 35 ವರ್ಷದ ವಯೋಮಿತಿಯಲ್ಲಿರಬೇಕು. ಈ ಹುದ್ದೆಗಳಿಗೆ ಆಯ್ಕೆ ಆದವರಿಗೆ ಮಾಸಿಕ ವೇತನವು ₹36,000 ದಿಂದ ಆರಂಭವಾಗುತ್ತದೆ. ಈ ಹುದ್ದೆಗಳ ನೇಮಕಾತಿಯ ಹೆಚ್ಚಿನ ಮಾಹಿತಿಗಾಗಿ ನೀವು ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ : https://ssc.gov.in

2. ಅಗ್ನಿವೀರ್ ಹುದ್ದೆಗಳು Agniveer Recruitment

ಕೇಂದ್ರದ ವಿವಿಧ ರಕ್ಷಣಾ ಪಡೆಗಳಾದ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆಗಳಲ್ಲಿ ‘ಅಗ್ನಿಪಥ್’ ಎಂಬ ಹೊಸ ಯೋಜನೆಯ ಅಡಿಯಲ್ಲಿ 10ನೇ ತರಗತಿ ಪಾಸಾದವರಿಗೆ ಅಗ್ನಿವೀರರಾಗಿ ಉದ್ಯೋಗ ಸಲ್ಲಿಸಲು ಅವಕಾಶವಿದೆ. ಈ ನೇಮಕಾತಿಯು ಸಂಬ೦ಧಪಟ್ಟ ರಕ್ಷಣಾ ಪಡೆಯು ಪ್ರತಿ ವರ್ಷವೂ ಅವಶ್ಯಕತೆಗೆ ಅನುಗುಣವಾಗಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತದೆ. ಈ ಹುದ್ದೆಗಳಿಗೆ ಆಯ್ಕೆ ಆದವರಿಗೆ ಮಾಸಿಕ ₹30,000 ದಿಂದ ₹40,000 ವರೆಗೆ ವೇತನ ಇರುತ್ತದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯೋಮಿತಿಯು ಕನಿಷ್ಠ 18 ವರ್ಷದಿಂದ 21 ವರ್ಷ ವಯೋಮಿತಿಯಲ್ಲಿರಬೇಕು. ನೇಮಕಾತಿ ಪ್ರಕ್ರಿಯೆಯು (Selection Procedure) ಮೊದಲನೇ ಹಂತದಲ್ಲಿ ಲಿಖಿತ ಪರೀಕ್ಷೆ ಹಾಗೂ ಎರಡನೆಯ ಹಂತದಲ್ಲಿ ದೈಹಿಕ ಪರೀಕ್ಷೆ ನಂತರದಲ್ಲಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಮನೆಮನೆಗೂ ಸೋಲಾರ್ ವಿದ್ಯುತ್ | ಬೆಸ್ಕಾಂ ಸೂಪರ್ ಸ್ಕೀಮ್ | ಕೂತಲ್ಲೇ ಗಳಿಸಿ ಭರ್ಜರಿ ಆದಾಯ Bescom Solar Rooftop Scheme

3. ರೈಲ್ವೆ ಇಲಾಖೆಯ ಹುದ್ದೆಗಳು Railway Department Jobs

10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಕೂಡ ವಿವಿಧ ಉದ್ಯೋಗಗಳ ಅವಕಾಶವಿದ್ದು, ಟ್ರ‍್ಯಾಕಮನ್ / ಹೆಲ್ಪರ್ ಹುದ್ದೆಗಳಿಗೆ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.

ರೈಲ್ವೆ ಇಲಾಖೆಯು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಿದಾಗ ನೀವು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಮೊದಲನೇ ಹಂತದಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ರೈಲ್ವೆ ಇಲಾಖೆಯ ನೇಮಕಾತಿಯ ಹೆಚ್ಚಿನ ಮಾಹಿತಿಗಾಗಿ ನೀವು ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ : rrbcdg.gov.in

4. ಕೇಂದ್ರ ಮೀಸಲು ಪೊಲೀಸ್ ಪಡೆ ಹುದ್ದೆಗಳು CRPF Recruitment

ಕೇಂದ್ರ ಸರ್ಕಾರದ ವಿವಿಧ ಮೀಸಲು ಪೊಲೀಸ್ ಪಡೆಗಳ ಇಲಾಖೆಗಳಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಅಸ್ಸಾಂ ರೈಫಲ್ಸ್, ಇಂಡೋ ಟಿಬೆಟಿಯನ್ ಪೊಲೀಸ್ ಪಡೆ, ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಸೇರಿದಂತೆ ಕೇಂದ್ರದ ವಿವಿಧ ಇಲಾಖೆಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯು ಬಹುತೇಕವಾಗಿ ಪ್ರತಿ ವರ್ಷವೂ ನಡೆಯುತ್ತದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿ ಅರ್ಹತೆಯೊಂದಿಗೆ ವಿವಿಧ ಧೈಹಿಕ ಅರ್ಹತೆಗಳನ್ನು ಕೂಡ ಹೊಂದಿರಬೇಕು. ನೇಮಕಾತಿಯಲ್ಲಿ ಆಯ್ಕೆ ಆದವರಿಗೆ ಮಾಸಿಕ ವೇತನವು ₹21,700 ದಿಂದ ₹69,100 ವರೆಗೆ ಇರುತ್ತದೆ. ವಯೋಮಿತಿಯು 18ರಿಂದ 23 ವರ್ಷದ ಒಳಗಿರಬೇಕು. ಈ ನೇಮಕಾತಿಯನ್ನು ಕೂಡ ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು ನಡೆಸುತ್ತದೆ.

ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ Kisan Vikas Patra-KVP

5. ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗಳು Multi Tasking Staff Recruitment 2024

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಸಂಸ್ಥೆಗಳು ಹಾಗೂ ಕಚೇರಿಗಳಲ್ಲಿ ಗ್ರೂಪ್ ‘ಸಿ ನಾನ್ ಗೆಜೆಟೆಡ್’ ಹುದ್ದೆಗಳಾದ ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗಳು ಮತ್ತು ಹವಾಲ್ದಾರ್ ಹುದ್ದೆಗಳನ್ನು ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗವು ಪ್ರತಿ ವರ್ಷವೂ ಅಧಿಸೂಚನೆ ಹೊರಡಿಸಿ ನೇಮಕಾತಿ ಮಾಡಿಕೊಳ್ಳುತ್ತದೆ.

ಗ್ರೂಪ್ ‘ಸಿ ನಾನ್ ಗೆಜೆಟೆಡ್’ ಹುದ್ದೆಗಳಿಗೆ ಕನಿಷ್ಠ 18 ವರ್ಷ ವಯೋಮಿತಿಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನವು ₹18,000 ದಿಂದ ₹56,900 ವರೆಗೆ ಇರುತ್ತದೆ.

6. ಅಂಚೆ ಇಲಾಖೆ ಹುದ್ದೆಗಳು Indian Post Office Recruitment

ಭಾರತೀಯ ಅಂಚೆ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಅವಕಾಶವಿರುವ ವಿವಿಧ ಹುದ್ದೆಗಳಾದ ಗ್ರಾಮೀಣ ಡಾಕ್ ಸೇವಕ್, ಪೋಸ್ಟಲ್ ಅಸಿಸ್ಟೆಂಟ್ ಉದ್ಯೋಗ ಪಡೆಯಲು ಅವಕಾಶವಿದೆ. ಈ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 18 ರಿಂದ 40 ವರ್ಷದ ವಯೋಮಿತಿಯಲ್ಲಿರಬೇಕು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನೇಮಕವಾದವರಿಗೆ ಮಾಸಿಕ ವೇತನವು ₹10,000 ದಿಂದ ₹24,470 ವರೆಗೆ ಇರುತ್ತದೆ. ಅಂಚೆ ಇಲಾಖೆಯ ವಿವಿಧ ಉದ್ಯೋಗ ಮಾಹಿತಿಗಳಿಗಾಗಿ ಅಂಚೆ ಇಲಾಖೆಯ ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ : https://indiapostgdsonline.gov.in/

ಕುರಿ ಮೇಕೆ ಸಾಕಾಣಿಕೆಗೆ ಸರ್ಕಾರದ ಈ ಯೋಜನೆಗಳಲ್ಲಿ ಸಿಗುತ್ತದೆ ಭರ್ಜರಿ ಸಾಲ ಮತ್ತು ಸಬ್ಸಿಡಿ | ₹5ರಿಂದ ₹10 ಲಕ್ಷ ವರೆಗೆ ಕಡಿಮೆ ಬಡ್ಡಿ ಸಾಲ ಸೌಲಭ್ಯ Sheep and Goat Farming Loan Schemes

WhatsApp Group Join Now
Telegram Group Join Now

Related Posts

error: Content is protected !!