JobsNews

ಸರ್ಕಾರಿ ಕಾಲೇಜು ಲೆಕ್ಚರರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ₹40,000 ವರೆಗೆ ಮಾಸಿಕ ವೇತನ Govt College Guest Lecturer Recruitment 2024

WhatsApp Group Join Now
Telegram Group Join Now

Govt College Guest Lecturer Recruitment 2024 : ರಾಜ್ಯದ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜು ಸೇರಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (Government First Grade Colleges) ಲಭ್ಯವಿರುವ ಹುದ್ದೆಗಳಿಗೆ ಕೌನ್ಸೆಲಿಂಗ್ (Counseling) ಮೂಲಕ ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಒಳಗೊಂಡ೦ತೆ ಅತಿಥಿ ಉಪನ್ಯಾಸಕರ (Guest Lecturer) ನೇಮಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಹಾಗೂ ಮೆರಿಟ್ ಆಧಾರದಲ್ಲಿ ಆಯ್ಕೆ ಪಟ್ಟಿ ತಯಾರಿಸಿ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯೋಜನೆ ಮಾಡುವಂತೆ ತಿಳಿಸಲಾಗಿದೆ.

ಹಿಂದಿನ ವರ್ಷ ಕರ್ತವ್ಯ ನಿರ್ವಹಿಸಿದವರು ಆಯಾ ಕಾಲೇಜಿನಲ್ಲಿಯೇ ಮುಂದುವರಿಯಲು ಇಚ್ಛಿಸಿದ್ದಲ್ಲಿ ಕೌನ್ಸೆಲಿಂಗ್ ನಡೆಸದೆ ಅವಕಾಶ ಕಲ್ಪಿಸುವಂತೆಯೂ ನಿರ್ದೇಶನ ನೀಡಿದೆ. ಅಂತಹ ಅಭ್ಯರ್ಥಿಗಳು ಕಂಟಿನ್ಯೂಷನ್ ಆಪ್ಷನ್ ಆಯ್ಕೆ ಮಾಡುವ ಮುನ್ನ ಸಂಬ೦ಧಪಟ್ಟ ಕಾಲೇಜುಗಳ ಪ್ರಾಂಶುಪಾಲರಿAದ ಕಾರ್ಯಭಾರದ ಮಾಹಿತಿ ಪಡೆದುಕೊಳ್ಳುವಂತೆ ಆಯುಕ್ತರು ತಿಳಿಸಿದ್ದಾರೆ.

ಮೊದಲನೇ ಸುತ್ತಿನ ಕೌನ್ಸೆಲಿಂಗ್ ಬಳಿಕವೂ ಉಳಿಕೆಯಾಗುವ ಹುದ್ದೆಗಳಿಗೆ ಮುಂದಿನ ಸುತ್ತಿನಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಯುಜಿಸಿ ನಿಗದಿ ಮಾಡಿರುವ ವಿದ್ಯಾರ್ಹತೆಗೆ ಅನುಗುಣವಾಗಿ ಆಯ್ಕೆ ನಡೆಸಬೇಕು ಎಂದು ತಿಳಿಸಲಾಗಿದೆ.

ಗೌರವಧನ ಎಷ್ಟು?

ಸೇವಾವಧಿ ಮತ್ತು ವಿದ್ಯಾರ್ಹತೆಗೆ ತಕ್ಕಂತೆ ಗೌರವಧನ ನಿಗದಿ ಮಾಡಬೇಕು. ಕನಿಷ್ಠ 31,000 ರೂ.ಗಳಿಂದ ಗರಿಷ್ಠ 40,000 ರೂ. ವರೆಗೆ ಗೌರವಧನ ನಿಗದಿ ಮಾಡಲಾಗಿದೆ. ಕಲಾ, ವಾಣಿಜ್ಯ ಮತ್ತು ಭಾಷಾ ವಿಷಯಗಳಿಗೆ ಗರಿಷ್ಠ 15 ಗಂಟೆ ಹಾಗೂ ವಿಜ್ಞಾನ ವಿಷಯಗಳು, ಪ್ರಾಯೋಗಿಕ ತರಗತಿಗಳಿರುವ ವಿಷಯಗಳಿಗೆ ಗರಿಷ್ಠ 19 ಗಂಟೆ ಕಾರ್ಯಭಾರ ಹಂಚಿಕೆ ಮಾಡಲಾಗುತ್ತದೆ.

ನಿಗದಿತ ಅವಧಿಗಿಂತ ಕಡಿಮೆ ಕಾರ್ಯಭಾರವಿದ್ದಲ್ಲಿ ಎಷ್ಟು ಗಂಟೆಗಳ ಕಾರ್ಯಭಾರ ಲಭ್ಯವಿದೆಯೋ ಅದಕ್ಕೆ ಅನುಗುಣವಾಗಿ ಗೌರವಧನ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.

ಪ್ರಮುಖ ದಿನಾಕಗಳು
  • ಅರ್ಜಿ ಸಲ್ಲಿಸಲು ಕೊನೆಯ ದಿನ : ಸೆಪ್ಟೆಂಬರ್ 7
  • ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟ : ಸೆಪ್ಟೆಂಬರ್ 8
  • ಅರ್ಜಿ ತಿದ್ದುಪಡಿಗೆ ಅವಕಾಶ : ಸೆಪ್ಟೆಂಬರ್ 9, 10
  • ಕಾರ್ಯಭಾರ ಪ್ರಕಟಣೆ : ಸೆಪ್ಟೆಂಬರ್ 11
  • ಮೆರಿಟ್ ಪಟ್ಟಿಯನ್ವಯ ಕಾಲೇಜು ಆಯ್ಕೆಗೆ ಕೌನ್ಸೆಲಿಂಗ್ : ಸೆಪ್ಟೆಂಬರ್ 17

ಅಧಿಸೂಚನೆ : Download
ಅರ್ಜಿ ಸಲ್ಲಿಕೆ ಲಿಂಕ್ : Apply Now

WhatsApp Group Join Now
Telegram Group Join Now

Related Posts

error: Content is protected !!